ಜೂ. ಚಿರುಗೆ ವೆಲ್ಕಂ ಎಂದ ಜಗ್ಗೇಶ್; ಎಲ್ಲವೂ ರಾಯರ ಆಶೀರ್ವಾದ!

Suvarna News   | Asianet News
Published : Oct 23, 2020, 03:17 PM IST
ಜೂ. ಚಿರುಗೆ ವೆಲ್ಕಂ ಎಂದ ಜಗ್ಗೇಶ್; ಎಲ್ಲವೂ ರಾಯರ ಆಶೀರ್ವಾದ!

ಸಾರಾಂಶ

ನಟ ಜಗ್ಗೇಶ್‌ ಟ್ಟಿಟರ್ ಮೂಲಕ ಜೂನಿಯರ್ ಚಿರುವನ್ನು  ವೆಲ್ಕಂ ಮಾಡಿದ್ದಾರೆ. ಸಂತೋಷ ಕೊಟ್ಟ ವಿಚಾರವನ್ನು ಅರ್ಜುನ್ ಸರ್ಜಾ ಜೊತೆ ಚರ್ಚಿಸಿದ್ದಾರೆ.  

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಅಕ್ಟೋಬರ್ 22ರಂದು ಬೆಳಗ್ಗೆ 11.7ಕ್ಕೆ ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸಂತೋಷ ಅವರ ಮನೆ ಮಂದಿಗೆ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಕಲಾ ಬಂಧುಗಳಿಗೆ, ಅಭಿಮಾನಿಗಳಿಗೂ ಆನಂದದ ಕ್ಷಣ. ಚಿರು ಹಾಗೂ ಧ್ರುವ ಸರ್ಜಾ ಅಭಿಮಾನಿಗಳು ಆಸ್ಪತ್ರೆ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಸಂತೋಷದ ಬಗ್ಗೆ ನಟ ಜಗ್ಗೇಶ್ ಸಹ ಟ್ಟೀಟ್ ಮಾಡಿ, ಮಗುವಿಗೆ ಆಶೀರ್ವದಿಸಿದ್ದಾರೆ.

ಚಿರು ಬಗ್ಗೆ ಮೇಘನಾ ಹೇಳಿದ ಮಾತು ಕೇಳಿ ಕಣ್ಣೀರಿಟ್ಟ ನಟ ಜಗ್ಗೇಶ್!

ಜಗ್ಗೇಶ್ ಮಾತುಗಳು:
'ಮೇಘನಾಗೆ ಗಂಡು ಮಗು ಆಯಿತು ಎಂದು ತಿಳಿದು ತುಂಬಾ ಖುಷಿಯಾಯಿತು! ನಿನ್ನೆ ಅರ್ಜುನ್ ಸರ್ಜಾ, ನಾನು ದೂರವಾಣಿಯಲ್ಲಿ ಮೇಘನಾ ಬಗ್ಗೆ ಮಾತನಾಡಿದ್ದೆವು. ಪಾಪ ಚಿರು ನೆನದು ಬಹಳ ಸಂಕಟಪಟ್ಟರು ಅರ್ಜುನ್. ದೇವರು ಕರುಣಾಮಯಿ ಮತ್ತೆ ಚಿರು ಹುಟ್ಟಿ ಬಂದ ಅನಿಸಿತು! ಮಗುವಿಗೆ ರಾಯರು ಆಯುರಾರೋಗ್ಯ ಕರುಣಿಸಿ ಶ್ರೇಷ್ಠ ಸಾಧಕನಾಗಿಸಲಿ ಎಂದು ಪ್ರಾರ್ಥಿಸುವೆ! Godbless ಮೇಘನಾ,' ಎಂದು ಬರೆದಿದ್ದಾರೆ.

 

ನಟ ಚಿರಂಜೀವಿ ತಮ್ಮ ಪ್ರೀತಿಯ ವಿಚಾರವನ್ನು ಮೇಘನಾ ಪೋಷಕರಿಗೆ ಹೇಳಲು ಕಷ್ಟ ಪಡುತ್ತಿದ್ದ ಸಂದರ್ಭದಲ್ಲಿ ಜಗ್ಗೇಶ್ ಸಹಾಯ ಮಾಡಿದ್ದರು.  ಸುಂದರ್ ರಾಜ್‌ ಹಾಗೂ ಪ್ರಮೀಳಾ ಜೋಷಾಯ್ ಜೊತೆ ಮಾತನಾಡಿ, ಅವರಿಬ್ಬರ ಮದುವೆಗೆ ಒಪ್ಪಿಸಿದ್ದರು. ಚಿರು ತಮ್ಮ ಸ್ವಂತ ಮಗನೇ. ಅವನಿಲ್ಲದೇ ಹೇಗೆ ಎಂದು, ಚಿರು ಅಗಲಿದೆ ದಿನ ಜಗ್ಗೇಶ್ ಸಹ ಕಣ್ಣೀರಿಟ್ಟಿದ್ದರು. ಚಿರು ಅಗಲಿಕೆ ಎಲ್ಲರನ್ನೂ ದುಃಖದ ಕಡಲಲ್ಲಿ ಮುಳುಗಿಸಿತ್ತು.

ಹುಟ್ಟಿದ ಕ್ಷಣವೇ ಜೂನಿಯರ್ ಚಿರು ಫೋಟೋ ರಿವೀಲ್! 

ಜೂನಿಯರ್ ಸ್ಟಾರ್‌ ಗುರುವಾರ ಹುಟ್ಟಿರುವ ಕಾರಣ ಸುಂದರ್ ರಾಜ್‌ ಹಾಗೂ ಜಗ್ಗೇಶ್ ಇವೆಲ್ಲವೂ ಸಾಯಿ ಬಾಬ ಹಾಗೂ ರಾಯರ ಆಶೀರ್ವಾದ ಎಂದು ಹೇಳುತ್ತಾರೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!