
ನಟಿ ಜಾಕಿ ಭಾವನಾ ಅವರ ಹೊಸ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಚಿತ್ರದ ಹೆಸರು ‘ಪಿಂಕ್ ನೋಟ್’. ಡಾ ಶ್ರೀ ಶಿವಮೂರ್ತಿ ಮುರಘಾ ಶರಣರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ನೀಡಲಾಯಿತು. ರಕ್ಷಣ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಎರಡು ಸಾವಿರ ರೂಪಾಯಿ ನೋಟು ಗುಲಾಬಿ ಬಣ್ಣದಲ್ಲಿ ಇರುತ್ತದೆ. ಇದನ್ನು ಇಂಗ್ಲೀಷ್‌ನಲ್ಲಿ ಪಿಂಕ್ ನೋಟ್ ಎನ್ನುತ್ತಾರೆ.
ಈಗ ಇದೇ ಹೆಸರಿನಲ್ಲಿ ಚಿತ್ರವಿದೆ. ದುಡ್ಡಿನ ಹಿಂದೆ ಹೋದಾಗ ಆಗುವ ಸಮಸ್ಯೆಗಳ ಸುತ್ತ ಈ ಚಿತ್ರ ಸಾಗುತ್ತದೆ. ದಾವಣಗೆರೆ ಮೂಲದ ರಾಜಕೀಯ ಧುರೀಣ ಹೆಚ್ ಆನಂದಪ್ಪ ಅವರು ಅಮ್ಮ ಎಂಟರ್‌ಟೈನ್‌ಮೆಂಟ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.
‘ಒಂದು ಹೊಸ ರೀತಿಯ ಕತೆಯಲ್ಲಿ ನಾನು ನಟಿಸುತ್ತಿದ್ದೇನೆ. ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು. ಮಧ್ಯಮ ವರ್ಗದ ಅಕ್ಕ, ತಂಗಿ ಪಾತ್ರ ಮಾಡುತ್ತಿದ್ದೇನೆ’ ಎನ್ನುತ್ತಾರೆ ಜಾಕಿ ಭಾವನಾ. ಚಿತ್ರದ ನಾಯಕನ ಪಾತ್ರ ಸದ್ಯದಲ್ಲೇ ಆಯ್ಕೆ ಆಗಲಿದೆ. ಪದ್ಮಜಾ ರಾವ್, ಶ್ರೀನಿವಾಸ ಪ್ರಭು, ನಿಶಾ ಮುಂತಾದವರು ಅಭಿನಯಿಸುತ್ತಿದ್ದಾರೆ. ‘ಮಹಿಳಾ ಪ್ರಧಾನ ಕತೆಯಲ್ಲಿ ಪ್ರಶಸ್ತಿ ಹಾಗೂ ಕಮರ್ಷಿಯಲ್‌ಗೆ ಬೇಕಾದ ಸನ್ನಿವೇಶಗಳನ್ನು ಸೇರಿಸಲಾಗುತ್ತಿದೆ.
Assault Case: ಭಾವನಾ ಮೆನನ್ ಬೆಂಬಲಕ್ಕೆ ನಿಂತ ತಮಿಳು ನಟ ಸೂರ್ಯ
ದಿನಪತ್ರಿಕೆಗಳಲ್ಲಿ ಬಂದ ಸುದ್ದಿಗಳನ್ನು ಚಿತ್ರಕತೆಗೆ ಬಳಸಿಕೊಳ್ಳಲಾಗಿದೆ. ಚಿಕ್ಕವರಿಂದ ಹಿಡಿದು ದೊಡ್ಡವರಿಗೂ ದುಡ್ಡಿನ ಅವಶ್ಯಕತೆ ಇರುತ್ತದೆ. ಅದರ ಹಿಂದೆ ಬಿದ್ದಾಗ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದು ಚಿತ್ರದ ಸಾರಾಂಶವಾಗಿದೆ’ ಎಂಬುದು ನಿರ್ದೇಶಕ ರಕ್ಷಣ್ ಕೊಟ್ಟಮಾಹಿತಿ. ದುಬೈನಲ್ಲಿ ಶೇ. 60ರಷ್ಟುಚಿತ್ರೀಕರಣ ನಡೆಯಲಿದೆ. ಉಳಿದಂತೆ ಬೆಂಗಳೂರು, ಉಡುಪಿ, ಮಲ್ಪೆ, ಚಿಕ್ಕಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಡಾ ವಿ ನಾಗೇಂದ್ರಪ್ರಸಾದ್ ಬರೆದಿರುವ ಮೂರು ಹಾಡುಗಳಿಗೆ ಜೆಸ್ಸಿಗಿಫ್‌್ಟಸಂಗೀತ ಸಂಯೋಜಿಸಲಿದ್ದು, ಸೆಲ್ಪಂ ಮಾದಪ್ಪ ಕ್ಯಾಮೆರಾ ಹಿಡಿಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.