
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ಹರಿ ಪ್ರಿಯಾ ತಮ್ಮ ಕೆಲಸದ ಬಗ್ಗೆ ಅಪ್ಡೇಟ್ ನೀಡುವ ಮೂಲಕ ಅಭಿಮಾನಿಗಳ ಜೊತೆ ಸಂದರ್ಶಿಸುತ್ತಲೇ ಇರುತ್ತಾರೆ. ನೀನಾಸಂ ಸತೀಶ್ ಜೊತೆ ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ವೇಳೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.
ತೆಲುಗಿನ ಎವರು ಕನ್ನಡಕ್ಕೆ ತಂದರು;ಪ್ರಮುಖ ಪಾತ್ರದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯಾ
'ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಅದ್ಭುತ ದರ್ಶನವಾಯ್ತು. ಅದು ಶುಕ್ರವಾರ ನವರಾತ್ರಿಯ ದಿನ ಇನ್ನೂ ವಿಶೇಷ. ದೇವಿ ನಿಮ್ಮೆಲ್ಲರನ್ನು ಆಶೀರ್ವಾದಿಸಲಿ. ನವರಾತ್ರಿ ಹಬ್ಬದ ಶುಭಾಶಯಗಳು' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಪೆಟ್ರೋಮ್ಯಾಕ್ಸ್ ಚಿತ್ರ ಘೋಷಿಸಿದ ಕೆಲವೇ ದಿನಗಳಲ್ಲಿ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಬಣ್ಣಮಯವಾಗಿ ಅಲಂಕಾರಗೊಂಡಿರುವ ಮೈಸೂರಿನಲ್ಲಿ ತಮ್ಮ ಮೊದಲ ಶೂಟಿಂಗ್ ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ. ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಇನ್ನು ಕೆಲ ದಿನಗಳ ಕಾಲ ಮೈಸೂರಿನಲ್ಲಿ ಚಿತ್ರೀಕರಣ ಮುಂದುವರಿಸಲಿದ್ದಾರೆ.
ತಂದೆ ಸ್ಥಾನ ತುಂಬುವ ಎಲ್ಲರಿಗೂ ನನ್ನ ನಮಸ್ಕಾರ;ಹರಿಪ್ರಿಯಾ ಹೃದಯಸ್ಪರ್ಶಿ ಲೇಖನ!
ಇನ್ನು ಮೈಸೂರಿನಲ್ಲಿ ಶೂಟಿಂಗ್ ತೆರಳುವ ಮುನ್ನ ಚಿತ್ರೀಕರಣ ವೇಳೆ ಔಟ್ ಫಿಟ್ ಸೆಲೆಕ್ಟ್ ಮಾಡಲು ತಿಳಿಯದೆ ಅಭಿಮಾನಿಗಳನ್ನು ಕೇಳಿದ್ದಾರೆ. ' ಈ ಎರಡು ಡ್ರೆಗ್ಸ್‌ಗಳಲ್ಲಿ ಯಾವುದು ಚನ್ನಾಗಿದೆ. ಯಾವುದನ್ನು ಧರಿಸಲಿ' ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ನಟಿ ಹರಿ ಪ್ರಿಯಾ ಅಭಿನಯಿಸಿರುವ ಸಿನಿಮಾಗಳು ರಿಲೀಸ್ ಆಗಲು ಸಾಲು ಸಾಲಾಗಿ ಕಾಯುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.