ಮರಾಠಿಗೆ ರಾಮಾ ರಾಮಾ ರೇ ರೀಮೇಕ್‌; ಯೂಟ್ಯೂಬ್‌ನಲ್ಲಿ 10 ಲಕ್ಷ ವೀಕ್ಷಕರು!

By Suvarna NewsFirst Published May 15, 2020, 10:02 AM IST
Highlights

ಕನ್ನಡದ ರಾಮಾ ರಾಮಾ ರೇ ಮತ್ತೊಂದು ಭಾಷೆಗೆ ರಿಮೇಕ್‌ ಆಗುತ್ತಿದೆ. ಸತ್ಯ ನಿರ್ದೇಶನದ ಈ ಚಿತ್ರ ಈಗಾಗಲೇ ತೆಲುಗಿನಲ್ಲಿ ‘ಆಟಗದರ ಶಿವ’ ಹೆಸರಿನಲ್ಲಿ ರಿಮೇಕ್‌ ಆಗಿತ್ತು. 

ಈಗ ಬಾಲಿವುಡ್‌ಗೆ ಸನಿಹವಾಗಿರುವ ಮರಾಠಿಗೆ ರಾಮಾ ರಾಮಾ ರೇ ಸಿನಿಮಾ ರೀಮೆಕ್‌ ಆಗುತ್ತಿದೆ.

ರಾಮಾ ರಾಮಾ ರೇ ಈಗ ಆನ್‌ಲೈನ್‌ನಲ್ಲೂ ಲಭ್ಯ..!

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆಯಲ್ಲೇ ಕೂತಿದ್ದ ಜನಕ್ಕೆ ತಮ್ಮ ಸಿನಿಮಾ ದೊಡ್ಡ ಮಟ್ಟದಲ್ಲಿ ತಲುಪಲಿ ಎನ್ನುವ ಕಾರಣಕ್ಕೆ ನಿರ್ದೇಶಕ ಸತ್ಯ ತಮ್ಮ ಪಿಕ್ಚರ್ಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಚಿತ್ರವನ್ನು ಪ್ರದರ್ಶನ ಮಾಡಿದ್ದರು. ಲಾಕ್‌ಡೌನ್‌ ಹೊತ್ತಿನಲ್ಲಿ ಈ ಚಿತ್ರವನ್ನು 10 ಲಕ್ಷ ಪ್ರೇಕ್ಷಕರು ವೀಕ್ಷಣೆ ಮಾಡುವ ಮೂಲಕ, 1 ಮಿಲಿಯನ್‌ ಪಟ್ಟದಕ್ಕಿಸಿಕೊಂಡಿದೆ. ಇದೇ ಯೂಟ್ಯೂಬ್‌ನಲ್ಲಿ ಚಿತ್ರವನ್ನು ನೋಡಿದ ಮರಾಠಿ ನಿರ್ಮಾಣ ಸಂಸ್ಥೆಯೊಂದು ರಾಮಾ ರಾಮಾ ರೇ ಚಿತ್ರವನ್ನು ತಮ್ಮ ಭಾಷೆಗೆ ರಿಮೇಕ್‌ ಮಾಡಲು ಆಸಕ್ತಿ ತೋರಿಸಿದೆ.

‘ನಮ್ಮ ಸತ್ಯ ಪಿಕ್ಚರ್ಸ್‌ ಸಹಯೋಗದೊಂದಿಗೆ ಮರಾಠಿ ನಿರ್ಮಾಣ ಸಂಸ್ಥೆಯೊಂದು ರಾಮಾ ರಾಮಾ ರೇ ಚಿತ್ರವನ್ನು ನಿರ್ಮಾಣ ಮಾಡಲು ಮುಂದೆ ಬಂದಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗೆ ಹೋಗುತ್ತಿರುವುದು ಖುಷಿಯ ವಿಚಾರ. ನಿರ್ಮಾಣ ಸಂಸ್ಥೆ ಯಾವುದು, ಕಲಾವಿದರು ಯಾರು ಎಂಬಿತ್ಯಾದಿ ವಿಚಾರಗಳನ್ನು ಸದ್ಯದಲ್ಲೇ ಹೇಳುತ್ತೇನೆ. ಇನ್ನೂ ಕೆಲವು ಅಂತಿಮಗೊಳ್ಳಬೇಕಿದೆ. ಲಾಕ್‌ಡೌನ್‌ ಮುಗಿದ ಮೇಲೆ ಈ ಚಿತ್ರದ ಮಾರಾಠಿ ಕೆಲಸಗಳು ಆರಂಭವಾಗಲಿವೆ’ ಎನ್ನುತ್ತಾರೆ ನಿರ್ದೇಶಕ ಸತ್ಯ.

click me!