ವಾರೆವ್ಹಾ ಇಷ್ಟೊಂದು ಏರಿಕೆನಾ? ‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡಿದ್ರೆ ಪಕ್ಕಾ ಶಾಕ್ ಆಗ್ತೀರಾ!

Published : Oct 04, 2026, 05:24 PM IST
Premada Oorali Box Office Collection

ಸಾರಾಂಶ

‘ಪ್ರೇಮದ ಊರಲಿ’ 9 ದಿನಗಳಲ್ಲಿ ₹10.72 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, 3011% ಕಲೆಕ್ಷನ್ ಏರಿಕೆ ಕಂಡಿದೆ. ₹3 ಕೋಟಿ ಬಜೆಟ್‌ನ ಈ ಸಿನಿಮಾ 257.33% ROIನೊಂದಿಗೆ 2026ರ 2ನೇ ಲಾಭದಾಯಕ ಕನ್ನಡ ಸಿನಿಮಾ ಎನಿಸಿಕೊಂಡಿದೆ.

ನ್ಯಾಷನಲ್ ಅವಾರ್ಡ್ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದ ಕನ್ನಡ ಸಿನಿಮಾ ‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಸಾಧಿಸಿದೆ. ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಭಾವನಾತ್ಮಕ ಕೌಟುಂಬಿಕ ಸಿನಿಮಾ ಕರ್ನಾಟಕದಾದ್ಯಂತ ದಿನದಿಂದ ದಿನಕ್ಕೆ ಕಲೆಕ್ಷನ್‌ನಲ್ಲಿ ಭಾರೀ ಏರಿಕೆ ಕಾಣುತ್ತಿದೆ.

ಪ್ರೇಕ್ಷಕರಿಂದ ಸಿಕ್ಕ ಅದ್ಭುತ ಮೌತ್‌ ಆಫ್‌ ದಿ ವೌತ್‌ ಪ್ರಚಾರ ಹಾಗೂ ಕುಟುಂಬ ಪ್ರೇಕ್ಷಕರಿಗೆ ಕನೆಕ್ಟ್ ಆಗಿರುವ ಕಥಾಹಂದರದಿಂದ ಸಣ್ಣ ಬಜೆಟ್‌ನ ಈ ಗ್ರಾಮೀಣ ಹಿನ್ನೆಲೆಯ ಸಿನಿಮಾ ಇದೀಗ ದೊಡ್ಡ ಕಮರ್ಷಿಯಲ್ ಹಿಟ್ ಆಗಿ ಹೊರಹೊಮ್ಮಿದೆ.

2026ರ 2ನೇ ಅತ್ಯಂತ ಲಾಭದಾಯಕ ಕನ್ನಡ ಸಿನಿಮಾ

‘ಪ್ರೇಮದ ಊರಲಿ’ ಕೇವಲ 9 ಲಕ್ಷ ರೂಪಾಯಿ ಓಪನಿಂಗ್‌ನೊಂದಿಗೆ ತನ್ನ ಥಿಯೇಟ್ರಿಕಲ್ ಜರ್ನಿ ಆರಂಭಿಸಿತ್ತು. ಆದರೆ ದಿನ ಕಳೆದಂತೆ ಸಿನಿಮಾದ ಕಲೆಕ್ಷನ್‌ನಲ್ಲಿ ಭಾರೀ ಏರಿಕೆ ಕಂಡುಬಂದಿದೆ. 9 ದಿನಗಳಲ್ಲಿ ಸಿನಿಮಾ ಭಾರತದಲ್ಲಿ ಬರೋಬ್ಬರಿ 10.72 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ.

ಕೇವಲ 3 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಈಗಾಗಲೇ 7.72 ಕೋಟಿ ರೂಪಾಯಿ ನೆಟ್ ಲಾಭ ಗಳಿಸಿದೆ. ಇದರೊಂದಿಗೆ ಸಿನಿಮಾದ ROI ಬರೋಬ್ಬರಿ 257.33% ಆಗಿದೆ. ಈ ಮೂಲಕ ‘ಪ್ರೇಮದ ಊರಲಿ’ 2026ರಲ್ಲಿ ‘ಲವ್ ಮಾಕ್ಟೇಲ್ 3’ ಬಳಿಕ ಅತಿ ಹೆಚ್ಚು ಲಾಭ ಗಳಿಸಿದ 2ನೇ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ದಿನಕ್ಕಿಂತ 3011% ಹೆಚ್ಚು ಕಲೆಕ್ಷನ್!

ಸಿನಿಮಾದ 9ನೇ ದಿನ ಅಂದರೆ ಅಕ್ಟೋಬರ್ 2ರಂದು, ಎರಡನೇ ಶನಿವಾರ ‘ಪ್ರೇಮದ ಊರಲಿ’ ಬರೋಬ್ಬರಿ 2.80 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಕೇವಲ 9 ಲಕ್ಷ ರೂಪಾಯಿ ಓಪನಿಂಗ್ ಪಡೆದಿದ್ದ ಸಿನಿಮಾದ ಮೊದಲ ದಿನದ ಕಲೆಕ್ಷನ್‌ಗೆ ಹೋಲಿಸಿದರೆ, 9ನೇ ದಿನದ ಕಲೆಕ್ಷನ್ ಬರೋಬ್ಬರಿ 3011% ಹೆಚ್ಚಾಗಿದೆ!

ಹಳ್ಳಿಯ ಹಳೆಯ ತಲೆಮಾರಿನ ತಂದೆ-ಮಗನ ಜೋಡಿ ಹಾಗೂ ತಮ್ಮದೇ ನಿಲುವು ಹೊಂದಿರುವ ಆಧುನಿಕ ಸೊಸೆಯ ನಡುವಿನ ತಲೆಮಾರುಗಳ ಸಂಘರ್ಷವನ್ನು ಸಿನಿಮಾ ಕಟ್ಟಿಕೊಡುತ್ತದೆ. ಹಾಸ್ಯ, ಕೌಟುಂಬಿಕ ಮೌಲ್ಯಗಳು ಹಾಗೂ ಭಾವನಾತ್ಮಕ ಅಂಶಗಳ ಮಿಶ್ರಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೇ ಸಿನಿಮಾದ ಕಲೆಕ್ಷನ್ ಏರಿಕೆಗೆ ಪ್ರಮುಖ ಕಾರಣವಾಗಿದೆ.

ದಿನದಿಂದ ದಿನಕ್ಕೆ ಏರಿದ ಕಲೆಕ್ಷನ್

ಬಾಕ್ಸ್ ಆಫೀಸ್‌ನಲ್ಲಿ ‘ಪ್ರೇಮದ ಊರಲಿ’ಯ ದಿನವಾರು ಕಲೆಕ್ಷನ್ ಹೀಗಿದೆ:

Day 1: ₹9 ಲಕ್ಷ

Day 2: ₹23 ಲಕ್ಷ

Day 3: ₹55 ಲಕ್ಷ

Day 4: ₹65 ಲಕ್ಷ

Day 5: ₹95 ಲಕ್ಷ

Day 6: ₹1.15 ಕೋಟಿ

Day 7: ₹1.70 ಕೋಟಿ

Day 8: ₹2.60 ಕೋಟಿ

Day 9: ₹2.80 ಕೋಟಿ

ಒಟ್ಟು: ₹10.72 ಕೋಟಿ

IMDbಯಲ್ಲೂ ಭರ್ಜರಿ ರೇಟಿಂಗ್

‘ಪ್ರೇಮದ ಊರಲಿ’ ಸಿನಿಮಾಗೆ IMDbಯಲ್ಲಿ 9 ರೇಟಿಂಗ್ ದೊರೆತಿದೆ. ಸಿನಿಮಾದ ಅಧಿಕೃತ ಸಾರಾಂಶದ ಪ್ರಕಾರ, ದೂರದ ಹಳ್ಳಿಯಲ್ಲಿ ವಾಸಿಸುವ ವಿಚಿತ್ರ ಸ್ವಭಾವದ ತಂದೆ-ಮಗನ ಜೀವನಕ್ಕೆ ವಿಭಿನ್ನ ಚಿಂತನೆಯ ಸೊಸೆ ಪ್ರವೇಶಿಸಿದ ಬಳಿಕ ನಡೆಯುವ ಅನಿರೀಕ್ಷಿತ ಘಟನೆಗಳೇ ಚಿತ್ರದ ಕಥಾಹಂದರ. ಸಮಾಜದ ತೀರ್ಪು ಹಾಗೂ ಕುಟುಂಬದೊಳಗಿನ ಬದಲಾವಣೆಗಳನ್ನು ಸಿನಿಮಾ ಹಾಸ್ಯ ಮತ್ತು ಭಾವನಾತ್ಮಕವಾಗಿ ಕಟ್ಟಿಕೊಡುತ್ತದೆ. 2026ರಲ್ಲಿ ‘ಲವ್ ಮಾಕ್ಟೇಲ್ 3’ ಮತ್ತು ‘ಕರಾವಳಿ’ ಬಳಿಕ ಯಶಸ್ಸು ಕಂಡ ಮೂರನೇ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನೂ ‘ಪ್ರೇಮದ ಊರಲಿ’ ಪಡೆದುಕೊಂಡಿದೆ.

‘ಪ್ರೇಮದ ಊರಲಿ’ ಬಾಕ್ಸ್ ಆಫೀಸ್ ಸಾರಾಂಶ

India Net Collection: ₹10.72 ಕೋಟಿ

India Gross Collection: ₹12.64 ಕೋಟಿ

ಬಜೆಟ್: ₹3 ಕೋಟಿ

ನೆಟ್ ಲಾಭ: ₹7.72 ಕೋಟಿ

ROI: 257.33%

ವರ್ಡಿಕ್ಟ್: ಸೂಪರ್ ಹಿಟ್

ಇನ್ನು ಕೇವಲ 9 ಲಕ್ಷ ರೂಪಾಯಿ ಓಪನಿಂಗ್‌ನೊಂದಿಗೆ ಆರಂಭವಾಗಿದ್ದ ‘ಪ್ರೇಮದ ಊರಲಿ’ ಇದೀಗ 9ನೇ ದಿನಕ್ಕೆ 2.80 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮಟ್ಟಕ್ಕೆ ಬೆಳೆದಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರೇಕ್ಷಕರ ಬೆಂಬಲ ಹಾಗೂ ಬಲವಾದ ಮೌತ್‌ ಆಫ್‌ ದಿ ವೌತ್‌ ಕಾರಣದಿಂದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮತ್ತಷ್ಟು ದೊಡ್ಡ ದಾಖಲೆಗಳನ್ನು ಬರೆಯುವ ನಿರೀಕ್ಷೆ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೈತರ ಕಲ್ಯಾಣದ ಕಥೆ, ಬಿಗ್ ಬಜೆಟ್ ಸಿನಿಮಾ: ‘ಚೀತಾ’ದಲ್ಲಿ ಕಾರ್ಮಿಕನಾಗಿದ್ದೇಕೆ ಪ್ರಜ್ವಲ್ ದೇವರಾಜ್?
'ರಚಿತಾ ರಾಮ್ ನಗರ' ಆಯ್ತಾ ರಾಜರಾಜೇಶ್ವರಿ ನಗರ?! ಈ ನಟಿಯ ವಿರುದ್ಧ ಜನರು ಕೂಗಾಡುತ್ತಿರೋದೇಕೆ?