
ವೈರಸ್ ಸದ್ದು ಅಡಗುವ ತನಕ ‘ಗಾಳಿಪಟ-2’ ಚಿತ್ರಕ್ಕೆ ವಿದೇಶಿ ಪ್ರಯಾಣದ ಶೂಟಿಂಗ್ ಭಾಗ್ಯ ದೊರಯಲ್ಲ. ಯೋಗರಾಜ್ ಭಟ್ ನಿರ್ದೇಶಿಸಿ, ಸೂರಜ್ ಪ್ರೊಡಕ್ಷನ್ನಲ್ಲಿ ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಈಗಾಗಲೇ 32 ದಿನಗಳ ಕಾಲ ಕುದುರೆಮುಖ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.
ಕುದುರೆಮುಖದಲ್ಲಿ 'ಗಾಳಿಪಟ' ಹಾರಿಸಿದ ಗಣೇಶ್-ದಿಗಂತ್-ಪವನ್!
‘ಇನ್ನೂ 30 ದಿನ ಶೂಟಿಂಗ್ ಬಾಕಿ ಇದೆ. ಆದರೆ, ಕೊರೋನಾ ಎಫೆಕ್ಟ್ನಿಂದ ಶೂಟಿಂಗ್ ನಿಲ್ಲಿಸಿದ್ದೇವೆ. ಈಗ ಶೂಟಿಂಗ್ ಆಗಿರುವ ಬಗ್ಗೆ ಹೇಳಬೇಕು ಎಂದರೆ ‘ಗಾಳಿಪಟ’ ಚಿತ್ರದ ಒಂದು ಸಣ್ಣ ಎಳೆ ಪಾರ್ಟ್-2ನಲ್ಲೂ ಮುಂದುವರೆಯಲಿದೆ. ಈ ಕಾರಣಕ್ಕೆ ಮೊದಲ ಭಾಗದಲ್ಲಿ ಇದ್ದ ಪ್ರಮುಖ ಕಲಾವಿದರೂ ‘ಗಾಳಿಪಟ-2’ ಚಿತ್ರದಲ್ಲೂ ಮುಂದುವರೆದಿದ್ದಾರೆ. ಅನಂತ್ನಾಗ್, ಪದ್ಮಜಾ ರಾವ್, ಸುಧಾ ಬೆಳವಾಡಿ, ರಂಗಾಯಣ ರಘು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಏಳು ಹಾಡುಗಳನ್ನು ಒಳಗೊಂಡಿದ್ದು, ಒಂದು ಕಲರ್ಫುಲ್ ಆಲ್ಬಂ ಸಿನಿಮಾ ಆಗಲಿದೆ. ನನ್ನ ಮತ್ತು ಗಣೇಶ್ ಕಾಂಬಿನೇಷನ್ನ ಈ ಸಿನಿಮಾ ಅದ್ದೂರಿಯಾಗಿ ಮೂಡಿ ಬರಲು ಕಾರಣ ನಿರ್ಮಾಪಕ ರಮೇಶ್ ರೆಡ್ಡಿ ಕಾರಣ’ ಎನ್ನುತ್ತಾರೆ ಯೋಗರಾಜ್ ಭಟ್.
ಗಾಳಿಪಟ-2 ಚಿತ್ರತಂಡ ವಿದೇಶಕ್ಕೆ ತೆರಳಬೇಕಿತ್ತು. ಈ ತಯಾರಿ ಮಾಡಿಕೊಳ್ಳುವಾಗ ಸಿಂಪಲ್ ಸುನಿ ನಿರ್ದೇಶನದಲ್ಲಿ ‘ಸಖತ್’ ಒಂದು ಶೆಡ್ಯೂಲ್ ಮುಗಿಸಿದೆ. ಆದರೆ, ವಿದೇಶಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ಕೊರೋನಾ ಎಫೆಕ್ಟ್ ಶುರುವಾಗಿದೆ. ಹೀಗಾಗಿ ಚಿತ್ರೀಕರಣ ಮುಂದೂಡಿದ್ದೇವೆ.- ಗಣೇಶ್
ವೈಭವಿ ಶ್ಯಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್ ಚಿತ್ರದ ನಾಯಕಿಯರು. ನಿಶ್ವಿಕಾ ನಾಯ್ಡು ವಿಶೇಷ ಪಾತ್ರಧಾರಿ.
'ಗಾಳಿಪಟ 2'ಗೆ ನಾಯಕಿಯರು ಬದಲಾದರು!
‘ಹಿಂದಿ ಸೇರಿದಂತೆ ನನ್ನ ನಿರ್ಮಾಣದಲ್ಲಿ ಮೂರು ಚಿತ್ರಗಳು ಇವೆ. ಈ ಪೈಕಿ ರಮೇಶ್ ಅರವಿಂದ್ ಅವರೇ ನಟಿಸಿ, ನಿರ್ದೇಶಿಸುತ್ತಿರುವ ‘100’ ಚಿತ್ರಕ್ಕೆ ಶೂಟಿಂಗ್ ಮುಗಿದಿದೆ. ಕೊರೋನಾ ಹೋದ ಮೇಲೆ ಈ ಚಿತ್ರ ತೆರೆಗೆ ಬರಲಿದೆ. ಇದೇ ಚಿತ್ರದ ಹಿಂದಿ ಅವತರಣಿಕೆ ಚಿತ್ರಕ್ಕೆ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ‘ಗಾಳಿಪಟ-2’ ಚಿತ್ರ ವಿದೇಶಕ್ಕೆ ಹೋಗಬೇಕಿತ್ತು. ಸದ್ಯಕ್ಕೆ ನಿಲ್ಲಿಸಲಾಗಿದೆ. ನಿರ್ಮಾಪಕನಾಗಿ ತುಂಬಾ ತೃಪ್ತಿ ಮತ್ತು ಖುಷಿಯಿಂದ ಮಾಡಿರುವ ಚಿತ್ರಗಳಿವು.’ ಎಂಬುದು ನಿರ್ಮಾಪಕ ರಮೇಶ್ ರೆಡ್ಡಿ ನಂಗ್ಲಿ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.