ಒಂದು ದಿನ ಮುಂಚೆನೇ ಮಾಜಿ ಪ್ರಧಾನಿಯಿಂದ ಅಪ್ಪು ಬರ್ತಡೇ ವಿಷ್!

By Suvarna News  |  First Published Mar 16, 2020, 10:55 AM IST

ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬಕ್ಕೆ ಮಾಜಿ ಪ್ರಧಾನಿಯಿಂದ ಅಡ್ವಾನ್ಸ್‌ ಬರ್ತಡೇ ವಿಶ್.....


ಸ್ಯಾಂಡಲ್‌ವುಡ್ ಪವರ್ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮಾರ್ಚ್‌ 17ರಂದು 45ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕೊರೋನಾ ಹಿನ್ನೆಲೆ ಹುಟ್ಟು ಹಬ್ಬ ಆಚರಣೆಯನ್ನು ರದ್ದು ಮಾಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಹಾಗೂ ಅಭಿಮಾನಿಗಳಿಂದ  ಶುಭಾಶಯಗಳು ಹರಿದು ಬರುತ್ತಿದೆ.

ಪ್ರತಿ ವರ್ಷವೂ ಅಭಿಮಾನಿಗಳ ಜೊತೆ ಹುಟ್ಟು ಆಚರಿಸಿಕೊಳ್ಳುವ ಪವರ್ ಸ್ಟಾರ್ ಈ ವರ್ಷ ಮಾರಣಾಂತಿಕ ಕೊರೋನಾ ವೈರಸ್‌ ಪರಿಣಾಮ ಹೆಚ್ಚಾಗುತ್ತಿರುವ ಕಾರಣ ಅಭಿಮಾನಿಗಳು ಮನೆ ಬಳಿ ಬರದಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಒಂದು ದಿನ ಮುಂಚೆನೇ ಮಾಜಿ ಪ್ರಧಾನಿ ದೇವೇಗೌಡರ ಶುಭಾಶಯ ತಿಳಿಸಿದ್ದಾರೆ..

Tap to resize

Latest Videos

ಸಣ್ಣ ವಯಸ್ಸಲ್ಲೇ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪುನೀತ್ ಮಗಳು ದೃತಿ...

'ಪುನೀತ್‌ ರಾಜ್‌ಕುಮಾರ್ ಅವರು ಇವತ್ತು 45ನೇ ವರ್ಷದ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವಂತ ಈ ಸಂದರ್ಭದಲ್ಲಿ ಅವರ ಬಗ್ಗೆ ನಾನು ವಿಶೇಷವಾಗಿ ಅವರ ಚಲನಚಿತ್ರರಂಗದಲ್ಲಿ ಅವರ ಯಶಸ್ಸನ್ನು ಕಣ್ಣಿಂದ ನೋಡುತ್ತಿದ್ದೇವೆ. ಚಿಕ್ಕ ವಯಸ್ಸಿನಲ್ಲಿ ತಂದೆ ಜೊತೆ ಹಿರಣ್ಯ ಕಶ್ಯಪ ಜೊತೆ ಪ್ರಹ್ಲಾದನಾಗಿ ತಂದೆ ಮಕ್ಕಳು ಮಾಡಿ ಅದ್ಭುತ  ಕೀರ್ತಿ ಗಳಿಸಿದ್ದಾರೆ. ಚಿಕ್ಕ ಬಾಲಕನಾಗಿದ್ದಾಗಲೆ ತನ್ನ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದರು ' ಎಂದು ಹೇಳುವ ಮೂಲಕ ಶುಭಕೊರಿದ್ದಾರೆ.

 

Former Prime Minister of India Shri Wished PowerStar on his 45 Birthday pic.twitter.com/zmB582Owts

— 🇮🇳Cults of Rajavamsha💛❤️ (@RajaRatnaAppu)
click me!