ಫಿಲ್ಮ್ ಚೇಂಬರ್ ಅಂಗಳದಲ್ಲಿ ‘ಮೀಟು’ ವಾರ್! ನಮ್ಮಲ್ಲಿಲ್ಲ ಮೀಟು.. ಹಿರಿಯರಲ್ಲಿ ಮಾತಿನೇಟು!

Published : Sep 17, 2024, 05:47 PM ISTUpdated : Sep 17, 2024, 05:49 PM IST
 ಫಿಲ್ಮ್ ಚೇಂಬರ್ ಅಂಗಳದಲ್ಲಿ ‘ಮೀಟು’ ವಾರ್! ನಮ್ಮಲ್ಲಿಲ್ಲ ಮೀಟು.. ಹಿರಿಯರಲ್ಲಿ ಮಾತಿನೇಟು!

ಸಾರಾಂಶ

ಕಮೀಟಿ ಬೇಕಾ..ಬೇಡ್ವಾ..ಚೇಂಬರ್ v/s ಫೈರ್... ಲೈಂಗಿಕ ದೌರ್ಜನ್ಯ ಒಂದೇ ಅಲ್ಲ ಬೇರೆ ಬೇರೆ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು......

ಕನ್ನಡ ಸಿನಿರಂಗದಲ್ಲಿ ಜಸ್ಟೀಸ್ ಹೇಮಾ ಮಾದರಿಯ ಕಮೀಟಿ ರಚನೆ ಆಗಬೇಕು ಅನ್ನೋ ಕೂಗು ಎದ್ದಿರೋದು ನಿಮಗೆ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ಆಗ್ತಿರೋ ಶೋಷಣೆಗಳ ಬಗ್ಗೆ ತನಿಖೆಯಾಗಲಿ ಅಂತ ಫೈರ್ ಸದಸ್ಯರು ಸಿಎಂಗೆ ಮನವಿ ಸಲ್ಲಿಸಿದ್ದಾರೆ. ಸದ್ಯ ಮಹಿಳಾ ಆಯೋಗ ಕೂಡ ಈ ವಿಚಾರಕ್ಕೆ ಎಂಟ್ರಿಯಾಗಿದ್ದು, ಫಿಲ್ಮ್ ಚೇಂಬರ್‌ನಲ್ಲಿ ಈ ಕುರಿತ ಚರ್ಚೆ ನಡೆದಿದೆ. ಚಿತ್ರರಂಗದ ಕಲಾವಿದರು-ತಂತ್ರಜ್ಞರೆಲ್ಲಾ ಸೇರಿ ನಡೆಸಿದ ಮೀಟು ಮೀಟಿಂಗ್‌ನಲ್ಲಿ ಏನೆಲ್ಲಾ ನಡೀತು....

ಯೆಸ್! ಮಲಯಾಳಂ ಚಿತ್ರರಂಗದಲ್ಲಿ ಜಸ್ಟೀಸ್ ಹೇಮಾ ವರದಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಈ ಕುರಿತ ಚರ್ಚೆ ಶುರುವಾಯ್ತು. ಫೈರ್ ಕಮೀಟಿ ಸದಸ್ಯರು ಸಿಎಂ ಭೇಟಿ ಮಾಡಿ, ನಮ್ಮ ಚಿತ್ರೋದ್ಯಮದಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೀತಾ ಇದೆ. ಆ ಕುರಿತ ತನಿಖೆಗೆ  ಜಸ್ಟೀಸ್ ಹೇಮಾ ಮಾದರಿಯಲ್ಲೇ ಒಂದು ಕಮೀಟಿಯನ್ನ ಮಾಡಿ ಅಂತ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಮಹಿಳಾ ಆಯೋಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು, ಚಿತ್ರರಂಗದಲ್ಲಿನ ಮಹಿಳಾ ಶೋಷಣೆ ಬಗ್ಗೆ ತ್ವರಿತವಾಗಿ ಚರ್ಚೆ ನಡೆಸಿ ಅಂತ ಸೂಚಿಸಿತ್ತು. ಅಂತೆಯೇ  ಫಿಲ್ಮ್ ಚೇಂಬರ್‌ನಲ್ಲಿ ಮೀಟು ಕುರಿತ ಮೀಟಿಂಗ್ ನಡೆಯಿತ್ತು.

ಕೃಷ್ಣ ಜನ್ಮ ಸ್ಥಾನ ಸೇರಿದ ನಟ ದರ್ಶನ್ ಮತ್ತು ನಿರ್ಮಾಪಕ ಮುನಿರತ್ನ; 'ಕುರುಕ್ಷೇತ್ರ'ದಲ್ಲಿ ಆಗಿದ್ದ ಎಡವಟ್ಟು ಏನು?

ಫಿಲ್ಮ್ ಚೇಂಬರ್ ಸದಸ್ಯರು, ಪ್ರಧಾದಿಕಾರಿಗಳ ಜೊತೆಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಸಭೆಯಲ್ಲಿ  ಭಾಗಿಯಾಗಿದ್ದರು. ಹಿರಿಯ ನಟಿ ತಾರಾ, ಸಂಜನಾ, ಅನಿತಾ ಭಟ್ , ಕವಿತಾ ಲಂಕೇಶ್,  ಭಾವನಾ ರಾಮಣ್ಣ , ನೀತು ಶೆಟ್ಟಿ , ವಾಣಿಶ್ರೀ ಸೇರಿದಂತೆ ಅನೇಕ ಕಲಾವಿದೆಯರು ಭಾಗಿಯಾಗಿದ್ದರು. ಫಿಲ್ಮ್ ಚೇಂಬರ್ ಕಡೆಯಿಂದ ಫೈರ್ ಸದಸ್ಯರಿಗೆ ಆಹ್ವಾನ ಏನೂ ಇರಲಿಲ್ಲ. ಆದರೆ ಫೈರ್ ಅಧ್ಯಕ್ಷೆಯೂ ಆಗಿರೋ ನಿರ್ದೇಶಕಿ ಕವೀತಾ ಲಂಕೇಶ್ ಸಭೆಯಲ್ಲಿ ಭಾಗಿಯಾಗಿ ತಾವು ಸರ್ಕಾರದ ಮುಂದೆ ಕಮೀಟಿ ರಚನೆಗೆ ಒತ್ತಾಯಿಸಿದ್ದು ಯಾಕೆ ಅನ್ನೋದನ್ನ ವಿವರಿಸಿದ್ದರು.

ಸೈಮಾದಲ್ಲಿ ಕಾಟೇರನ ಕಮಾಲ್; ಹೀರೋ ಜೈಲಿನಲ್ಲಿದ್ದರೆ ಇಡೀ ಸಿನಿಮಾ ತಂಡ ಸಂಭ್ರಮದಲ್ಲಿದ್ದಾರೆ!

ರಾಕ್ ಲೈನ್ ವೆಂಕಟೇಶ್, ಸಾ ರಾ ಗೋವಿಂದು, ಪ್ರವೀಣ್  ಸೇರಿದಂತೆ ಸಭೆಯಲ್ಲಿ ಭಾಗಿಯಾದ ಹಲವು ಹಿರಿಯ ನಿರ್ಮಾಪಕರು ನಮ್ಮ ಉದ್ಯಮದಲ್ಲಿ ಮೀಟು ನಂಥದ್ದೆಲ್ಲಾ ಇಲ್ಲವೇ ಇಲ್ಲ. ಇಂಥಾ ಆರೋಪ ಮಾಡಿ ಕನ್ನಡ ಚಿತ್ರರಂಗದ 9 ದಶಕಗಳ ಇತಿಹಾಸಕ್ಕೆ ಕಪ್ಪು ಚುಕ್ಕೆ ಆಗಬೇಡಿ ಅಂತ ಮನವಿ ಮಾಡಿದ್ದರ. ಆದರೆ ಅನೇಕ ನಟಿಯರು ಶೋಷಣೆ ಅಂದ್ರೆ ಬರೀ ಲೈಂಗಿಕ ಶೋಷಣೆ ಅಲ್ಲ ನಾನಾ ರೂಪದಲ್ಲಿ ಸ್ತ್ರೀಯರ ಮೇಲೆ ದೌರ್ಜನ್ಯ ನಡೀತಾ ಇದೆ ಅನ್ನೋ ಮಾತು ಹೇಳಿದ್ದರ ಈ ವಿಚಾರವಾಗಿ ಬಿಸಿ ಬಿಸಿ ಚರ್ಚೆ ಕೂಡ ನಡೀತು. ಎಷ್ಟೋ ಸಾರಿ ಕಾಡುಗಳಲ್ಲಿ, ದೂರದ ಜಾಗಗಳಲ್ಲಿ ಶೂಟಿಂಗ್ ನಡೆಯುತ್ತೆ. ಆಗ ನಟಿಯರ ಸೇಫ್ಟಿ ಬಗ್ಗೆ ಕಾಳಜಿ ವಹಿಸೋದಿಲ್ಲ. ಖಾಸಗಿ ದೃಶ್ಯಗಳಲ್ಲಿ ನಟಿಸೋವಾಗ ನಟಿಯರ ಭಾವನೆಗೆ ಬೆಲೆ ಕೊಡೋದಿಲ್ಲ. ಶೂಟಿಂಗ್ ಸ್ಥಳದಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಕೂಡ ಇರೋದಿಲ್ಲ. ಇಂಥವುಗಳು ಕೂಡ ಶೋಷಣೆಯೇ. ಸೋ ಇವೆಲ್ಲವನ್ನೂ ಸರಿ ಪಡಿಸೋಕೆ ಒಂದು ಕಮೀಟಿ ಆಗಬೇಕು ಅಂತ ಮಹಿಳಾ ಆಯೋಗದ ಪರ ನಾಗಲಕ್ಷ್ಮೀ ಒತ್ತಾಯಿಸಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?