ರವೀನಾ ಟಂಡನ್‌ಗೆ ವಿಶೇಷವಾಗಿ ವಿಶ್ ಮಾಡಿದ ಪ್ರಶಾಂತ್ ನೀಲ್

By Suvarna News  |  First Published Oct 27, 2021, 3:35 PM IST

'ರಮಿಕಾ ಸೇನ್​ ಪಾತ್ರವನ್ನು ನೀವು ಮಾಡಿರುವ ರೀತಿ ಮತ್ತಾರೂ ಮಾಡಲಾರರು. ನಾನು ಕೆಲಸ ಮಾಡಿದ ಅತ್ಯಂತ ಮೋಜಿನ ಮತ್ತು ಬೆದರಿಕೆಯ ಪ್ರಧಾನಿ ನೀವು' ಎಂದು ಪ್ರಶಾಂತ್ ನೀಲ್, ರವೀನಾ ಟಂಡನ್‌ಗೆ ವಿಶ್ ಮಾಡಿದ್ದಾರೆ.
 


ಸ್ಯಾಂಡಲ್‌ವುಡ್‌ನ (Sandalwood) ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್ 2' (KGF 2) ಚಿತ್ರಕ್ಕಾಗಿ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾದು ಕುಳಿತಿದೆ. ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿರುವ ಈ ಚಿತ್ರದಲ್ಲಿ ರಾಕಿ ಭಾಯ್ ಯಶ್, ಅಧೀರ ಸಂಜಯ್ ದತ್ (Sanjay Dutt) ನಂತರ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಪಾತ್ರ ಕೂಡ ಬಹಳ ಕುತೂಹಲ ಹೆಚ್ಚಿಸಿತ್ತು.  ಪ್ರಧಾನಿ ಪಾತ್ರದಲ್ಲಿ ನಟಿಸಿರುವ ರವೀನಾ ಚಿತ್ರೀಕರಣದ ಸಣ್ಣ ವಿಡಿಯೋ ಈ ಹಿಂದೆ ವೈರಲ್ ಆಗಿತ್ತು.

'ಕೆಜಿಎಫ್ 2'ಗೆ ಕಾಯುತ್ತಿದ್ದವರಿಗೆ ಸಿಕ್ತು ಗುಡ್‌ನ್ಯೂಸ್, ಬಿಡುಗಡೆ ದಿನಾಂಕ ಫಿಕ್ಸ್!

Tap to resize

Latest Videos

ನಿನ್ನೆಯಷ್ಟೇ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel), ರವೀನಾ ಟಂಡನ್ ಅವರ ಪೋಸ್ಟರನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು. ಹೌದು! 'ಕೆಜಿಎಫ್ 2' ಚಿತ್ರದಲ್ಲಿ ರವೀನಾ ಟಂಡನ್, ಪ್ರಧಾನಿ ರಮೀಕಾ ಸೇನ್ (Ramika Sen) ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್, ಮೊದಲಿಗೆ ನಟಿ ರವೀನಾ ಟಂಡನ್​ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದು, 'ರಮಿಕಾ ಸೇನ್​ ಪಾತ್ರವನ್ನು ನೀವು ಮಾಡಿರುವ ರೀತಿ ಮತ್ತಾರೂ ಮಾಡಲಾರರು. ನಾನು ಕೆಲಸ ಮಾಡಿದ ಅತ್ಯಂತ ಮೋಜಿನ ಮತ್ತು ಬೆದರಿಕೆಯ ಪ್ರಧಾನಿ ನೀವು' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ.
 


ಕನ್ನಡದಲ್ಲಿ 'ಉಪೇಂದ್ರ' (Upendra) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ ರವೀನಾ ಟಂಡನ್‌, ಎರಡು ದಶಕದ ಬಳಿಕ 'ಕೆಜಿಎಫ್ 2' ಚಿತ್ರದ ರಮೀಕಾ ಸೇನ್‌ ಪಾತ್ರದಲ್ಲಿ ಮತ್ತೆ ಕನ್ನಡ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. ಮತ್ತು ರವೀನಾ ಟಂಡನ್ 47ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಚಿತ್ರೋದ್ಯಮದ ಗಣ್ಯರು, ಅಭಿಮಾನಿಗಳು  ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಇನ್ನು 'ಕೆಜಿಎಫ್ 2' ಚಿತ್ರದ ಹಾಡುಗಳ ರೈಟ್ಸ್ ಅನ್ನು ಲಹರಿ ಸಂಸ್ಥೆ (Lahari Music Company) ದಾಖಲೆ ಮೊತ್ತಕ್ಕೆ ಖರೀದಿಸಿದೆ.

ಕೆಜಿಎಫ್ 2 ಸ್ಯಾಟ್‌ಲೈಟ್‌ ಹಕ್ಕು ಖರೀದಿಸಿದ ಜೀ ಸಂಸ್ಥೆ

'ಕೆಜಿಎಫ್ 2'​ ಸಿನಿಮಾ ಮುಂದಿನ ವರ್ಷ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ತೆರೆ ಕಾಣಲಿದ್ದು, ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು (Vijay Kiragandur) ನಿರ್ಮಿಸಿದ್ದಾರೆ. ರವಿ ಬಸ್ರೂರ್ ಸಂಗಿತ ಸಂಯೋಜನೆ ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ತೆಲುಗು ನಟ ರಾವ್ ರಮೇಶ್ ಮತ್ತು  ಬಾಲಿವುಡ್ ನಟ ಸಂಜಯ್ ದತ್ ಚಿತ್ರದ ಆಕರ್ಷಣೆಯಾಗಿದ್ದಾರೆ. ಅಧೀರನಾಗಿ ಸಂಜಯ್ ದತ್ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿ ಸಿನಿರಸಿಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

click me!