ಬಾಲ್ಡ್ ಸಮಸ್ಯೆಯನ್ನು ಔಷಧಿಯಿಲ್ಲದೇ ವಾಸಿ ಮಾಡಿ ಕೊಂಡ್ರಂತೆ ಪವನ್ ಕುಮಾರ್

Published : Mar 31, 2022, 05:18 PM IST
ಬಾಲ್ಡ್ ಸಮಸ್ಯೆಯನ್ನು ಔಷಧಿಯಿಲ್ಲದೇ ವಾಸಿ ಮಾಡಿ ಕೊಂಡ್ರಂತೆ ಪವನ್ ಕುಮಾರ್

ಸಾರಾಂಶ

ಅಲೋಪೆಸಿಯಾ ಸಮಸ್ಯೆ ಎದುರಿಸಿದ ಕನ್ನಡದ ನಿರ್ದೇಶಕ ಪವನ್ ಕುಮಾರ್. ಯಾವ ಔಷಧಿಯನ್ನೂ ತೆಗೆದುಕೊಳ್ಳದೆ ಗುಣ ಮಾಡಿಕೊಂಡ ಕಥೆ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಲೂಸಿಯಾ, U ಟರ್ನ್‌ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಪವನ್ ಕುಮಾರ್ ಅಲೋಪೆಸಿಯಾ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆಸ್ಕರ್ 2022ರಲ್ಲಿ ಹಾಸ್ಯ ನಟ ಕ್ರಿಶ್‌ ರಾಕ್‌, ಜಡಾ ಪಿಂಕೆಟ್‌ ಸ್ಮಿತ್ ಎದುರಿಸುತ್ತಿರುವ ಆಲೋಪೆನಿಯಾ ಬಗ್ಗೆ ಹಾಸ್ಯ ಮಾಡಿದ್ದಕ್ಕೆ ಹಾಲಿವುಡ್ ನಟ ವಿಲ್ ಸ್ಮಿತ್ ಕಪಾಳಮೋಕ್ಷ ಮಾಡಿದ್ದರು. ಅಂದಿನಿಂದ ಆಲೋಪೆನಿಯಾಗೆ ಒಳಗಾಗಿರುವವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮದೇ ರೀತಿಯಲ್ಲಿ ಧ್ವನಿ ಎತ್ತುತ್ತಿದ್ದಾರೆ. ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದರಿಂದ ಅನುಭವಿಸುವ ಮಾನಸಿಕ ಯಾತನೆಯನ್ನೂ ಹೊರ ಹಾಕುತ್ತಿದ್ದಾರೆ.

ಪವನ್ ಮಾತು:
'ಸೆಪ್ಟೆಂಬರ್ 22, 2014ರಲ್ಲಿ ನಾನೊಂದು ವಿಚಿತ್ರವಾದ ಘಟನೆ ಎದುರಿಸಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ತಲೆ ಕೂದಲಿನ ಪ್ಯಾಚ್‌ ಉದುರಿ ಹೋಗಿತ್ತು. ಡಾಕ್ಟರ್‌ ಅನ್ನು ಸಂಪರ್ಕಿಸಿದಾಗ, ಇದು ಅಲೋಪೆಸಿಯಾ ಎಂದು ಹೇಳಿದ್ದರು. ಅಲೋಪೆಸಿಯಾ ಅಂದ್ರೆ ನಮ್ಮ ದೇಹದಲ್ಲಿರುವ ಆಟೋ ಇಮ್ಯೂನ್‌ ರೆಸ್ಪಾನ್ಸ್‌ ನಮ್ಮ ಕೂದಲ ಕಿರುಚೀಲ ಅಥವಾ folliclesನ ಫಾರಿನ್ ಬಾಡಿ ಎಂದುಕೊಂಡು ಅವುಗಳನ್ನು ಕೊಲ್ಲುತ್ತದೆ. 

ಡಾಕ್ಟರ್ ನನಗೊಂದು ಸ್ಟಿರಾಯ್ಡ್ ಇಂಜೆಕ್ಷನ್‌ ಅನ್ನು ತಲೆ ಸ್ಕ್ಯಾಲ್ಪ್‌‌ಗೆ ಕೊಡಬೇಕು ಎಂದು ಹೇಳಿದರು. ಆದರೆ ನಾನು ಅದನ್ನು ತೆಗೆದುಕೊಳ್ಳಲಿಲ್ಲ.

36 ತಿಂಗಳಿಗೆ ಮಾತ್ರೆಯೊಂದು ಇದೆ. ಒಂದು ತಿಂಗಳಿಗೆ 5 ಸಾವಿರ ಆಗುತ್ತದೆ ಎಂದರು. ಔಷಧಿ ತೆಗೆದುಕೊಳ್ಳದಿದ್ದರೆ ಸಂಪೂರ್ಣವಾಗಿ ಕೂದಲು ಉದುರುತ್ತದೆ ಎಂದೂ ಹೇಳಿ ಮತ್ತೊಂದು ಆಪ್ಷನ್ ಕೊಟ್ಟಿದ್ದರು. ನನ್ನ ಪುಟ್ಟ ಕಂದಮ್ಮಳ ಹತ್ತಿರವೂ ಹೋಗಬಾರದು ಎಂದು ಹೇಳಿಬಿಟ್ಟರು.

ಬರೋಬ್ಬರಿ 84 ದಿನ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ವಾಸವಿದ್ದ ಹಕ್ಕಿ..!

ನಾನು ಯೋಚನೆ ಮಾಡಿದೆ. ಈಗೇನು ನಾನು ಬಾಲ್ಡ್ ಆಗುವೆ ಅಷ್ಟೆ ಅಲ್ವಾ? ನನ್ನ ಕೂದಲು ಬೆಳೆಸುವ ಬದಲು ಅದೇ 5 ಸಾವಿರನ  SIPs ಆಗಿ ಬಳಸಿಕೊಳ್ಳುವೆ ಎಂದು ನಿರ್ಧರಿಸಿದೆ. ನಾನು ಯಾವುದೇ ಔಷಧಿ ತೆಗೆದುಕೊಳ್ಳಲಿಲ್ಲ. ಹಲವು ವಾರಗಳ ನಂತರ ಅದೇ ಸುಧಾರಿಸಿಕೊಂಡಿತ್ತು. ಈಗ ಯಾವ ಪ್ಯಾಚ್‌ ನನಗಿಲ್ಲ.  ಇದರ ಬಗ್ಗೆ ತಮಾಷೆ ಮಾಡಿ ನಗುವವರನ್ನು ನೋಡಿದ್ದೀನಿ.

ಜನರು ನಮ್ಮ ಬಗ್ಗೆ ತಮಾಷೆ ಮಾಡಿದಾಗ ನಮ್ಮ ಮೆಡಿಕಲ್ ಕಂಡಿಷನ್‌ ಬಗ್ಗೆ ಯೋಚಿಸಿ ಮನನೊಂದು ಕೊಳ್ಳುತ್ತೀವಿ. ಹೀಗಾಗಿರುವುದಕ್ಕೆ ಜಡ್ಜ್‌ ಮಾಡುವ ಬದಲು  so what ಎಂದು ಹೇಳಿದರೆ ಅದೆಷ್ಟೋ ಬೆಟರ್ ಫೀಲ್ ಆಗುತ್ತದೆ. ಇದೆಲ್ಲಾ ಓಕೆ ಅನಿಸುತ್ತದೆ. ಪ್ರಕೃತಿ ನಮಗೆ ಕೊಟ್ಟಿರುವ ನ್ಯಾಚುರಲ್ ಸಮಸ್ಯೆ ಇದು. ನಾವು ಮಾಡಬೇಕಾಗಿದ್ದು ಒಂದೇ. ಅದನ್ನು ಒಪ್ಪಿಕೊಳ್ಳುವುದು, ಇರುವುದಲ್ಲೇ ಬೆಸ್ಟ್‌ ಆಗಿರುವುದು.

ಈ ಹೋಂ ಮೇಡ್ Hair Mask ಬಳಸಿ ಕೂದಲಿನ ಸಮಸ್ಯೆಗೆ ಬೈ ಬೈ ಹೇಳಿ

ಈ ರೀತಿಯ ವಿಚಾರಗಳನ್ನು ನಾವು normalise ಮಾಡಬೇಕು. ಮೆಡಿಕಲ್ ಕಂಡೀಷನ್‌ ಎಲ್ಲಾ ಒಂದು ರಿಯಾಲಿಟಿ. ಅದರಿಂದ ನಮ್ಮನ್ನು ಜಡ್ಜ್‌ ಮಾಡಬಾರದು ಅಥವಾ ಮಾಡಿದೆ ಡಿಸ್ಟರ್ಬ್ ಆಗಬಾರದು. ನಾವು ಸಾವಿನ ದಡದ ಕಡೆ ನಡೆದುಕೊಂಡು ಹೋಗುತ್ತಿದ್ದೀವಿ. ಈ ಮೆಡಿಕಲ್ ಕಂಡಿಷನ್ ಎಲ್ಲಾ ಒಂದು ರೀತಿ ಆ ಜರ್ನಿಗೆ catalyst ಇದ್ದ ಹಾಗೆ. 

ನೀವು ಅಲೋಪೆಸಿಯಾ ಎದುರಿಸುವವರಾಗಿದ್ದರೆ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ ನಿಮ್ಮ ಕೂದಲಷ್ಟೇ ಉದುರುವುದು ಇದರಿಂದ ನನ್ನ ದಿನ ನಿತ್ಯ ಜೀವನದಲ್ಲಿ ಏನೂ ಬದಲಾವಣೆ ಆಗುವುದಿಲ್ಲ. ಸುಮ್ಮನೆ ನಕ್ಕುಬಿಡಿ. "well now I just have more face area to be kissed" ಎಂದು ಹೇಳಿ. ನಮಗಿರುವ ಕಡಿಮೆ ಸಮಯದಲ್ಲಿ ಸಂತೋಷವಾಗಿರೋಣ ಎಲ್ಲದರ ಬಗ್ಗೆ ನಗುತ್ತಿರೋಣ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?