Actor Chetan: ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ!

Published : Mar 31, 2022, 03:00 PM IST
Actor Chetan: ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ!

ಸಾರಾಂಶ

ಬ್ರಿಟಿಷರ ವಿರುದ್ಧ ಹೋರಾಡುತ್ತ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತಾದರೆ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

ಬೆಂಗಳೂರು (ಮಾ.31): ಟಿಪ್ಪು ಸುಲ್ತಾನ್‌ (Tipu Sultan) ಕುರಿತಾದ ಪಾಠಗಳನ್ನು ಶಾಲಾ ಮಕ್ಕಳ ಪಠ್ಯ ಪುಸ್ತಕದಿಂದ (Text Book) ತೆಗೆಯ ಬೇಕು ಎಂಬ ವಿಚಾರ ರಾಜ್ಯದಲ್ಲಿ ಚರ್ಚೆಯಾಗುತ್ತಿದೆ. ಟಿಪ್ಪು ಸುಲ್ತಾನ್ ಮತಾಂಧ, ಆತನ ಪಾಠವನ್ನು ವಿದ್ಯಾರ್ಥಿಗಳು ಕಲಿಯುವ ಅಗತ್ಯವಿಲ್ಲ ಅಂತ ಕೆಲ ಹಿಂದೂಪರ ಸಂಘಟನೆಗಳು, ಹಿಂದೂ ಪರ ಹೋರಾಟಗಾರರು ಆಗ್ರಹಿಸಿದ್ದಾರೆ. ಈ ಮಧ್ಯೆ ನಟ ಚೇತನ್ (Chetan) ಇದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೌದು! ಶಾಲಾ ಮಕ್ಕಳ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಪಾಠ್ ಕೈಬಿಡುವ ವಿಚಾರಕ್ಕೆ ನಟ ಚೇತನ್ (Chetan) ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಿಣಾ ಸಮಿತಿ ಮುಸ್ಲಿಂ ಆದ ಯಾವುದೇ ವ್ಯಕ್ತಿಯನ್ನ ಗುರಿಯಾಗಿಸುವುದರ ಮೂಲಕ ನಮ್ಮ ಇತಿಹಾಸಗಳನ್ನ ಹಿಂದುತ್ವಗೊಳಿಸುತ್ತಿದೆ‌. ಟಿಪ್ಪು ಇನ್ನು ಮುಂದೆ ಸ್ವಾತಂತ್ರ್ಯ ಹೋರಾಟಗಾರ ಎಂದು ಕರೆಯುವಂತಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುತ್ತ ಯುದ್ಧ ಭೂಮಿಯಲ್ಲಿ ಮಡಿದ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಅಂತಾದರೆ ರಾಣಿ ಚೆನ್ನಮ್ಮ (Kittur Rani Chennamma) ಮತ್ತು ಸಂಗೊಳ್ಳಿ ರಾಯಣ್ಣ (Sangolli Rayanna) ಕೂಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ನಟ ಚೇತನ್ ತಮ್ಮ ಫೇಸ್‌ಬುಕ್ (Facebook) ಖಾತೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಚೇತನ್ ಬೆಂಬಲಿಗರು, ಅಭಿಮಾನಿಗಳು ಬೆಂಬಲ ಸೂಚಿಸಿದ್ದು, ಇನ್ನು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.

Anti Conversion Bill: ಬೊಮ್ಮಾಯಿ ಒಬ್ಬ ಕೋಮುವಾದಿ ಸಿಎಂ: ನಟ ಚೇತನ್‌

ಗನ್‌ಮ್ಯಾನ್‌ ಭದ್ರತೆ ಮರಳಿಸಿ: ತಮ್ಮಿಂದ ಹಿಂಪಡೆದಿರುವ ಗನ್‌ಮ್ಯಾನ್‌(Gunman) ಭದ್ರತೆಯನ್ನು ಮತ್ತೆ ಕಲ್ಪಿಸುವಂತೆ ಕೋರಿ ರಾಜ್ಯ ಗೃಹ ಮಂತ್ರಿ ಆರಗ ಜ್ಞಾನೇಂದ್ರ (Araga Jnanendra) ಅವರಿಗೆ ನಟ ಚೇತನ್‌ ಮನವಿ ಮಾಡಿದ್ದಾರೆ.  ನಗರದಲ್ಲಿ ಸಚಿವರನ್ನು ಭೇಟಿಯಾಗಿ ಭದ್ರತೆ ಸಂಬಂಧ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರಕರ್ತೆ ಗೌರಿ ಲಂಕೇಶ್‌ (Gauri Lankesh) ಹತ್ಯೆ (Murder) ಬಳಿಕ ನನಗೆ ನಾಲ್ಕೂವರೆ ವರ್ಷಗಳಿಂದ ಗನ್‌ ಮ್ಯಾನ್‌ ಭದ್ರತೆ ನೀಡಲಾಗಿತ್ತು. ಆದರೆ ಇತ್ತೀಚಿಗೆ ನಾನು ಜೈಲಿಗೆ ಹೋದ ಬಳಿಕ ಭದ್ರತೆ ಹಿಂಪಡೆದಿದ್ದಾರೆ ಎಂದರು. 

ಈ ವಿಚಾರವಾಗಿ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ. ನನಗೆ ನಿರಂತರ ಬೆದರಿಕೆಗಳ ಹಿನ್ನೆಲೆಯಲ್ಲಿ ಇಬ್ಬರು ಗನ್‌ ಮ್ಯಾನ್‌ಗಳನ್ನು ಭದ್ರತೆ (Security) ಕೊಡುವ ಬಗ್ಗೆ ಗುಪ್ತದಳದ ವರದಿ ಇದೆ. ಹೀಗಿದ್ದರೂ ಇದ್ದ ಗನ್‌ಮ್ಯಾನ್‌ ಭದ್ರತೆಯನ್ನು ಹಿಂಪಡೆದಿರುವುದು ಸಮಂಜಸವಲ್ಲ. ಈ ಸಂಗತಿಯನ್ನು ಸಚಿವರಿಗೆ ಮನದಟ್ಟು ಮಾಡಿದ್ದೇನೆ. ಬೆದರಿಕೆಗಳ ಬಗ್ಗೆ ಸಾಕ್ಷಿ ಸಮೇತ ವಿವರಿಸಿದ್ದೇನೆ. ನನ್ನ ಮನವಿಗೆ ಸಚಿವರು ಸ್ಪಂದಿಸಿದ್ದಾರೆ ಎಂದರು. ನನಗೆ ಅಭದ್ರತೆ ಇದೆ. ಹಾಗಾಗಿ ನನಗೆ ಗನ್‌ ಮ್ಯಾನ್‌ ಸೌಲಭ್ಯ ಅಗತ್ಯವಾಗಿ ಕಲ್ಪಿಸಬೇಕಿರುವುದು ಸರ್ಕಾರದ (Government of Karnataka) ಕರ್ತವ್ಯ ಕೂಡಾ ಆಗಿದೆ. 

chetan ahimsa detained ಪೊಲೀಸರಿಂದ ನಟ ಚೇತನ್ ಅಪಹರಣ, ಗಂಭೀರ ಆರೋಪ ಮಾಡಿದ ಪತ್ನಿ ಮೇಘಾ!

ಈ ಸಂಬಂಧ ಎರಡು ದಿನಗಳ ಹಿಂದೆ ನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ವಿನಂತಿಸಿದೆ. ಆದರೆ ಭದ್ರತೆ ಸಂಬಂಧ ಗುಪ್ತದಳದ ಅಧಿಕಾರಿಗಳನ್ನು ಕಾಣುವಂತೆ ಆಯುಕ್ತರು ಹೇಳಿದ್ದರು. ಹಾಗಾಗಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಬೆದರಿಕೆ ಸಂದೇಶಗಳ ಸಂಬಂಧ ಯಾವುದೇ ನಿರ್ದಿಷ್ಟ ಸಂಘಟನೆ ಅಥವಾ ವ್ಯಕ್ತಿ ಬಗ್ಗೆ ದೂರು ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಪೊಲೀಸ್‌ ರಕ್ಷಣೆ (Police Protection) ಸಿಗದೆ ಹೋದರೂ ನಿಮಗೆ ನಾವು ಭದ್ರತೆ ನೀಡುವಂತೆ ಎಂದು ರಾಜ್ಯ ವಿವಿಧೆಡೆಯಿಂದ ಜನರು ಬಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ (Karnataka) ಇವತ್ತು ಸಮಾಜ ಪರಿವರ್ತನೆ ಬಗ್ಗೆ ಮಾತನಾಡದೆ ಕೋಮುವಾದದ ಕುರಿತು ಮಾತನಾಡುವ ರಾಜಕಾರಣಿಗಳಿಗೆ ರಕ್ಷಣೆ ಕೊಡಲಾಗುತ್ತದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಗಡಿಪಾರು-ಅತಿರೇಕದ ಮಾತುಗಳು: ಇತ್ತೀಚಿಗೆ ನನ್ನ ಗಡಿಪಾರು (Exile) ವಿಚಾರವಾಗಿ ಆಧಾರ ರಹಿತವಾದ ಅತಿರೇಕ ಮಾತುಗಳು ಕೇಳು ಬರುತ್ತಿವೆ. ಈ ನಿಟ್ಟಿನಲ್ಲಿ ಯಾವುದೇ ಸಾಕ್ಷ್ಯಗಳು ಸಿಗುತ್ತಿಲ್ಲ. ಹಾಗಾಗಿ ಗಡಿಪಾರು ಸಂಗತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಚೇತನ್‌ ಹೇಳಿದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?