ದರ್ಶನ್ ಮೂವಿ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಎಂಥವ್ರು? ಜಗತ್ತು ಕಾಣದ ಮತ್ತೊಂದು ಮುಖ ಬಯಲು..!

Published : Oct 17, 2024, 12:22 PM ISTUpdated : Oct 17, 2024, 12:42 PM IST
ದರ್ಶನ್ ಮೂವಿ 'ಕಲಾಸಿಪಾಳ್ಯ' ಡೈರೆಕ್ಟರ್ ಓಂ ಪ್ರಕಾಶ್ ರಾವ್ ಎಂಥವ್ರು? ಜಗತ್ತು ಕಾಣದ ಮತ್ತೊಂದು ಮುಖ ಬಯಲು..!

ಸಾರಾಂಶ

ಓಂ ಪ್ರಕಾಶ್ ರಾವ್ ಅವರು ತಮ್ಮ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ನೆನಪಿಸಿಕೊಂಡು ಬಹಿರಂಗ ಪಡಿಸಿದ್ದಾರೆ. ಅದೊಂದು ದಿನ ಕಾರಲ್ಲಿ ಒಬ್ಬರು ನನ್ನ ಮುಂದೆ ಬಂದು ನಿಂತರು. ನಾನಾಗ 'ಎಮರ್ಜನ್ಸಿ' ಸಿನಿಮಾ ಶೂಟಿಂಗ್ ಮಾಡ್ತಾ ಇದ್ದೆ..

ಕಲಾಸಿಪಾಳ್ಯ, ಎಕೆ 47, ಲಾಕಪ್ ಡೆತ್ ಸೇರಿದಂತೆ ಕನ್ನಡಕ್ಕೆ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕರಾದ ಓಂ ಪ್ರಕಾಶ್ ರಾವ್ (Om Prakash Rao) ಅವರು ಕೆಲವು ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಯೂಟ್ಯೂಬ್ ನಿರೂಪಕೊಂದಿಗೆ ಮಾತನಾಡಿರುವ ಓಂ ಪ್ರಕಾಶ್ ರಾವ್ ಅವರು ತಮ್ಮ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ನೆನಪಿಸಿಕೊಂಡು ಬಹಿರಂಗ ಪಡಿಸಿದ್ದಾರೆ. ಈ ಮೂಲಕ ಓಂ ಪ್ರಕಾಶ್‌ ರಾವ್ ಅವರ ಪ್ರಾಮಾಣಿಕತೆ ಹಾಗೂ ನೇರ ನಡೆ-ನುಡಿ ಜಗಜ್ಜಾಹೀರಾಗಿದೆ. ಹಾಗಿದ್ದರೆ ಅವರು ಅದೇನು ಹೇಳಿದ್ದಾರೆ ನೋಡಿ.. 

ಅದೊಂದು ದಿನ ಕಾರಲ್ಲಿ ಒಬ್ಬರು ನನ್ನ ಮುಂದೆ ಬಂದು ನಿಂತರು. ನಾನಾಗ 'ಎಮರ್ಜನ್ಸಿ' ಸಿನಿಮಾ ಶೂಟಿಂಗ್ ಮಾಡ್ತಾ ಇದ್ದೆ.. ಅವರು ನನ್ನ ನಿರ್ದೇಶನದ 'ಲಾಕಪ್ ಡೆತ್' ಸಿನಿಮಾ ನೋಡಿ ಆ ಸಿನಿಮಾ ಹಾಗೂ ನನ್ನ ಅಭಿಮಾನಿ ಆಗಿರೋರಂತೆ. ಬಂದವರೇ 'ಸರ್, ನಾನು ನಿಮ್ ಜೊತೆ ಮಾತಾಡ್ಬೇಕು' ಅಂದ್ರು. ಅವ್ರು ಲಾಕಪ್ ಡೆತ್‌ಗೆ ಅದೆಷ್ಟು ಫ್ಯಾನ್ ಆಗ್ಬಿಟ್ಟಿದ್ರು ಅಂದ್ರೆ ಆ ಸಿನಿಮಾ ಬಗ್ಗೆ ನನ್ ಮುಂದೆನೇ ಬಹಳಷ್ಟು ಹೊಗಳಿದ್ರು.. 

ಅಪ್ಪು ಫ್ಯಾನ್ಸ್‌ ಪೇಜ್‌ನಲ್ಲಿ ಶಂಕರ್‌ ನಾಗ್, ಏನೆಲ್ಲಾ ಪೋಸ್ಟ್ ಮಾಡಿದಾರೆ ನೋಡಿ!

ಬಳಿಕ ಅವರು ನನ್ನ ಹತ್ರ 'ಸರ್, ನಾನು ಸಿನಿಮಾ ಹೀರೋ ಆಗ್ಬೇಕು.. ಅದಕ್ಕಾಗಿ ನಾನು ಏನ್ ಬೇಕಾದ್ರೂ ಕೊಡ್ತೀನಿ..' ಅಂತ ಹೇಳ್ಬಿಟ್ಟು ಕಾರ್ ಡಿಕ್ಕಿ ತೆಗೆದ್ರು.. ಅದ್ರಲ್ಲಿ ಒಂದ್ ಬ್ಯಾಗಲ್ಲಿ ನೂರು ರೂಪಾಯಿಗಳ ಬಹಳಷ್ಟು ಕಟ್ಟುಗಳು.. 'ಅದನ್ನು ನೋಡಿದ್ರೆ ಗೊತ್ತಾಗುತ್ತೆ, ಅದ್ರಲ್ಲಿ ತುಂಬಾ ಹಣ ಇದೆ. ನಾನು ಅವ್ರನ್ನ ನೋಡಿ, 'ಏನ್ ಮಾಡ್ತಾ ಇದ್ದೀರಾ? ಇದು ತುಂಬಾ ತಪ್ಪು.. ನೀವು ದೊಡ್ಡ ತಪ್ಪು ಮಾಡ್ತಾ ಇದ್ದೀರಾ.. ಹೀಗೆಲ್ಲಾ ಮಾಡೋಕೆ ಹೋಗ್ಬೇಡಿ.. ಬೇರೆ ಯಾರಿಗಾದ್ರೂ ಹೀಗೆ ಕೇಳಿದ್ರೆ, ನೀವು ಸಮಸ್ಯೆನಲ್ಲಿ ಸಿಕ್ಕಿಹಾಕಿಕೊಳ್ತೀರಾ' ಅಂತ ಹೇಳಿದೆ. 

ಬಳಿಕ ಅವರ ತಂದೆಯ ಫೋನ್ ನಂಬರ್ ತಗೊಂಡು ಅವರಿಗೆ ಫೋನ್ ಮಾಡಿ 'ಸರ್, ನಿಮ್ ಮಗ ತುಂಬಾ ಹುಮ್ಮಸ್ಸಿನಿಂದ ಬಂದ್ಬಿಟ್ಟಿದಾರೆ. ದಯವಿಟ್ಟು ಅವ್ರನ್ನ ಮನೆಗೆ ಕರ್ಕೊಳ್ಳಿ.. ಬೇಜಾರು ಮಾಡ್ಕೋಬೇಡಿ.. ಹಾಗೆ, ಹೀಗೆ ಅಂತ ಹೇಳಿದೆ.. ಅವ್ರ ತಂದೆ ತುಂಬಾ ಅಪ್ರಸಿಯೇಟ್ ಮಾಡಿದ್ರು.. ಈಗ್ಲೂ ನನ್ನ ಅವ್ರು ಗೌರವಿಸ್ತಾರೆ.. ಎಂತ ಟೈಮಲ್ಲಿ ನೀವು ಎಷ್ಟು ಚೆನ್ನಾಗಿ ಹೇಳಿ ನೋಡ್ಕೊಂಡ್ರಿ ಅಂತ.. ' 

ತಮಿಳು ಚಿತ್ರರಂಗದಿಂದ ನಟ ವಿಷ್ಣುವರ್ಧನ್ ದೂರ ಉಳಿಯಲು ಯಾರು ಕಾರಣ? ಸೀಕ್ರೆಟ್ ರಿವೀಲ್..!

ಕೆಲವು ಕಡೆ ಕೆಲವರಿಗೆ ದುಡ್ಡು ಕೊಟ್ರೆ ಕೆಲಸ ಆಗಬಹುದು. ಆದ್ರೆ, ಹಲವರಿಗೆ ಮೋಸ ಆಗುತ್ತೆ..' ಎಂದಿದ್ದಾರೆ ಓಂ ಪ್ರಕಾಶ್ ರಾವ್. ಎಲ್ಲದಕ್ಕೂ ಚಿತ್ರರಂಗವನ್ನು ದೂಷಿಸುವುದು ತಪ್ಪು. ಎಲ್ಲೋ ಕೆಲವರು ಕೆಲವು ವಿಷಯಗಳಲ್ಲಿ ತಪ್ಪು ಮಾಡಿರಬಹುದು. ಕೆಲವರಿಗೆ ಅನ್ಯಾಯ ಆಗಿರಬಹುದು. ಆದರೆ ಚಿತ್ರರಂಗವೇ ಹಾಗೆ, ಹೀಗೆ ಅನ್ನೋದರಲ್ಲಿ ಯಾವುದೇ ಹುರುಳಿಲ್ಲ..' ಎಂದಿದ್ದಾರೆ ಓಂ ಪ್ರಕಾಶ್ ರಾವ್. 

ಒಟ್ಟಿನಲ್ಲಿ, ಬಹಳಷ್ಟು ಆಕ್ಷನ್ ಸಿನಿಮಾಗಳು ಸೇರಿದಂತೆ ಕನ್ನಡದಲ್ಲಿ ಹಲವು ಸ್ಟಾರ್ ನಟರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ ಓಂ ಪ್ರಕಾಶ್ ರಾವ್. 90ರ ದಶಕದ ಬಳಿಕ ಬರೋಬ್ಬರಿ 10-15 ವರುಷಗಳ ಕಾಲ ಕನ್ನಡದಲ್ಲಿ ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಅವರು ಸಾಕಷ್ಟು ಹವಾ ಕ್ರಿಯೇಟ್ ಮಾಡಿದ್ದರು. ಇತ್ತೀಚೆಗೆ ಅವರು ಅಷ್ಟಾಗಿ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ. 'ಬಿಗ್ ಬಾಸ್ ಕನ್ನಡ'ದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ಸದ್ಯ ಅವರು ಅಷ್ಟಾಗಿ ಸುದ್ದಿಯಲ್ಲಿ ಇಲ್ಲ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Amulya: ಮುದ್ದು ಮಕ್ಕಳು, ಗಂಡನ ಜೊತೆ ಪೋಸ್ ಕೊಟ್ಟ ಗೋಲ್ಡನ್ ಗರ್ಲ್
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?