ಪ್ರೇಕ್ಷಕರು ನನಗಿಂತ ಬುದ್ಧಿವಂತರೆಂಬ ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದೇನೆ: ನಾಗತಿಹಳ್ಳಿ ಚಂದ್ರಶೇಖರ್‌

Published : Aug 30, 2026, 11:35 PM IST
Nagathihalli Chandrashekhar

ಸಾರಾಂಶ

‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಟ್ರೇಲರ್ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವತ್ಸ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅದು ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಕೋತ್ಸವ ಭವನ. ಬಹಳಷ್ಟು ಜನ ಸಭಿಕರು ತಮ್ಮ ಕುಟುಂಬ ಸಮೇತರಾಗಿ ಅಲ್ಲಿಗೆ ಹಾಜರಿ ಹಾಕಿದ್ದರು. ಮಕ್ಕಳು, ವಯಸ್ಸಾದವರು, ನಡು ವಯಸ್ಸಿನವರು, ಹುಡುಗ- ಹುಡುಗಿಯರು ಹೀಗೆ ಎಲ್ಲಾ ವರ್ಗದ ಜನರನ್ನು ಒಂದು ಕೂಡ ಸೇರಿದ್ದು ನಾಗತಿಹಳ್ಳಿ ಚಂದ್ರಶೇಖರ್‌ ಅವರ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ. ಡಾಲಿ ಧನಂಜಯ, ಪ್ರೊ.ಕೃಷ್ಣೇಗೌಡ, ಮಂಡ್ಯ ರಮೇಶ್‌, ರಂಗಾಯಣ ರಘು ಮುಂತಾದ ಗಣ್ಯರ ಜೊತೆಗೆ ಗಾಯಕಿ ಸಂಗೀತಾ ಕಟ್ಟಿ ಅವರ ತಂಡವೂ ಹಾಜರಿದ್ದು, ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಇದರ ಜೊತೆಗೆ ಚಿತ್ರದ ನಾಯಕರಾದ ನಿರೂಪ್‌ ಭಂಡಾರಿ, ಪೃಥ್ವಿ ಅಂಬಾರ್‌ ಹಾಗೂ ನಾಯಕಿ ಶಾನ್ವಿ ಶ್ರೀವತ್ಸ ಅವರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌, ‘ಕೆಲವೇ ದಿನಗಳಲ್ಲಿ ನನ್ನ ಸಿನಿಮಾ ತೆರೆಗೆ ಬರುತ್ತಿದೆ. ಈಗ ಹೆರಿಗೆ ಭಯ, ನಿರೀಕ್ಷೆ, ತಲ್ಲಣವನ್ನು ಹೊತ್ತುಕೊಂಡಿದ್ದೇನೆ. ಅಮೆರಿಕಾದ 30 ವರ್ಷಗಳ ಪಯಣದಲ್ಲಿ ಎಷ್ಟೋ ಕತೆಗಳು ನನ್ನಲ್ಲಿ ಹುಟ್ಟಿಕೊಂಡವು. ಈಗ ಸಮಯ ಬಂದಿದೆ. ಅದಕ್ಕೆ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಮಾಡಿದ್ದೇನೆ. ನನ್ನ ಪ್ರಕಾರ ಪ್ರೇಕ್ಷಕರು ನನಗಿಂತ ಬುದ್ಧಿವಂತರು, ಸೂಕ್ಷ್ಮ ಮನಸ್ಸಿನವರು. ಆ ಎಚ್ಚರಿಕೆಯಿಂದಲೇ ನಾನು ಈ ಸಿನಿಮಾ ಮಾಡಿದ್ದೇನೆ.

ನನ್ನ ಸಿನಿಮಾ ಅಷ್ಟು ಕೋಟಿ ಮಾಡುತ್ತೆ, ಇಷ್ಟು ಕೋಟಿ ಮಾಡುತ್ತೆ ಎನ್ನುವ ಯಾವ ಹೆಚ್ಚುಗಾರಿಕೆ ಮತ್ತು ಪ್ರಭಾವಳಿಗಳನ್ನು ಸೃಷ್ಟಿಸದೆ ಒಬ್ಬ ಹೊಸ ವಿದ್ಯಾರ್ಥಿ ಪೂರ್ವ ತಯಾರಿ ಮಾಡಿಕೊಂಡು ಪರೀಕ್ಷೆ ಬರೆದಂತೆ ಈ ಚಿತ್ರ ಮಾಡಿದ್ದೇನೆ. ಸಿನಿಮಾದಲ್ಲಿ ನಿನ್ನೆಯ ಯಶಸ್ಸು ನಾಳೆಯ ಸಿನಿಮಾವನ್ನು ಕಾಪಾಡುತ್ತದೆ ಎಂದು ನಂಬಿದವು ನಾನು’ ಎಂದರು. ನಟ ಧನಂಜಯ, ‘ಈಗ ಚಿತ್ರರಂಗಕ್ಕೆ ಫ್ಯಾಮಿಲಿ ಸಿನಿಮಾಗಳು ಬೇಕು. ಅದರ ಕೊರತೆ ಈಗ ಇದೆ. ಈ ಕೊರತೆಯನ್ನು ‘ಅಮೆರಿಕಾ ಅಮೆರಿಕಾ 2’ ಸಿನಿಮಾ ತುಂಬುವಂತಾಗಲಿ. ಕೌಟುಂಬಿಕ ಪ್ರೇಕ್ಷಕರನ್ನು ಈ ಸಿನಿಮಾ ಥಿಯೇಟರ್‌ಗಳಿಗೆ ಕರೆತರುವಂತಾಗಲಿ’ ಎಂದು ಅಭಿಪ್ರಾಯಪಟ್ಟರು.

ನಂಬಿಕೆಯಲ್ಲಿ ಮಾಡಿದ್ದೇನೆ

ನಿರೂಪ್‌ ಭಂಡಾರಿ, ‘ನಾನು ನಟಿಸಿದ ಸಿನಿಮಾವೊಂದರ ಕಾರ್ಯಕ್ರಮ ಮೊದಲ ಬಾರಿಗೆ ಮೈಸೂರಿನಲ್ಲಿ ನಡೆಯುತ್ತಿದೆ. ಪ್ರತಿ ಚಿತ್ರವನ್ನು ನಾನು ಒಳ್ಳೆಯ ಕತೆ, ಒಳ್ಳೆಯ ಸಿನಿಮಾ ಆಗುತ್ತದೆ, ಎಲ್ಲರು ನೋಡುತ್ತಾರೆ ಎನ್ನುವ ನಂಬಿಕೆಯಲ್ಲೇ ಮಾಡುತ್ತೇನೆ. ಈ ಚಿತ್ರವನ್ನು ಅದೇ ನಂಬಿಕೆಯಲ್ಲಿ ಮಾಡಿದ್ದೇನೆ. ಸಿನಿಮಾ ಬಂದ ಮೇಲೆ ರಿವ್ಯೂಗಳಿಗೆ ಕಾದು ಕೂರಬೇಡಿ. ನೀವೇ ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡಿ’ ಎಂದು ಹೇಳಿದರು. ಪೃಥ್ವಿ ಅಂಬಾರ್‌, ‘ಪ್ರೇಮ ಕತೆಗಳಲ್ಲಿ ಅಗ್ರಗಣ್ಯದಲ್ಲಿರುವ ಸಿನಿಮಾಗಳ ಪೈಕಿ ‘ಅಮೆರಿಕಾ ಅಮೆರಿಕಾ’ ಒಂದು.

ಅದರ ಮುಂದುವರಿದ ಭಾಗದ ಚಿತ್ರದಲ್ಲಿ ನಾನು ನಟಿಸುತ್ತಿರುವುದಕ್ಕೆ ಖುಷಿ ಕೊಟ್ಟಿದೆ’ ಎಂದು ಹೇಳಿದರೆ, ಶಾನ್ವಿ ಶ್ರೀವತ್ಸ ಅವರು ‘ಇದಕ್ಕಿಂತ ಸುಂದರವಾದ ಪಾತ್ರ ನಾನು ಇದುವರೆಗೂ ಮಾಡಿಲ್ಲ. ನಾಗತಿಹಳ್ಳಿ ಚಂದ್ರಶೇಖರ್‌ ಅವರು ಅಂಥ ಪಾತ್ರವನ್ನು ನನಗೆ ಈ ಚಿತ್ರದಲ್ಲಿ ಕೊಟ್ಟಿದ್ದಾರೆ. ಎಲ್ಲಾ ವರ್ಗದ ಮಹಿಳೆಯರಿಗೆ ಕನೆಕ್ಟ್‌ ಆಗುವ ಪಾತ್ರ ನನ್ನದು. ಈ ಸಿನಿಮಾದಲ್ಲಿ ನಟಿಸಿದ್ದೇ ಒಂದು ಅದ್ಭುತವಾಗ ಜರ್ನಿ’ ಎಂದರು. ಇದೇ ಸಂದರ್ಭದಲ್ಲಿ ಚಿತ್ರದ ಹಾಡುಗಳ ಪ್ರದರ್ಶನ ಕೂಡ ನಡೆಯಿತು. ಮನೋಮೂರ್ತಿ ಮ್ಯೂಸಿಕಲ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡುಗಳನ್ನು ಕೇಳಬಹುದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸಲಾಡ್‌ ಅಷ್ಟೇ ತಿಂದು ಫಿಟ್ನೆಸ್ ಮೆಂಟೇನ್ ಮಾಡುತ್ತಿರುವ ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ
ಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಕಿಚ್ಚ ಸುದೀಪ್‌ ಆಸರೆ: ತಾಯಿಯ ನೆನಪಿನಲ್ಲಿ ಮಹತ್ವದ ಕಾರ್ಯ