ದರ್ಶನ್‌ಗೆ ಪವಿತ್ರಾ ತುಂಬಾ ಟಾರ್ಚರ್‌ ಕಟ್ಟು ವ್ಯಕ್ತಿತ್ವ ನಾಶ ಮಾಡಿದ್ದಾಳೆ: ನಿರ್ದೇಶಕಿ ಚಂದ್ರಕಲಾ

Published : Jul 08, 2024, 10:50 AM ISTUpdated : Jul 08, 2024, 11:06 AM IST
ದರ್ಶನ್‌ಗೆ ಪವಿತ್ರಾ ತುಂಬಾ ಟಾರ್ಚರ್‌ ಕಟ್ಟು ವ್ಯಕ್ತಿತ್ವ ನಾಶ ಮಾಡಿದ್ದಾಳೆ: ನಿರ್ದೇಶಕಿ ಚಂದ್ರಕಲಾ

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣ ದೊಡ್ಡದಾಗುತ್ತಿದ್ದಂತೆ ಪವಿತ್ರಾ ಗೌಡ ಮತ್ತೊಂದು ಮುಖ ರಿವೀಲ್ ಮಾಡಿದ ನಿರ್ದೇಶಕಿ..... 

ರೇಣುಕಾಸ್ವಾಮಿ ಕೊಲೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಪವಿತ್ರಾ ಗೌಡ, ದರ್ಶನ್‌ ಮತ್ತು ಇನ್ನಿತ್ತರರು ಮಾಡಿರುವ ತಪ್ಪುಗಳ ಬಗ್ಗೆ ವಿಶ್ಲೇಷಣೆ ಮಾಡುತ್ತಿರುವ ಮಂದಿ ನಡುವೆ ನಿರ್ದೇಶಕಿ ಚಂದ್ರಕಲಾ ಹೇಳಿಕೆ ವೈರಲ್ ಆಗುತ್ತಿದೆ. ಪವಿತ್ರಾ ಗೌಡರನ್ನು ನಾಯಕಿ ಮಾಡಿಕೊಂಡು ಆಶಿಕಿ ಸಿನಿಮಾ ಮಾಡಲು ಮುಂದಾಗಿದ್ದ ನಿರ್ದೇಶಕಿ, ಎರಡೇ ದಿನ ಚಿತ್ರೀಕರಣ ಮಾಡಿಸಿ ಆಕೆಯನ್ನು ಹೊರ ಹಾಕಲು ಕಾರಣ ತಿಳಿಸಿದ್ದಾರೆ. 

'ಪವಿತ್ರಾ ಗೌಡಳಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ರೇಣುಕಾಸ್ವಾಮಿ ಕೊಲೆ ಆಗಿರುವುದು ತಪ್ಪು ಅದನ್ನು ಖಾನೂನು ನೋಡಿಕೊಳ್ಳುತ್ತಿದೆ. ನೂರೆಂಟು ರೀತಿಯಲ್ಲಿ ಯೋಚನೆ ಮಾಡಿದರೆ ಪವಿತ್ರಾ ಗೌಡದೇ ತಪ್ಪು. ಈಗ ಮೆಸೇಜ್ ಮಾಡಿದರೆ ಅದನ್ನು ಬ್ಲಾಕ್ ಮಾಡಬಹುದಿತ್ತು ಆದರೆ ಆಕೆ ಕೊಲೆ ಮಾಡುವಂತೆ ಪ್ರಚೋದನೆ ಮಾಡಿದ್ದಾಳೆ. ಯಾಕೆ ನಮಗೆ ಮೆಸೇಜ್ ಬರಲ್ವಾ? ದರ್ಶನ್‌ಗೆ ಪವಿತ್ರಾ ತುಂಬಾ ಟಾರ್ಚರ್ ಕೊಟ್ಟಿರುತ್ತಾಳೆ. ಅಷ್ಟು ದೊಡ್ಡ ವ್ಯಕ್ತಿಯ ವ್ಯಕ್ತಿತ್ವ ನಾಶ ಮಾಡಿದ್ದಾಳೆ....ಆಕೆ ಇಂಡಸ್ಟ್ರಿಯಲ್ಲಿ ಇಲ್ಲದೆ ಇರುವುದು ಒಳ್ಳೆಯದಾಗಿತ್ತು' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ನಿರ್ದೇಶಕಿ ಚಂದ್ರಕಲಾ ಮಾತನಾಡಿದ್ದಾರೆ.

ಸಿನಿಮಾ ಇಷ್ಟ ಆದ್ರೆ ಮಾತ್ರ ಇಂಟರ್‌ವಲ್‌ನಲ್ಲಿ ಟಿಕೆಟ್‌ ಖರೀದಿಸಿ; ಸ್ಯಾಂಡ್‌ವುಡ್‌ನ ಹೊಸ ಪ್ರಯೋಗ ಯಾವತ್ತಿಂದ ಶುರು?

'ಆಶಿಕಿ ಸಿನಿಮಾ ಮಾಡಬೇಕು ಎಂದು ತೀರ್ಮಾನ ಮಾಡಿದಾಗ ನಾನು 120 ಹೆಣ್ಣು ಮಕ್ಕಳ ಆಡಿಷನ್ ಮಾಡುತ್ತೀವಿ ಯಾರೂ ಸೆಲೆಕ್ಟ್‌ ಆಗಲಿಲ್ಲ ಆಗ ಕೋ ಆಡಿನೇಟರ್‌ ಪವಿತ್ರಾ ಫೋಟೋ ಕೊಟ್ಟರು. ಸಖತ್ ಆಗಿದ್ದಾಳೆ ಸಿನಿಮಾ ಮಾಡ್ಸೋಣ ಎಂದು ಸಂಪರ್ಕ ಮಾಡಿದಾಗ ಆಕೆ ತುಂಬಾ ಖುಷಿ ಪಟ್ಟಳು. ಹಿಂದಿನ ಸಿನಿಮಾದಲ್ಲಿ ಆಕೆ ಹಳ್ಳಿಯಿಂದ ಬಂದಿರುವ ತಿಮ್ಮಿಥರ ಸೆಲ್ವಾರ್ ಹಾಕೊಂಡು ಬಂದಿದ್ದಳು. ಸ್ವಲ್ಪ ಬ್ಯೂಟಿ ಬಿಲ್ಡ್‌ ಮಾಡಿಕೊಂಡಿದ್ದಾಳೆ. ಕಥೆ ಡೈಲಾಗ್ ಪ್ರತಿಯೊಂದನ್ನು ವಿವರಿಸದ ಮೇಲೆ ಸಿನಿಮಾ ಮಾಡ್ತೀನಿ ಅಂದ್ಲು. ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಇದೆ ತಬ್ಬಿಕೊಳ್ಳುವುದು ಇದೆ ಎಂದು ಪ್ರತಿಯೊಂದನ್ನು ಹೇಳಿರುತ್ತೀನಿ..ಇನ್ನೇನು ಚಿತ್ರೀಕರಣ ಆರಂಭವಾಗಬೇಕು ಆಗ ಕಾಸ್ಟ್ಯೂಮ್‌ ನಿರ್ಧಾರ ಮಾಡಬೇಕು' ಎಂದು ನಡೆದ ಘಟನೆಯನ್ನು ಚಂದ್ರಕಲಾ ವಿವರಿಸಿದ್ದಾರೆ. 

ಪಬ್‌ನಲ್ಲಿ ಮ್ಯಾಕ್ಸಿ ಮಿನಿ, ಊರಲ್ಲಿ ಗೌರಮ್ಮನ ಸೀರೆ; ಜೈ ಜಗದೀಶ್ ಪುತ್ರಿ ಮತ್ತೆ ಹಿಗ್ಗಾಮುಗ್ಗಾ ಟ್ರೋಲ್

'ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಬ್ರ್ಯಾಂಡ್‌ ಬಟ್ಟೆ ಬೇಕು ಎಂದು ಡಿಮ್ಯಾಂಡ್ ಮಾಡಿದಳು ಅದನ್ನು ಕೂಡ ಮಾಡಿದ್ವಿ. ಮದುವೆ ಹೆಣ್ಣು ರೀತಿ ಮೆಹೇಂದಿ ಹಾಕಿಸಿ ಕಳುಹಿಸಿದ್ದೆ ಆದರೆ ಆಕೆ ನಾಳೆ ಶೂಟಿಂಗ್ ಬರ್ತಾಳೆ ಕೈಯಲ್ಲಿ ಮೆಹೇಂದಿ ಇಲ್ವೇ ಇಲ್ಲ. ಆಗ ಅರ್ಥವಾಯ್ತು ಈಕೆಯನ್ನು ಇಟ್ಕೊಂಡು ಸಿನಿಮಾ ಮಾಡೋಕೆ ಆಗಲ್ಲ. ಹೀರೋಯಿನ್‌ ಆಗ್ಬೇಕು ಅಂತ ಆಕೆ ಬಂದಿಲ್ಲ' ಎಂದಿದ್ದಾರೆ ಚಂದ್ರಕಲಾ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?