
ಸ್ಯಾಂಡಲ್‌ವುಡ್ ಸುಂದರಿ ದೀಪಿಕಾ ಕಾಮಯ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ವಿದೇಶದಲ್ಲಿ ನೆಲೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಅಪ್ಡೇಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು. ಆದರೀಗ ಅವರು ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ.
ಹೌದು! ಅತಿ ಹೆಚ್ಚಾಗಿ ಬಳಸುತ್ತಿದ್ದ ಇನ್‌ಸ್ಟಾಗ್ರಾಂ ಖಾತೆಯನ್ನು ಯಾರೋ ಕಿಡಿ ಕೇಡಿಗಳು ಹ್ಯಾಕ್ ಮಾಡಿದ್ದಾರೆ. ಸುಮಾರು ಎರಡು-ಮೂರು ದಿನಗಳಿಂದ ಹ್ಯಾಕ್ ಆಗಿದ್ದು, ಪ್ರಾರಂಭದಲ್ಲಿ ವಿಭಿನ್ನ ರೀತಿಯ ಇನ್‌ಸ್ಟಾಗ್ರಾಂ ಲೋಗೋಗಳನ್ನು ಶೇರ್ ಮಾಡಲಾಗುತ್ತಿತ್ತು. ಆನಂತರ ಎಲ್ಲಾ ಪೋಸ್ಟ್‌ಗಳನ್ನೂ ಡಿಲೀಟ್ ಮಾಡಿದ್ದಾರೆ.
ದೀಪಿಕಾ ಅವರ ಇನ್‌ಸ್ಟಾಗ್ರಾಂ ಖಾತೆ ವೆರಿಫೈಡ್ ಆಗಿದ್ದು ಸುಮಾರು 2 ಸಾವಿರಕ್ಕೂ ಹೆಚ್ಚು ಫೋಟೋಗಳು ಹಾಗೂ 87 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು. ಯಾರೋ ಕಿಡಿ ಕೇಡಿಗಳು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಇಂಗ್ಲಿಷ್ ಹಾಡಿನ ಲಿಂಕ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ದರ್ಶನ್ ಹೃದಯ ಕದ್ದ 'ಚಿಂಗಾರಿ' ಈಗೆಲ್ಲಿದ್ದಾರೆ? ಚಿತ್ರರಂಗಕ್ಕೇ Good Bye ಹೇಳಿದ್ರಾ?
ನೆಟ್ಟಿಗರು ಗಮನಿಸುತ್ತಿರುವ ಪ್ರಕಾರ ಇಬ್ಬರು ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಬೆಳಗ್ಗೆ ಒಬ್ಬರು ಇನ್‌ಸ್ಟಾ ಫೋಟೋ ಅಪ್ಲೋಡ್ ಮಾಡಿದರೆ, ರಾತ್ರಿ ವೇಳೆ ಯಾವುದೋ ಹುಡುಗರ ಬಗ್ಗೆ ಮಾಹಿತಿ ಹೊಂದಿರುವ ಹಾಡಗಳು ಹಾಗೂ ಸಿನಿಮಾಗಳ ಬಗ್ಗೆ ಶೇರ್ ಮಾಡಿಕೊಳ್ಳುತ್ತಾರೆ.
ದೀಪಿಕಾ ಫಾಲೋವರ್ಸ್ ಆಕೆಯ ಪರ ನಿಂತಿದ್ದಾರೆ. ಖಾತೆಯಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಸುತ್ತಿದ್ದು, ಶೀಘ್ರದಲ್ಲಿಯೇ ಖಾತೆ ಅವರ ಕೈಗೆ ಸಿಗಲಿ ಎಂದು ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.