ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್‌- ಚಿಕ್ಕಣ್ಣ; ಪೋಟೋ ವೈರಲ್!

Suvarna News   | Asianet News
Published : Jul 27, 2020, 05:47 PM IST
ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್‌- ಚಿಕ್ಕಣ್ಣ; ಪೋಟೋ ವೈರಲ್!

ಸಾರಾಂಶ

ವನ್ಯಜೀವಿ ಪ್ರಿಯ ದರ್ಶನ್‌ ಮತ್ತು ಹಾಸ್ಯ ಕಲಾವಿದ ಚಿಕ್ಕಣ್ಣ ಜೊತೆಯಾಗಿ  ಕ್ಯಾಮರಾ ಹಿಡಿದು ಮಲೆಮಹದೇಶ್ವರ ಅರಣ್ಯದಲ್ಲಿ ಸುತ್ತಾಡುತ್ತಿರುವ   ಫೋಟೋಗಳು ಎಲ್ಲೆಡೆ ವೈರಲ್‌ ಅಗುತ್ತಿವೆ. 

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್  ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಪ್ರಾಣಿ-ಪಕ್ಷಿ ಪ್ರೇಮಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ತಮ್ಮ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಪ್ರಾಣಿಗಳಿಗೆ ಆರೈಕೆಯ ಕೆಲಸ ಮಾಡುತ್ತಾ ಸಮಯ ಕಳೆಯುತ್ತಿದ್ದರು. ಇದು ಲಾಕ್‌ಡೌನ್ ಸಮಯದ ವಿಷಯವಷ್ಟೇ ಅಲ್ಲ ದರ್ಶನ್ ಅವರಿಗೆ ಫ್ರೀ ಇದ್ದಾಗಲೆಲ್ಲ  ದಿನ ಕಳೆಯುವುದು ಮೈಸೂರಿನಲ್ಲೇ.

ಟ್ರ್ಯಾಕ್ಟರ್ ಓಡಿಸಿದ ಚಾಲೆಂಜಿಂಗ್ ಸ್ಟಾರ್, ವಿಡಿಯೋ ನೋಡಿಕೊಂಡು ಬನ್ನಿ

ಕರ್ನಾಟಕ ಅರಣ್ಯ ಇಲಾಖೆ ರಾಯಭಾರಿ ಆದ ನಂತರ ದರ್ಶನ್‌ ಸಾಕಷ್ಟು  ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಈ ಹಿಂದೆಯೂ ಕೀನ್ಯಾದ ಕಾಡಿಗೆ ತೆರಳಿ ವನ್ಯಜೀವಿಗಳ ಬಗ್ಗೆ ತಿಳಿದುಕೊಂಡು ಪೋಟೋಗ್ರಾಫಿ ಮಾಡುತ್ತಿದದ್ದು ಫೋಟೋ - ವಿಡಿಯೋಗಳು ವೈರಲ್ ಆಗಿತ್ತು. ಕೀನ್ಯಾದ ಕಾಡಿನಲ್ಲಿ ಅವರು ಸೆರೆಹಿಡಿದ  ಕ್ಷಣಗಳನ್ನು  ವಿಡಿಯೋ ಮೂಲಕ ಡಿ-ಬೀಟ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. 

ಚಿಕ್ಕಣ್ಣ- ದರ್ಶನ್‌: 

ತೆರೆ ಮೇಲೆ ಚಿಕ್ಕಣ್ಣ- ದರ್ಶನ್‌ ಕಾಂಬಿನೇಷ್‌ ನೋಡಿ ಫಿದಾ ಆದ ಅಭಿಮಾನಿಗಳು ಅವರಿಬ್ಬರ ಆಫ್‌ ರೀಲ್ ಸಂಬಂಧ ಹೇಗಿದೆ ಎಂಬುದು ತಿಳಿದಿರಲಿಲ್ಲ ಇದೀಗ ಇಬ್ಬರನ್ನು ಈ ಫೋಟೋದಲ್ಲಿ ಒಟ್ಟಾಗಿ ನೋಡಿ ಫ್ಯಾನ್‌ ಪೇಜ್‌ಗಳಲ್ಲಿ ಕ್ರೇಜ್‌ ಹೆಚ್ಚಾಗುತ್ತಿದೆ. ನಟ ಚಿಕ್ಕಣ್ಣ ಈ ಹಿಂದೆ ದರ್ಶನ್ ಸೆರೆಹಿಡಿದ ಚಿತ್ರವೊಂದನ್ನು ಖರೀದಿ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು. 

 

ಎಂಎಂ ಹಿಲ್ಸ್‌ನಲ್ಲಿ ಭೇಟಿ ನೀಡಿದ ನಂತರ ಕೊಳ್ಳೆಗಾಲದ ಬಫರ್‌ ವಲಯದಲ್ಲಿರುವ ದೊಡ್ಡಮಾಕಳಗಿ ವ್ಯಾಪ್ತಿಯ ಎಪಿಸಿ ಶಿಬಿರಕ್ಕೂ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟ ದರ್ಶನ್‌ ಮಲೆಮಹದೇಶ್ವರ  ಡಿಎಫ್‌ಓ ಕಚೇರಿ ಸಮೀಪದಲ್ಲಿ ಎರಡು ಗಿಡ ನೆಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ಡೆವಿಲ್‌ ಸಿನಿಮಾದ ಫಸ್ಟ್ ಡೇ ಫಸ್ಟ್‌ ಶೋ ಹೌಸ್‌ಫುಲ್‌: ಎಷ್ಟು ಕೋಟಿ ಕಲೆಕ್ಷನ್ ಆಗಿದೆ ಗೊತ್ತಾ?
ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!