
'ಕಿರಿಕ್ ಪಾರ್ಟಿ' (kirik Party) ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ (Sandalwood) ಜರ್ನಿ ಆರಂಭಿಸಿ ಸಂಯುಕ್ತಾ (Samyuktha Hegde) ಇದೀಗ ಅಭಿಷೇಕ್ ಬಸಂತ್ (Abhishek Basanth) ನಿರ್ದೇಶನ ಮಾಡುತ್ತಿರುವ ಕ್ರೀಂ (Cream) ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಗ್ನಿ ಶ್ರೀಧರ್ ಬರೆದಿರುವ ಈ ಕಥೆಯನ್ನು ಡಿಕೆ ದೇವೇಂದ್ರ (DK Devendra) ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಲಾಂಚ್ ಕಾರ್ಯಕ್ರಮದಲ್ಲಿ ಇಡೀ ತಂಡ ಚಿತ್ರ ಮತ್ತು ಪಾತ್ರದ ಬಗ್ಗೆ ಹಂಚಿಕೊಂಡಿದ್ದಾರೆ.
'ನಾವು ಚಿತ್ರಕ್ಕೆ ಯಾಕೆ ಕ್ರೀಂ (Cream) ಅಂತ ಟೈಟಲ್ ಆಯ್ಕೆ ಮಾಡಿದ್ದೀವಿ, ಎಂದು ಈಗ ನಿಮಗೆ ಹೇಳಲು ಆಗುವುದಿಲ್ಲ, ಬಹಳ ಬೇಗ ಸಿನಿಮಾ ಬರುತ್ತೆ. ಬಹಳ ಯೋಚನೆ ಮಾಡಿ ಟೈಟಲ್ ಆಯ್ಕೆ ಮಾಡಿದ್ದೀವಿ. ಇದು ಮಹಿಳಾ ಪ್ರಧಾನ ಸಿನಿಮಾ (Women Oriented Film) ಆಗಿರುವ ಕಾರಣ ಯಾರನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ಮೊದಲ ಯೋಚನೆ ಬಂತು. ಈ ಪಾತ್ರಕ್ಕೆ ನಾವು ಹಲವಾರು ಜನರನ್ನು ಪರಿಗಣಿಸಿದ್ದೆವು. ಆದರೆ ನನಗೆ ಆ ಫಿಟ್ನೆಸ್ (Fitness) ಮತ್ತು ಭಾವನೆಗಳನ್ನು ವ್ಯಕ್ತ ಪಡಿಸುವ ಸಾಮರ್ಥ್ಯ ಕಾಣಿಸಿದ್ದು ಸಂಯುಕ್ತಾ ಹಗ್ಡೆಯಲ್ಲಿ,' ಎಂದು ಅಗ್ನಿ ಶ್ರೀಧರ್ ಮಾತನಾಡಿದ್ದಾರೆ.
'ನಿಮಗೆ ನಾನು ಒಂದೇ ಒಂದು ವಿಷ್ಯ ಹೇಳ್ತೀನಿ. ಸಂಯುಕ್ತಾನ ನಾನು ಏನ್ ಕೇಳಿದೆ ಅಂದ್ರೆ, ನೋಡಿದ್ದೀರಿ ಅಲ್ವಾ ನಮ್ಮ ಡೈರೆಕ್ಟರ್‌ನ (Director) ಗೋಡೆಗೆ ಗುದ್ದುವ ಹಾಗಿದ್ದಾರೆ. ಆಗ ನಾನು ಸಂಯುಕ್ತಾನ ಕೂರಿಸಿಕೊಂಡು ಹೇಳಿದೆ, ನೋಡಪ್ಪ ನಿನಗೆ ಈ ರೋಲ್ ಬೇಕು ಅಂದ್ರೆ ನೀನು ನನಗೆ ಕನ್ವೀನ್ಸ್ ಮಾಡಬೇಕು. ನಾನು ಹೇಳೋದು ಒಂದು ಆ್ಯಕ್ಷನ್. ಎದುರಿಗೆ ನಿರ್ದೇಶಕ ಅಭಿಷೇಕ್ ನಿಂತಿದ್ದರು. ನಾನು ಹೇಳಿದೆ, 'ಅಗ ಹುಡುಗ ನಿಂತಿದ್ದಾನೆ ಅವನ ಹೈಟ್ ನೋಡು. ಆತನ ಮುಖಕ್ಕೆ ಕಿಕ್ ಮಾಡಬೇಕು. ನನಗೆ ಕನ್ವೀನ್ಸಿಂಗ್ ಆಗಿ,' ಅಂತ ಹೇಳಿದೆ. ನಾನು ಅಂದ್ಕೊಂಜೆ ಟ್ರೈ ಮಾಡ್ತೀನಿ. ಒಂದೆರಡು ತಿಂಗಳು ಬಿಟ್ಟು ಹೇಳುತ್ತಾಳೆ ಅಂತ. ಇಲ್ಲ ಈ ಹುಡುಗಿ ಫೋನ್ (Phone) ಪಕ್ಕಾ ಇಟ್ಟು ರೆಡಿ ಸರ್ ಅಂದ್ರು. ಕಿಕ್ ಮಾಡ್ತೀನಿ ನೋಡಿ, ಇವ್ರ ಮುಖಕ್ಕೆ ಈಗ ಅಂದ್ರು. ನಾನು ಹೋ ರೈಟ್ ಅಂತ ಪಾತ್ರ ಆಯ್ಕೆ ಆಯ್ತು,' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
' ದರಲ್ಲಿ ನಾಯಕಿಯದ್ದು ಕಾಂಪ್ಲೆಕ್ಸ್ ಕ್ಯಾರೆಕ್ಟರ್ (Complex Character). ಇನೋಸೆನ್ಸ್‌ನಿಂದ ಹಿಡಿದು, ದೊಡ್ಡವರ ತನಕ ಮೆಚ್ಚುವ ಕ್ಯಾರೆಕ್ಟರ್. ಆ ಕ್ಯಾರೆಕ್ಟರ್‌ಗೆ ನಾನು ಮನಸಾರೆ ಆಯ್ಕೆ ಮಾಡಿದ್ದು ಸಂಯುಕ್ತಾರನ್ನು. ನಾನು ಹೇಳಿದ್ದೀನಿ, ಈ ಸಲ ನೋಡಿದವರಿಗೆ ಬೇರೆ ತರ ಯೋಚನೆ ಬರಬಾರದು. ಯಸ್ ಇವಳು ಈ ಪಾತ್ರಕ್ಕೆ ಕರೆಕ್ಟ್ ಆಗಿ ಸೂಟ್ ಅಗುತ್ತಾಳೆ ಅನ್ನಬೇಕು,' ಎಂದಿದ್ದಾರೆ ಶ್ರೀಧರ್.
'ನನಗೆ ಫುಲ್ ಕ್ಯೂರಿಯಾಸಿಟಿ (Curiosity) ಬಿಲ್ಡ್ ಮಾಡಿದ್ದಾರೆ. ಅದಕ್ಕೆ ನಾವೂ ನಿಮಗೆ ಕ್ಯೂರಿಯಾಸಿಟಿ ಬಿಲ್ಡ್ ಮಾಡುತ್ತಿರುವುದು.ಅಗ್ನಿ ಶ್ರೀಧರ್ ಸರ್ ಅವರೇ ಹೇಳಿದರೆ ಈ ಕ್ಯಾರೆಕ್ಟರ್‌ಗೆ ಬೆಲೆ. ಪ್ರತಿಯೊಬ್ಬರಿಗೂ ಪ್ರತಿಯೊಂದು ಪಾತ್ರನೂ experimental ಅಗಿರುತ್ತದೆ. ಅದು ವರ್ಕ್ ಆಗುತ್ತಾ, ವರ್ಕ್ ಆಗಲ್ವಾ ಅನ್ನೋದು ಜನರು ನೋಡಿದರೆ ಮಾತ್ರ ಗೊತ್ತಾಗುತ್ತದೆ. ಬಬ್ಲಿ ತುಂಟತನ ಎಲ್ಲರಿಗೂ ತಲೆಗೆ ಬರುತ್ತೆ. ಆ ಇಮೇಜ್ ಬದಲಾಯಿಸುತ್ತೆ ಈ ಸಿನಿಮಾ. ಇದು ತುಂಬಾ ಡೀಪ್ ಕ್ಯಾರೆಕ್ಟರ್ ಹೀಗಾಗಿ ನಾನು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕೋ ಗೊತ್ತಿರಲಿಲ್ಲ. ಆದರೆ ಫಿಸಿಕಲ್ ಟ್ರೈನಿಂಗ್ ಮಾಡೇ ಮಾಡ್ತೀನಿ,' ಎಂದು ಸಂಯುಕ್ತಾ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.