ಬುಲೆಟ್‌ ಪ್ರಕಾಶ್‌ ಸ್ಥಿತಿ ಗಂಭೀರ: ವೆಂಟಿಲೇಟರ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಟ!

By Suvarna News  |  First Published Apr 6, 2020, 11:40 AM IST

ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಆರೋಗ್ಯದಲ್ಲಿ ಏರು ಪೇರು. ಯಕೃತ್ತು ಹಾಗೂ ಕಿಡ್ನಿ ವೈಫಲ್ಯಕ್ಕೆ  ವೆಂಟಿಲೇಟರ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.


ಕನ್ನಡ ಚಿತ್ರರಂಗದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್‌ ಪ್ರಕಾಶ್‌ 42 ವರ್ಷಕ್ಕೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚುವ ಮೂಲಕ ಕನ್ನಡ ಸಿನಿ ಪ್ರೇಮಿಗಳನ್ನು ಮನೋರಂಜಿಸಿದ್ದಾರೆ. 

"

Tap to resize

Latest Videos

undefined

ಕೆಲವು ದಿನಗಳ ಹಿಂದೆ ಗ್ಯಾಸ್ಟ್ರಿಕ್‌ ತೊಂದರೆಯಿಂದ ಬೆಂಗಳೂರಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಆಡ್ಮಿಟ್‌ ಆಗಿದ್ದ, ಬುಲೆಟ್ ಪ್ರಕಾಶ್‌ ಆರೋಗ್ಯದಲ್ಲಿ ತುಂಬಾನೇ ಏರು-ಪೇರು ಕಾಣಿಸಿಕೊಳ್ಳುತ್ತಿದೆ. ಈ ಕಾರಣಕ್ಕೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್‌ ತೇಜಸ್ವಿ ಅವರು ಶೀಘ್ರದಲ್ಲೇ  ಆರೋಗ್ಯ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದ್ದಾರೆ.

ಅನಾರೋಗ್ಯ: ಕನ್ನಡದ ಹಾಸ್ಯ ನಟ ಬುಲೆಟ್‌ ಪ್ರಕಾಶ್ ಆಸ್ಪತ್ರೆ ದಾಖಲು!

ಬುಲೆಟ್‌ ಪ್ರಕಾಶ್ ಅವರು ಲಿವರ್‌ ಹಾಗೂ ಕಿಡ್ನಿ ವೈಫಲ್ಯವಾದ ಕಾರಣ ಚಿಕಿತ್ಸೆ ನೀಡುತ್ತಿದ್ದು, ವೆಂಟಿಲೇಟರ್‌ ಮೂಲಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ.  ದಿನೇ ದಿನೇ ಆರೋಗ್ಯ ಪರಿಸ್ಥತಿ ಗಂಭೀರವಾಗುತ್ತಿದೆ. ವೈದ್ಯರೂ ಈಗಾಗಲೇ ಗ್ಯಾಸ್ಟ್ರೋಎಂಟರಾಲಜಿಸ್ಟ್, ನೆಫ್ರಾಲಜಿಸ್ಟ್, ಟ್ರಾನ್ಸ್‌ ಪ್ಲ್ಯಾಂಟ್  ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ.  ಕೆಲವು ವರ್ಷಗಳ ಹಿಂದೆ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಯತ್ನಿಸಿದಾಗ ಆರೋಗ್ಯ ಹೆಚ್ಚು ಕಡಿಮೆಯಗಿತ್ತು. ಅದರ ಪರಿಣಾಮವನ್ನು ಪ್ರಕಾಶ್ ಇವತ್ತಿಗೂ ಅನುಭವಿಸುತ್ತಿದ್ದಾರೆ.

click me!