ಈ ಫೋಟೋದಲ್ಲಿ ಎಷ್ಟು ಮಂದಿ ಕಲಾವಿದರನ್ನು ಗುರುತಿಸಬಲ್ಲಿರಿ?

By Suvarna NewsFirst Published Mar 30, 2023, 2:18 PM IST
Highlights

ಟ್ರೆಂಡ್ ಸೆಟ್ಟರ್ ನಾಗರಹಾವು ಸಿನಿಮಾವನ್ನು ನೋಡದ ಕನ್ನಡಿಗರು ಕಡಿಮೆ. ಈ ಸಿನಿಮಾ ಟೀಮ್‌ನ ಫೋಟೋವನ್ನು ಅಪರೂಪದ ಫೋಟೋ ನಮಗೆ ಸಿಕ್ಕಿದೆ. ಜಾಣರಾಗಿದ್ರೆ ಇದರಲ್ಲಿರೋ ಕಲಾವಿದರನ್ನು ಗುರುತಿಸಿ.

'ನಾಗರಹಾವು' ಸಿನಿಮಾ ಅಂದಕೂಡಲೇ ಹಲವರಿಗೆ ಹಲವು ನೆನಪುಗಳು ಒಟ್ಟೊಟ್ಟಿಗೇ ಮನಸ್ಸಿಗೆ ಬರುತ್ತವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದ್ದ 'ನಾಗರಹಾವು' ಸಿನಿಮಾ 1972, ಡಿಸೆಂಬರ್​ 29ರಂದು ರಿಲೀಸ್ ಆಗಿತ್ತು. ಕಳೆದ ವರ್ಷಕ್ಕೆ ಈ ಸಿನಿಮಾ ಬಂದು 50 ವರ್ಷ ಆಗಿದೆ. ಪುಟ್ಟಣ್ಣ ಕಣಗಾಲ್‌ರ ಈ ಮಾಸ್ಟರ್ ಪೀಸ್ ಬಂದು 51 ವರ್ಷವಾದರೂ 'ರಾಮಾಚಾರಿ'ಯನ್ನ ಮಾತ್ರ ಜನ ಮರೆತಿಲ್ಲ. ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ನಾಗರಹಾವು ಸಿನಿಮಾ ಬಹುಮುಖ್ಯವಾದುದು. ಈ ಚಿತ್ರದ ಕಲಾವಿದರ ಆಯ್ಕೆನೂ ಅಷ್ಟೇ ರೋಚಕವಾಗಿಯೇ ಇದೆ. ಈ ಚಿತ್ರದ ಮೂಲಕವೇ ಇಬ್ಬರು ಸ್ಟಾರ್​​ಗಳು ಪರಿಚಯ ಕೂಡ ಆಯಿತು. ಆ ಇಬ್ಬರ ಭವಿಷ್ಯವನ್ನ ಚಿತ್ರದ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರು ಆಗಲೇ ಹೇಳಿ ಬಿಟ್ಟಿದ್ದರು. ಅವರು ಹೇಳಿದಂತೆ, ಆ ಇಬ್ಬರು ಕಲಾವಿದರು ಸೂಪರ್ ಸ್ಟಾರ್​​ಗಳೇ ಆದರು. ಹಾಗೇ ನಾಗರಹಾವು ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲನ್ನೆ ಸಾಧಿಸಿತು.

ಇದೀಗ ಈ ಸಿನಿಮಾ ಟೀಮ್‌ನ ಬಹಳ ಅಪರೂಪದ ಫೋಟೋ ನಮಗೆ ಸಿಕ್ಕಿದೆ. ನೀವು ನಿಜಕ್ಕೂ ಸಿನಿಮಾ ವ್ಯಾಮೋಹಿಗಳಾಗಿದ್ದರೆ ಕ್ಲಾಸಿಕ್ ಸಿನಿಮಾ ಪ್ರಿಯರಾಗಿದ್ದರೆ ಈ ಫೋಟೋದಲ್ಲಿರುವವರನ್ನು ಗುರುತಿಸಿ. ಹಾಗೆ ನೋಡಿದರೆ ಈ ಸಿನಿಮಾದಲ್ಲಿ ವಿಷ್ಣು ದಾದ ಮತ್ತು ಅಂಬಿ ಸಾರ್ ನಟಿಸಿದುದರ ಹಿಂದೆ ಇಂಟರೆಸ್ಟಿಂಗ್ ಸ್ಟೋರಿ ಇದೆ. ನಿರ್ದೇಶಕ ಪುಟ್ಟಣ್ಣ ಅವರು ನಾಗರಹಾವು ಚಿತ್ರಕ್ಕೆ ಕಲಾವಿದರ ಆಯ್ಕೆಗೆ ಆಡಿಷನ್ ಮಾಡುತ್ತಿದ್ದರು. ಆ ಆಡಿಷನ್​ ನಲ್ಲಿ ವಿಷ್ಣು ಕೂಡ ರಾಮಾಚಾರಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಅವರ ಅಭಿನಯ ನೋಡಿ ಪುಟ್ಟಣ್ಣ ಅವರನ್ನು ಈ ಪಾತ್ರಕ್ಕೆ ಸೇರಿಸಿಕೊಂಡರು. ಈ ಸಿನಿಮಾ ಮೂಲಕ ವಿಷ್ಣು ಸರ್ ರಾಮಾಚಾರಿಯಾಗಿಯೇ ಗುರುತಿಸಿಕೊಂಡರು.

ದೂರದಿಂದ ಅಭಿಮಾನಿಗಳನ್ನು ಮಾತನಾಡಿಸುತ್ತಿರಲಿಲ್ಲ ಹತ್ತಿರ ಹೋಗಿ ಪ್ರೀತಿ ಕೊಡುತ್ತಿದ್ದರು: ಅಪ್ಪು ಬಗ್ಗೆ ಬಾಡಿ ಗಾರ್ಡ್‌ ಚಲಪತಿ

ಇನ್ನೊಂದು ಜಲೀಲನ ಪಾತ್ರ. ಚಿತ್ರದಲ್ಲಿ ಜಲೀಲ ಪಾತ್ರ ಮಾಡೋ ಮೂಲಕ ಅಂಬರೀಶ್ ಅವರು ಎಲ್ಲರ ಹೃದಯ ಕದ್ದರು. ಚಿಕ್ಕ ಪಾತ್ರ ಇದಾಗಿದ್ದರೂ ಸಹ, ಅಂಬರೀಶ್ ಮೊದಲ ಚಿತ್ರದಲ್ಲಿಯೇ ಭಾರೀ ಮಿಂಚಿ ಬಿಟ್ಟರು. ಈ ಜಲೀಲನ ಪಾತ್ರಕ್ಕೆ ಅನೇಕ ಕಲಾವಿದರು ಟ್ರೈ ಮಾಡಿದ್ದರು. ಆದರೆ ಯಾರೂ ಆಯ್ಕೆ ಆಗಿರಲಿಲ್ಲ. ಗೆಳೆಯರ ಪ್ರೀತಿಯ ಒತ್ತಾಯಕ್ಕೆ ನಾಗರಹಾವು ಚಿತ್ರಕ್ಕೆ ಅಂಬರೀಶ್ ಆಡಿಷನ್ ಕೊಟ್ರು. ಆ ಕೂಡಲೇ ಅಂಬರೀಶ್ ಸ್ಟೈಲ್​ ನೋಡಿಯೇ ಪುಟ್ಟಣ್ಣ ಅವರು ನೀನೇ ನನ್ನ ಜಲೀಲ ಅಂತಲೇ ಹೇಳಿದ್ರು.

ಅರ್ಜುನ್‌ ಜನ್ಯ ನಿರ್ದೇಶನದ ಹೊಸ ಚಿತ್ರಕ್ಕೆ ಕಿರುತೆರೆ ಸುಂದರಿ ಕೌಸ್ತುಭ ನಾಯಕಿ

ಸದ್ಯಕ್ಕೀಗ ಈ ಫೋಟೋದಲ್ಲಿರುವ ಒಂದಿಷ್ಟು ಕಲಾವಿದರನ್ನು(Artist) ನೀವು ಗುರುತಿಸಿರಬಹುದು. ಒಂದು ವೇಳೆ ಗೊತ್ತಾಗದಿದ್ದರೆ ಇಲ್ಲಿದೆ ಆ ವಿವರ. ಮುಂಭಾಗದಲ್ಲಿ ನಿರ್ಮಾಪಕ ಎನ್ ವೀರಸ್ವಾಮಿ ಹಾಗೂ ಪುಟ್ಟಣ್ಣ ಕಣಗಾಲ್, ಶಿವರಾಮ್ ಮೊದಲಾದವರು ಇದ್ದಾರೆ. ಇವರ ಹಿಂದೆ ನಿಂತಿರೋ ಕ್ಯೂಟ್(Cute) ಪುಟಾಣಿ ರವಿಚಂದ್ರನ್. ಉಳಿದಂತೆ ಮೇಷ್ಟ್ರಾಗಿ ಮನೆ ಮಾತಾದ ಕೆ ಎಸ್ ಅಶ್ವತ್ಥ್‌, ಲೋಕನಾಥ್, ರಾಘವೇಂದ್ರ ರಾವ್, ಅಂಬರೀಶ್, ವಿಷ್ಣುವರ್ಧನ್, ಆರತಿ, ಲೀಲಾವತಿ, ಲಕ್ಷ್ಮೀದೇವಿ, ಶುಭಾ, ಧೀರೇಂದ್ರ ಗೋಪಾಲ್, ವಜ್ರಮುನಿ, ರಂಗ ಮೊದಲಾದವರಿದ್ದಾರೆ. ಇದರಲ್ಲಿ ವಿಷ್ಣುವರ್ಧನ್, ಅವರ ಸಹೋದರ, ಲೀಲಾವತಿ, ಲಕ್ಷ್ಮೀ ದೇವಿ ಮೊದಲಾದ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಆಗಸದ ತಾರೆಯರಾಗಿದ್ದಾರೆ. ಆದರೂ ಅವರ ಕೆಲಸಗಳು ಅವರನ್ನು ಸಿನಿಪ್ರಿಯರ ಮನಸ್ಸಿಂದ ದೂರ ಮಾಡಿಲ್ಲ. ಈ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಬಂದ ವಿಷ್ಣುವರ್ಧನ್‌, ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ(History) ನಿರ್ಮಿಸಿ ನಿರ್ಗಮಿಸಿದ್ದಾರೆ.

click me!