
ಎರಡು ದಶಕಗಳವರೆಗೆ ಹಲವಾರು ಕಿರುತೆರೆ- ಹಿರಿತೆರೆಗಳಲ್ಲಿ ನಟಿಸಿ ಮನೆಮಾತಾಗಿರುವ ನಟಿ ಅನು ಪ್ರಭಾಕರ (Anu Prabhakar) . ಅಭಿಮಾನಿಗಳ ಹೃದಯ ಗೆದ್ದಿದ್ದರು. ಕನ್ನಡ, ಇಂಗ್ಲೀಷ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಅನು ಪ್ರಭಾಕರ್ ತಿಳಿಸಿದ್ದಾರೆ. ಮೊದಲ ಮದುವೆ ಬಗ್ಗೆ ಮೊದಲ ಬಾರಿಗೆ ನಟಿ ಮಾತಾಗಿದ್ದಾರೆ. 42 ವರ್ಷದ ಅನು ಪ್ರಭಾಕರ್ ಅವರು ಚಿಕ್ಕ ವಯಸಿನಲ್ಲಿಯೇ ಚಪಲ ಚೆನ್ನಿಗರಾಯ, ಶಾಂತಿ ಕ್ರಾಂತಿ ಚಿತ್ರದಲ್ಲಿ ಅಭಿನಯಿಸಿದವರು. 1999 ರಲ್ಲಿ ಬಿಡುಗಡೆಗೊಂಡ ಹೃದಯ ಹೃದಯ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟರು. ಡಾ.ವಿಷ್ಣುವರ್ಧನ್ ಅವರ ಜೊತೆಯಲ್ಲಿ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ನಂತರ ಸೂರಪ್ಪ, ಹೃದಯವಂತ, ಸಾಹುಕಾರ, ವರ್ಷ, ಹೀಗೆ ಹಲವು ಸಿನೆಮಾಗಳಲ್ಲಿ ಅಭಿನಹಿಸಿದ್ದಾರೆ. ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ಅವರನ್ನು ಮದುವೆಯಾಗಿ, ಆ ಬಳಿಕವೂ ಅತ್ತೆಯ ಅಣತಿಯ ಮೇರೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಅನು ಅವರ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಇದಕ್ಕೆ ಸೂಕ್ತ ಕಾರಣವನ್ನು ನಟಿ ನೀಡಲಿಲ್ಲ. 2002ರಲ್ಲಿ ಇವರ ಮದುವೆಯಾಗಿತ್ತು. 2014ರಲ್ಲಿ ಮದುವೆಯಾಗಿ 12 ವರ್ಷಗಳ ನಂತರ ದಂಪತಿ ವಿಚ್ಛೇದನ (Divorce) ಪಡೆದರು.
2016ರಲ್ಲಿ ನಟಿ ಅನು ಪ್ರಭಾಕರ್ ಅವರು, ನಟ ರಘು ಮುಖರ್ಜಿ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಸುಖಿ ಜೀವನ ನಡೆಸುತ್ತಿರುವ ಅನು ಅವರು, ಇದೇ ಮೊದಲ ಬಾರಿಗೆ ತಮ್ಮ ಅತ್ತೆ ರತ್ನಾ ಮುಖರ್ಜಿ ಅವರನ್ನು ಪರಿಚಯಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಅತ್ತೆಯ ಗುಣಗಾನ ಮಾಡಿದ್ದು, ಹೇಗೆ ಅವರು ತಮಗೆ ಸಪೋರ್ಟಿವ್ ಆಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಪತಿ ರಘು ಅವರು ಸಿನಿಮಾ ಇಂಡಸ್ಟ್ರಿಗೆ ಬರಲು ಅವರ ತಾಯಿ ಹೇಗೆ ಕಾರಣ ಹಾಗೂ ಅವರ ಅಜ್ಜನ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂಬ ಬಗ್ಗೆಯೂ ಅತ್ತೆಯನ್ನು ಪರಿಚಯಿಸುತ್ತಾ ಅನು ಪ್ರಭಾಕರ್ ಮಾತನಾಡಿದ್ದಾರೆ. ಅತ್ತೆಯ ತಂದೆ ಫಿಲ್ಮ್ ಇಂಡಸ್ಟ್ರಿಯಲ್ಲಿಯೇ (Film Industry) ಇದ್ದರೂ ತಮ್ಮ ಅತ್ತೆಯನ್ನು ಸಿನಿಮಾದಿಂದ ಹೇಗೆ ದೂರವಿಟ್ಟರು, ಅವರ ಆಸೆ ಹೇಗೆ ಕೊನೆಗೂ ಆಸೆಯಾಗಿಯೇ ಉಳಿಯಿತು ಎಂಬ ಬಗ್ಗೆಯೂ ಅನು ಮಾತನಾಡಿದ್ದಾರೆ.
ಅನು ಪ್ರಭಾಕರ್ ಕಿಡ್ನ್ಯಾಪ್ ಆಗಿದ್ದು ನಿಜವೇ?; ರೋಚಕ ಕಥೆ ಬಿಚ್ಚಿಟ್ಟ ನಟಿ
ರಘು ಅವರು ಸಿನಿ ಪ್ರಪಂಚಕ್ಕೆ ಕಾಲಿಡಲು ಕಾರಣ, ಪರೋಕ್ಷವಾಗಿ ಅವರ ಅಜ್ಜ ಎಂದು ಅನು ಹೇಳಿದ್ದಾರೆ. ಅವರ ಅತ್ತೆ ರತ್ನಾ ಮುಖರ್ಜಿ (Ratna Mukharjee) ಅವರ ತಂದೆ ಆರ್. ವೆಂಕಟಚಾಲಂ (R. Venkatachalam) ಪ್ರಸಿದ್ಧ ಕ್ಯಾಮೆರಾಮನ್ ಆಗಿದ್ದವರು. ಬೆಂಗಳೂರಿನ ಎಸ್ಜೆ ಪಾಲಿಟಿಕ್ನಿಕ್ನ ಫೋಟೋಗ್ರಫಿ ವಿಭಾಗದ ಮುಖ್ಯಸ್ಥರಾಗಿದ್ದರು. ಆದರೆ ಅವರಿಗೆ ಸಿನಿಮಾದ ನಂಟು ಅಷ್ಟಾಗಿ ಇರಲಿಲ್ಲ. ಆಕಸ್ಮಿಕವಾಗಿ, ಅವರಿಗೆ ಸಿನಿಮಾದ ನಂಟು ಬಂದದ್ದು. ಅದು ಹೇಗೆ ಅಂದರೆ ಆಗ ಫಿಲ್ಮ್ ಛೇಂಬರ್ನಲ್ಲಿ ಗುಂಡೂರಾವ್ ಅವರು ಇದ್ದರು. ಆ ಸಮಯದಲ್ಲಿ ಕೋರಿಯಾದಿಂದ 70 ಎಂಎಂ ಕ್ಯಾಮೆರಾ ತಂದಿದ್ದರು. ಅದನ್ನು ಬಳಸಲು ಯಾರಿಗೂ ಬರುತ್ತಿರಲಿಲ್ಲ. ಆಗ ತಾನೇ ವೆಂಕಟಚಾಲಂ ನಿವೃತ್ತರಾಗಿದ್ದರು. ಅವರೊಬ್ಬರಿಗೇ ಈ ಕ್ಯಾಮೆರಾದ ಬಳಕೆ ಬರುತ್ತಿತ್ತು. ಆಗ ಗುಂಡೂರಾವ್ ಅವರು ವೆಂಕಟಚಾಲಂ ಅವರನ್ನು ಕರೆದು ಕೆಲವು ಮಕ್ಕಳಿಗೆ ತರಬೇತಿ ನೀಡಲು ಹೇಳಿದ್ದರು. ನಂತರ ಹಿಂದಿನ ಶೋಲೆ ಚಿತ್ರದಿಂದಲೂ ಇದೇ ಕ್ಯಾಮೆರಾ ವಿಷಯವಾಗಿ ಆಫರ್ ಬಂತು. ಹೀಗೆ ಅತ್ತೆಯ ಅಪ್ಪನಿಗೆ ಸಿನಿಮಾದ ನಂಟು ಉಂಟಾಯಿತು ಎಂದರು.
'ಇಷ್ಟಾದರೂ ನನ್ನ ಅತ್ತೆಯ ಅಪ್ಪನವರಿಗೆ ಯಾವ ಮಕ್ಕಳೂ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಆಸೆ ಇರಲಿಲ್ಲ. ಐವರು ಗಂಡುಮಕ್ಕಳು ಮತ್ತು ನಾಲ್ಕು ಹೆಣ್ಣುಮಕ್ಕಳ ತಂದೆಯಾಗಿದ್ದರು ಅವರು. ಈ ಒಂಬತ್ತು ಮಂದಿಯ ಪೈಕಿ ನನ್ನ ಅತ್ತೆ ಎಂಟನೆಯವರು. ಹೆಣ್ಣುಮಕ್ಕಳು ದೂರದ ಮಾತು, ಗಂಡು ಮಕ್ಕಳನ್ನೂ ಚಿತ್ರರಂಗದಿಂದ ದೂರವಿಟ್ಟಿದ್ದರು. ನನ್ನ ಅತ್ತೆಯವರಿಗೆ ರಕ್ತಗತವಾಗಿಯೇ ಸಿನಿಮಾ ನಂಟು ಬಂದಿತ್ತೋ ಏನೊ. ನಟಿಸುವ ಆಸೆ ಇತ್ತು. ಅವರಿಗೆ ಒಳ್ಳೆಯ ಉದ್ಯೋಗವೂ ಸಿಕ್ಕಿತ್ತು. ಆದರೆ ಹೆಣ್ಣುಮಕ್ಕಳು ಅಡುಗೆ ಮನೆಗೆ ಸೀಮಿತ ಎಂಬ ದೃಷ್ಟಿಕೋನದವರಾಗಿದ್ದ ಅವರಪ್ಪ ಎಲ್ಲಿಯೂ ಕಳುಹಿಸಲಿಲ್ಲ. ಒಮ್ಮೆ ಶೋಲೆ ಚಿತ್ರದ ಚಿತ್ರೀಕರಣದ (Shooting) ವೇಳೆ ಅತ್ತೆ ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ನೇಹಿತೆಯರ ಜೊತೆ ಶೂಟಿಂಗ್ ನೋಡಲು ಹೋಗಿ ಸಿಕ್ಕಿಬಿದ್ದಿದ್ದರು. ಚೆನ್ನಾಗಿ ಬೈಸಿಕೊಂಡಿದ್ದರು. ಅಂದಿನಿಂದ ಇನ್ನೂ ಹೆಚ್ಚಿನ ಕಟ್ಟುನಿಟ್ಟಾಯಿತು. ಇದರ ಹೊರತಾಗಿಯೂ ಅತ್ತೆಯ ಸಹೋದರನೊಬ್ಬ ಅಪ್ಪನಿಗೆ ಹೇಳದೇ ಅನಂತ್ನಾಗ್ ಅವರ ಸಿನಿಮಾದಲ್ಲಿ ಚಿಕ್ಕ ರೋಲ್ ಮಾಡೇ ಬಿಟ್ಟಿದ್ದರು. ಚಿತ್ರ ಬಿಡುಗಡೆಯಾದ ಮೇಲೆ ಮನೆಯಲ್ಲಿ ದೊಡ್ಡ ಹಂಗಾಮಾ ಸೃಷ್ಟಿಯಾಗಿತ್ತು' ಎಂದರು.
ಗಂಡನ ಜತೆ ಖುಷಿಯಾಗಿಲ್ಲ ಅಂದ್ರೆ ತಂದೆ-ತಾಯಿ ಮಗಳಿಗೆ ಸಪೋರ್ಟ್ ಮಾಡಿ; ಡಿವೋರ್ಸ್ ಬಗ್ಗೆ ಮೌನ ಮುರಿದ ಅನು ಪ್ರಭಾಕರ್
ಕುತೂಹಲದ ವಿಷಯ ಏನೆಂದರೆ, ನಮ್ಮ ಮಾವ ರಂಜಿತ್ ಕುಮಾರ್ ಅವರಿಗೆ ಸಿನಿಮಾದಲ್ಲಿ ನಟಿಸುವ ಆಸೆ. ಆದರೆ ಅಪ್ಪನ ಸ್ಟ್ರಿಕ್ಟ್ ಗರಡಿಯಲ್ಲಿ ಬೆಳೆದಿದ್ದ ಅತ್ತೆ, ನಮ್ಮ ಮಾವನಿಗೂ ಸಿನಿಮಾಕ್ಕೆ ಹೋಗಲು ಬಿಡಲೇ ಇಲ್ಲ. ಅವರ ನಟನೆಯ ಆಸೆ ಆಸೆಯಾಗಿಯೇ ಉಳಿಯಿತು. ಆದರೆ ಈಗಲೂ ಆ ಬಗ್ಗೆ ಅತ್ತೆಗೆ ನೋವಿದೆ ಎಂದರು ಅನು. ನಂತರ ರಘು (Raghu) ಅವರು ಮಾಡೆಲ್ ಆಗಿದ್ದರು. ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದ ಬಳಿಕ ಮಿಸ್ಟರ್ ಇಂಟರ್ನ್ಯಾಷನಲ್ ತಯಾರು ಮಾಡುತ್ತಿರುವಾಗ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾಗೆ ಆಫರ್ ಕೊಟ್ಟರು. ಮೊದಲು ನಮ್ಮ ಅತ್ತೆಗೆ ಅವರನ್ನು ಕಳುಹಿಸಲು ಅಳುಕು ಇತ್ತು. ನಂತರ ನಾಗತಿಯಹಳ್ಳಿಯವರ ಬಗ್ಗೆ ತಿಳಿದುಕೊಂಡು, ಓಕೆ ಅಂದರು. ಅಲ್ಲಿಂದ ರಘು ಅವರ ಸಿನಿಮಾ ಜರ್ನಿ ಶುರುವಾಯಿತು ಎಂದಿರುವ ಅನು, ಈಗ ತಮ್ಮನ್ನು ಅತ್ತೆಯವರು ಎಷ್ಟು ಸಹಾಯ ಮಾಡುತ್ತಾರೆ, ಎಷ್ಟೆಲ್ಲಾ ಪ್ರೋತ್ಸಾಹಿಸುತ್ತಾರೆ ಎನ್ನುವುದನ್ನು ಸ್ಮರಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.