'ಆಪರೇಷನ್ ಅಲಮೇಲಮ್ಮ' ನಟನಿಗೆ ಕಂಕಣ ಭಾಗ್ಯ, ನ. 10 ಕ್ಕೆ ವಿವಾಹ

Published : Oct 23, 2019, 10:49 AM IST
'ಆಪರೇಷನ್ ಅಲಮೇಲಮ್ಮ' ನಟನಿಗೆ ಕಂಕಣ ಭಾಗ್ಯ, ನ. 10 ಕ್ಕೆ ವಿವಾಹ

ಸಾರಾಂಶ

ಆಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ನಟ ರಿಷಿಗೆ ಕೂಡಿ ಬಂದಿದೆ ಕಂಕಣ ಭಾಗ್ಯ | ಬಾಲ್ಯ ಸ್ನೇಹಿತೆ ಸ್ವಾತಿಯನ್ನು ವರಿಸಲಿದ್ದಾರೆ | ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ | 

‘ಆಪರೇಷನ್ ಅಲಮೇಲಮ್ಮ’ಖ್ಯಾತಿಯ ನಟ ರಿಷಿ ವಿವಾಹವಾಗುತ್ತಿದ್ದಾರೆ. ಬರಹಗಾರ್ತಿಯೂ ಆಗಿರುವ ಅವರ ಆಪ್ತ ಗೆಳತಿ ಸ್ವಾತಿ ಅವರನ್ನು ಬಾಳಾ ಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ನವೆಂಬರ್ 10 ರಂದು ಈ ಜೋಡಿಯ ವಿವಾಹ ಕಾರ್ಯಕ್ರಮ ಚೆನ್ನೈಯಲ್ಲಿ ಜರುಗಲಿದೆ.

ನವೆಂಬರ 8 ರಿಂದಲೇ ವಿವಾಹ ಕಾರ್ಯಕ್ರಮಗಳು ಶುರುವಾಗುತ್ತಿವೆ. ಅಂದು ಮೆಹಂದಿ ಕಾರ್ಯಕ್ರಮ ನಡೆಯಲಿದೆ. ಮರು ದಿನ ಅಂದ್ರೆ ನವೆಂಬರ್ 9 ರಂದು ನಿಶ್ಚಿತಾರ್ಥ ಹಾಗೂ ಸಂಗೀತ ಕಾರ್ಯಕ್ರಮ ಫಿಕ್ಸ್ ಆಗಿದೆ. ಆದಾದ ನಂತರ ನವೆಂಬರ್ 10 ರಂದು ಬೆಳಗ್ಗೆ 7.30 ಕ್ಕೆ ಚೆನ್ನೈನ ಇಂಜಂಬಾಕಂನಲ್ಲಿ ಮದುವೆ ಮುಹೂರ್ತ ಜರುಗಲಿದ್ದು, ಈಗಾಗಲೇ ಸಿದ್ಥತೆಗಳು ಭರದಿಂದ ಸಾಗಿವೆ.

ಕನ್ನಡ ಮೇಷ್ಟ್ರು ಕಾಳಿದಾಸ ಚಿತ್ರದಲ್ಲಿ ಜಗ್ಗೇಶ್ ಜತೆಗೆ 21 ನಟಿಯರು!

ತುಂಬಾ ದಿನಗಳ ಹಿಂದೆಯೇ ರಿಷಿ ಹಾಗೂ ಸ್ವಾತಿ ಹೈದರಾಬಾದಿನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನವೆಂಬರ್ 20 ರಂದು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ
 ಆಯೋಜಿಸಲಾಗಿದೆ. ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ನಟರಾಗಿ ಬೆಳ್ಳಿತೆರೆಗೆ ಪರಿಚಯವಾದ ರಿಷಿ, ಸದ್ಯಕ್ಕೆ ಬೇಡಿಕೆಯ ನಟ. ನವೆಂಬರ್ 20 ರಂದು ನಡೆಯುವ ಆರತಕ್ಷತೆ ಕಾರ್ಯಕ್ರಮಕ್ಕೆ ಚಿತ್ರೋದ್ಯಮದ ಹಲವು ನಟ-ನಟಿಯರು ಭಾಗವಹಿಸುವ ನಿರೀಕ್ಷೆಯಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!
ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?