
ಕೆಲವರಿಗೆ ಮಕ್ಕಳು ಬೇಡ ಎಂದಿರುತ್ತದೆ, ನಾವು ಇರುವಷ್ಟು ದಿನ ಚೆನ್ನಾಗಿ ಇರೋಣ, ಈಗಾಗಲೇ ಜನಿಸಿರೋ ಮಕ್ಕಳಿಗೆ ಏನಾದರೂ ಮಾಡೋಣ ಎಂಬ ಮನೋಭಾವ ಕೂಡ ಇರುವುದು, ಅಂತೆಯೇ ಕನ್ನಡ ಸೇರಿ ಬೇರೆ ಭಾಷೆಯ ಸೆಲೆಬ್ರಿಟಿಗಳು ಕೂಡ ಮಕ್ಕಳು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾದರೆ ಅವರು ಯಾರು? ಯಾರು?
ಹಿತಾ ಚಂದ್ರಶೇಖರ್
ಸಿಹಿ ಕಹಿ ಚಂದ್ರು ಅವರ ಹಿರಿಯ ಮಗಳು ಹಿತಾ ಅವರು ಕಿರಣ್ ಶ್ರೀನಿವಾಸ್ ಅವರನ್ನು ಮದುವೆಯಾಗಿದ್ದಾರೆ. “ನಾನು ನಾಯಿ ಮರಿಗಳನ್ನು ಸಾಕುವೆ, ನನಗೆ ಮಕ್ಕಳು ಬೇಡ” ಎಂದು ಅವರು ಹೇಳಿದ್ದಾರೆ.
ಸುಮನ್ ನಗರ್ಕರ್
ಸುಮನ್ ನಗರ್ಕರ್ ಅವರು ಮದುವೆಯಾಗಲೇ ಮಗು ಬೇಡ ಎಂದು ನಿರ್ಧಾರ ಮಾಡಿದ್ದರಂತೆ. ಸದ್ಯ ಅವರೀಗ ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ.
ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್
ಬಾಲಿವುಡ್ ನಟಿ ವಿದ್ಯಾ ಬಾಲನ್, ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಮದುವೆಯಾಗಿ ದಶಕಗಳು ಕಳೆದಿವೆ. ನಮಗೆ ಮಕ್ಕಳು ಬೇಡ ಎಂದು ಈ ಜೋಡಿ ಸ್ಪಷ್ಟವಾಗಿ ಹೇಳಿಕೊಂಡಿದೆ. ಮಕ್ಕಳನ್ನು ಮಾಡಿಕೊಂಡ್ವಿ ಅಂತ ಜೀವನ ಪೂರ್ಣವಾಗುವುದಿಲ್ಲ, ಮಕ್ಕಳು ಇಲ್ಲದಿದ್ರೂ ಕೂಡ ದಾಂಪತ್ಯ ಜೀವನ ಕಂಪ್ಲೀಟ್ ಆಗಿರುತ್ತದೆ ಎಂದು ಹೇಳಿದ್ದರು. ಅಂದಹಾಗೆ ಇವರು ಮದುವೆಯಾಗಿ 13 ವರ್ಷ ಕಳೆದಿದೆ.
ಜಾನ್ ಅಬ್ರಹಾಂ, ಪ್ರಿಯಾ ರುಂಚಲ್
ನಟ ಜಾನ್ ಅಬ್ರಹಾಂ, ಅವರ ಪತ್ನಿ ಪ್ರಿಯಾ ರುಂಚಲ್ ಕೂಡ ಮಕ್ಕಳನ್ನು ಮಾಡಿಕೊಂಡಿಲ್ಲ. ವೃತ್ತಿ ಜೀವನದ ಬಗ್ಗೆ ಫೋಕಸ್ ಆಗಿರುವ ಇವರು ಮದುವೆಯಾಗಿ 11 ವರ್ಷ ಆಗಿದೆ.
ಶಬಾನಾ ಆಜ್ಮಿ ಮತ್ತು ಜಾವೇದ್ ಅಖ್ತರ್
ಭಾರತೀಯ ಚಿತ್ರರಂಗದ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಜೋಡಿಗಳಲ್ಲಿ ಜಾವೇದ್ ಅಖ್ತರ್, ಶಬಾನಾ ಅಜ್ಮಿ ಕೂಡ ಒಂದು. ಜಾವೇದ್ ಅವರಿಗೆ ಈ ಹಿಂದಿನ ಮದುವೆಯಿಂದ ಮಕ್ಕಳಿದ್ದರೂ ಕೂಡ, ಶಬಾನಾ ಅಜ್ಮಿಯವರಿಂದ ಅವರು ಮಕ್ಕಳನ್ನು ಪಡೆದಿಲ್ಲ. ಗಟ್ಟಿಯಾದ ಸ್ನೇಹದಿಂದಲೇ ಇವರ ಸಂಬಂಧ ಇನ್ನೂ ಕೂಡ ಗಟ್ಟಿಯಾಗಿದೆ ಎಂದು ಹೇಳಲಾಗುತ್ತದೆ.
ದಿಲೀಪ್ ಕುಮಾರ್, ಸಾಯಿರಾ ಬಾನು
ನಟ ದಿಲೀಪ್ ಕುಮಾರ್, ಸಾಯಿರಾ ಬಾನು ಮದುವೆಯಾಗಿ ಸಾಕಷ್ಟು ವರ್ಷಗಳಾಗಿದ್ದರೂ ಕೂಡ ಸ್ವಂತ ಮಕ್ಕಳಿರಲಿಲ್ಲ. ದಿಲೀಪ್ ಕುಮಾರ್ ಒಮ್ಮೆ ಸಂದರ್ಶನವೊಂದರಲ್ಲಿ, ನಮಗೆ ಮಕ್ಕಳಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಮಕ್ಕಳಿಲ್ಲ ಎಂದು ಬೇಸರ ಇರಲಿಲ್ಲ. ಈಗ ಇರುವ ಕುಟುಂಬದ ಜೊತೆ ಚೆನ್ನಾಗಿದ್ದೇನೆ” ಹೇಳಿದ್ದರು.
ಆಯೇಷಾ ಜುಲ್ಕಾ
90 ರ ನಟಿ ಆಯೇಷಾ ಜುಲ್ಕಾ ಅವರು “ಇದು ನನ್ನ ಆಯ್ಕೆ, ನಿಮ್ಮದಲ್ಲ" ಎಂದು ನೇರವಾಗಿ ಹೇಳಿದ್ದರು.
ಗೌರಿ ಶಿಂಧೆ
ಇಂಗ್ಲಿಷ್ ವಿಂಗ್ಲಿಷ್ ಸಿನಿಮಾ ನಿರ್ದೇಶಕಿ, ನಿರ್ಮಾಪಕಿ ಗೌರಿ ಶಿಂಧೆ ಕೂಡ ಮಕ್ಕಳು ಬೇಡ ಎಂದು ಹೇಳಿದ್ದರು.
ಟಬು
ನಟಿ ತಬು ಅವರು ಮದುವೆಯಾಗಿಲ್ಲ, ಮಗು ಕೂಡ ದತ್ತು ಪಡೆದಿಲ್ಲ. ನನಗೆ ವೃತ್ತಿಜೀವನ, ವೈಯಕ್ತಿಕ ಸ್ವಾತಂತ್ರ್ಯ ಮುಖ್ಯ ಎಂದು ಅವರು ಹೇಳಿದ್ದರು.
ಅಕ್ಷಯ್ ಖನ್ನಾ
ಬಾಲಿವುಡ್ ನಟ ಅಕ್ಷಯ್ ಖನ್ನಾ ಕೂಡ ಮದುವೆ ಆಗಿಲ್ಲ. ಅಷ್ಟೇ ಅಲ್ಲದೆ ಮಗುವನ್ನು ಪಡೆದಿಲ್ಲ. “ನನ್ನ ಮಕ್ಕಳು ನನ್ನನ್ನು ನೋಡಿಕೊಳ್ತಾರೆ ಎನ್ನೋದು ಸುಳ್ಳು” ಎಂದು ನಟ ಅಕ್ಷಯ್ ಖನ್ನಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.