ಕ್ಯಾನ್ಸರ್ ಬಾಧಿಸುತ್ತಿದ್ದರೂ ಅಂದು ಅಪರ್ಣಾ ಹೇಳಿದ್ದ ಮಾತುಗಳು ಕಣ್ಣೀರು ತರಿಸದೇ ಇರದು..!

By Shriram Bhat  |  First Published Jul 17, 2024, 3:24 PM IST

'ತುಂಬಾ ಟೈಮ್ ಆಯ್ತು ನೀವು ತೆರೆ ಮೇಲೆ ಬಂದು.. ಬರೀ ಆಂಕರ್ ಆಗಿನೇ ನೋಡ್ತಾ ಇರ್ತೀವಿ ನಿಮ್ಮನ್ನ..'ಎಂಬ ಪ್ರಶ್ನಗೆ ಸಖತ್ ಸಮಯಪ್ರಜ್ಞೆ ಮೆರೆದ ಅಪರ್ಣಾ ಅವರು 'ಸೌರಭ್ ಕುಲಕರ್ಣಿ, ನಿರ್ದೇಶಕರೇ ಹಾಗೂ ಆಪರಿಯ ನಿರ್ದೇಶಕರೇ ದಯಮಾಡಿ ಈ ಮಾತನ್ನು ಕೇಳಿಸಿಕೊಳ್ಳಿ..


ನಟಿ, ನಿರೂಪಕಿ ಅಪರ್ಣಾ ವಸ್ತಾರೆ (Aparna Vastarey) ಅವರು ಇತ್ತೀಚೆಗಷ್ಟೇ ನಮ್ಮನ್ನಗಲಿರುವುದು ಗೊತ್ತೇ ಇದೆ. ಕಳೆದ ಎರಡು ವರ್ಷಗಳಿಂದಲೂ ಅಪರ್ಣಾ ಅವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಅದನ್ನು ತಮ್ಮ ಆಪ್ತರ ಬಳಿ ಬಿಟ್ಟು ಬೇರೆಲ್ಲೂ ಅವರು ಹೇಳಿಕೊಂಡಿರಲಿಲ್ಲವಂತೆ. ಕಾರಣ, ಅಪರ್ಣಾ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ, ಆಪ್ತರೂ ಇದ್ದಾರೆ. 'ಕ್ಯಾನ್ಸರ್‌ ಬಾಧಿಸುತ್ತಿರುವ ಸಂಗತಿ ಹೇಳಿ ಯಾರ ಮನಸ್ಸಿಗೂ ನೋವು ಉಂಟುಮಾಡುವುದು ಬೇಡ. ಮಹಾಮಾರಿ ಬಂದಿದ್ದಾಗಿದೆ, ಆದರೆ ಆ ನೋವು ನನಗೇ ಇರಲಿ' ಇಂದಿದ್ದರಂತೆ ಅಪರ್ಣಾ. 

ಒಮ್ಮೆ ಅವರು ಸಿನಿಮಾ ಒಂದನ್ನು ನೋಡಿಕೊಂಡು ಥಿಯೇಟರ್‌ನಿಂದ ಹೊರಗೆ ಬರುತ್ತಿದ್ದಂತೆ ಮಾಧ್ಯಮದವರು ಸಹಜವಾಗಿಯೇ 'ಮಸಣದ ಹೂವು' ಖ್ಯಾತಿಯ ನಟಿ ಅಪರ್ಣಾ ಅವರನ್ನು ಸುತ್ತುವರಿದು ಪ್ರಶ್ನೆ ಕೇಳಿದ್ದಾರೆ. ಅಲ್ಲಿ ಕ್ಯಾನ್ಸರ್ ಪೇಶೆಂಟ್ ಆಗಿದ್ದರೂ ಅದನ್ನು ತೋರಿಸಿಕೊಳ್ಳದೇ ಅವರು ಖುಷಿಯಿಂದ ನಗುನಗುತ್ತಾ ಉತ್ತರ ಕೊಟ್ಟಿರುವ ರೀತಿಗೆ ಯಾರಾದರೂ ಫಿದಾ ಆಗದೇ ಇರಲು ಸಾಧ್ಯವೇ ನೋಡಿ. ಹಾಗಿದ್ದರೆ, ಅಪರ್ಣಾ ಅವರಿಗೆ ಏನು ಪ್ರಶ್ನೆ ಕೇಳಿ, ಅದೇನು ಉತ್ತರ ಪಡೆದಿದ್ದಾರೆ ನೋಡಿ..!

Tap to resize

Latest Videos

ಸೌತ್‌ಗೆ ರಾಧಿಕಾ ಪಂಡಿತ್‌ ನಾರ್ತ್‌ಗೆ ಮಾಧುರಿ ದೀಕ್ಷಿತ್ ಸಂತೂರ್ ಮಮ್ಮಿಗಳಾ? ಕಾಮೆಂಟ್‌ ಬರ್ತಿವೆ ಹೀಗಂತ!

ನೀವು ಈ ಏಜ್‌ನಲ್ಲೂ ಇಷ್ಟು ಯಂಗ್ ಆಗಿದೀರಲ್ಲ, ಕಾರಣ ಏನು ಎಂಬ ಪ್ರಶ್ನೆಗೆ ಅಪರ್ಣ 'ಅದೇ, ಇಂಥದ್ದನ್ನೆಲ್ಲಾ ನೋಡಿ ಖುಷಿ ಪಟ್ಟೆ. ಹಾಸ್ಯನೂ ಮನೋಹರ್ ಸರ್ ಹೇಳಿದಂಗೆ, ಒಂದು ಸಟಲ್ ಅಂದ್ರೆ ಸೂಕ್ಷ ಎಲಿಮೆಂಟ್. ಈ ಸಿನಿಮಾದಲ್ಲಿ ಹಾಸ್ಯವನ್ನು ತುಂಬಾ ಸುಖ್ಷ್ಮವಾಗಿ ಇದ್ರಲ್ಲಿ ಮಿಕ್ಸ್ ಮಾಡಿದಾರೆ. ಒಟ್ಟಾರೆಯಾಗಿ ಈಗ ಎರಡು ಗಂಟೆಗಳ ಕಾಲ ಕಳೆದಿದ್ಉ ಗೊತ್ತಾಗ್ಲಿಲ್ಲ. ನೀವು ಸಿನಿಮಾಗೆ ಹೋದಾಗ, ಆಕಳಿಸಬಾರ್ದು, ತೂಕಡಿಸ್ಬಾರ್ದು, ಕೊನೆಗೆ ನೋಡಿ ಬರ್ಬೇಕು. ಆ ವಿಷ್ಯದಲ್ಲಿ ಶೇಕಡಾ ನೂರರಷ್ಟ ಯಶಸ್ವಿಯಾಗಿದ್ದಾರೆ ಸೌರಭ್ ಅಂತ ನಂಗೆ ಅನ್ನಿಸ್ತು. 

ಕನ್ನಡದಲ್ಲಿ ಈ ರೀತಿಯಲ್ಲಿ ಹೊಸ ಹೊಸ ನಿರ್ದೇಶಕರು ಬರಬೇಕು, ಹೊಸ ಹೊಸ ಪ್ರಯೋಗಗಳು ಆಗ್ಬೇಕು. ಈಗಿನ ಕಾಲದಲ್ಲಿ ಸಿನಿಮಾ ಮಾಡೋದು ಅಷ್ಟು ಸುಲಭದ ಮಾತಲ್ಲ ಅಂತ ಎಲ್ರಿಗೂ ಗೊತ್ತು. ಆದರೆ, ಸಾಕಷ್ಟು ಹೊಸ ಹೊಸ ಕಥೆಗಳು ಇರುವ ಸಿನಿಮಾಗಳು ಈಗ ಬರ್ತಾ ಇವೆ. ಇನ್ನು ಹೆಚ್ಚು ಹೆಚ್ಚು ಬರ್ಬೇಕು ಅನ್ನೋದು ನನ್ನಾಸೆ ಅಂದಿದ್ದರು ನಟಿ, ನಿರೂಪಕಿ ಅಪರ್ಣಾ ಅವರು.

ಲಡ್ಡು ಬಂದು ಬಾಯಿಗೆ ಬಿದ್ದಿಲ್ಲ, ಸಿಕ್ಕಿರುವ ಹಾಲಿವುಡ್ ಚಾನ್ಸ್ ಹಿಂದೆ ನೂರಾರು ಕಥೆಗಳಿವೆ!

'ತುಂಬಾ ಟೈಮ್ ಆಯ್ತು ನೀವು ತೆರೆ ಮೇಲೆ ಬಂದು.. ಬರೀ ಆಂಕರ್ ಆಗಿನೇ ನೋಡ್ತಾ ಇರ್ತೀವಿ ನಿಮ್ಮನ್ನ..'ಎಂಬ ಪ್ರಶ್ನಗೆ ಸಖತ್ ಸಮಯಪ್ರಜ್ಞೆ ಮೆರೆದ ಅಪರ್ಣಾ ಅವರು 'ಸೌರಭ್ ಕುಲಕರ್ಣಿ, ನಿರ್ದೇಶಕರೇ ಹಾಗೂ ಆಪರಿಯ ನಿರ್ದೇಶಕರೇ ದಯಮಾಡಿ ಈ ಮಾತನ್ನು ಕೇಳಿಸಿಕೊಳ್ಳಿ.. ಒಳ್ಳೇ ಅವಕಾಶ ಸಿಕ್ರೆ ಖಂಡಿತ ಮಾಡ್ತೀನಿ. ಒಬ್ಬ ಕಲಾವಿದೆಗೆ ಯಾವತ್ತೂ ಕ್ಯಾಮೆರಾ ಮುಂದೆ ಅಥವಾ, ಸ್ಟೇಜ್ ಮೇಲೆ ಇರೋ ಉಸಿರೇ ಅದು.. ಹಾಗಾಗಿ ಒಳ್ಳೇ ಅವಕಾಶ ಸಿಕ್ಕಾಗ ಖಂಡಿತ ಮಾಡ್ತೀನಿ' ಅಂದಿದ್ದರು ನಗುಮೊಗದ, ಅಚ್ಚಗನ್ನಡ ಭಾಷೆಯ ಅಪರ್ಣಾ. 

ಒಟ್ಟಿನಲ್ಲಿ, ಕ್ಯಾನ್ಸರ್ ಆಗಿದ್ದಾಗಲೂ ಕೂಡ ಆ ನೋವನ್ನು ತಮ್ಮಲ್ಲೇ ನುಂಗಿಕೊಂಡು, ಯಾರೇ ಏನೇ ಪ್ರಶ್ನೆ ಕೇಳಿದರೂ ಅಪರ್ಣಾ ನಗುನಗುತ್ತಲೇ ಉತ್ತರ ಕೊಡುತ್ತಿದ್ದರು. ಕ್ಯಾನ್ಸರ್ ಬಾಧಿಸುತ್ತಿದ್ದರೂ ಒಳ್ಳೆಯ ಅವಕಾಶ ಸಿಕ್ಕರೆ ನಟಿಸುತ್ತೇನೆ ಎಂದಿರುವ ಮಾತುಗಳನ್ನು ಕೇಳಿದರೆ ಅವರಿಗೆ ತಾವು ಬದುಕುವ ಭರವಸೆ, ನಂಬಿಕೆ ಅದೆಷ್ಟೋ ಇತ್ತು ಎನ್ನಬಹುದು. ಕೇಳಿದ್ದ ಪ್ರಶ್ನೆಗಳಿಗೆಲ್ಲಾ ಯಾವುದೇ ಹಮ್ಮುಬಿಮ್ಮು ಇಲ್ಲದೇ, ನೇರಾನೇರ ಸೊಗಸಾದ ಅಚ್ಚಗನ್ನಡದಲ್ಲಿ ಅಪರ್ಣಾ ಮಾತನಾಡಿದ್ದಾರೆ.  

click me!