50ರೂ. ಗೆ ಬಣ್ಣ ಹಚ್ಚಿದೆ, ಅವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶ: ಉಮಾಶ್ರೀ ಭಾವುಕ

Published : Nov 08, 2026, 07:03 PM IST
Umashree

ಸಾರಾಂಶ

1977ರಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ 'ದರ್ಬಾರ್ ಡ್ಯಾನ್ಸ್' ಮೂಲಕ ಕಲಾರಂಗ ಪ್ರವೇಶಿಸಿದ ಈ ನಟಿಗೆ ಸಿಕ್ಕ ಮೊದಲ ಸಂಭಾವನೆ ಕೇವಲ 50 ರೂಪಾಯಿ. ಆರಂಭದಲ್ಲಿ ಪೌರಾಣಿಕ ಪಾತ್ರದಲ್ಲಿ ನಟಿಸಿದಾಗ ಅವರ ಮಗನಿಗೆ ಕೇವಲ ಎರಡು ತಿಂಗಳಾಗಿತ್ತು. ಇನ್ನೂ ಏನೆಲ್ಲಾ ಇದೆ ನೋವಿನ ಕಥೆ?

50 ವರ್ಷಗಳ ಕಲಾ ಪಯಣ, 70ರ ವಯಸ್ಸಿನ ಸಂಭ್ರಮ: ಯಶಸ್ಸಿನ ಹಿಂದಿನ ಶ್ರಮ ಸ್ಮರಿಸಿ ಭಾವುಕರಾದ ಉಮಾಶ್ರೀ!

ಹಿರಿಯ ನಟಿ ಹಾಗೂ ಶಾಸಕಿ ಉಮಾಶ್ರೀ (Umashree) ವಿಧಾನಸಭೆಯಲ್ಲಿ ಮಾಡಿದ ಭಾವುಕ ಭಾಷಣ ಇದೀಗ ಗಮನ ಸೆಳೆಯುತ್ತಿದೆ. ಸಿನಿಮಾ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಾವು ಬೆಳೆದು ಬಂದ ಹಾದಿಯನ್ನು ನೆನಪಿಸಿಕೊಂಡ ಅವರು, ತಮ್ಮ ಸಾಧನೆಯ ಹಿಂದೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಜೀವನದಲ್ಲಿ ದೊರೆತ ಯಶಸ್ಸು ಮತ್ತು ಗೌರವವನ್ನು ನಾಡಿನ ಸಮಸ್ತ ಮಹಿಳೆಯರಿಗೆ ಹಾಗೂ ಜನ್ಮ ನೀಡಿದ ತಾಯಿಗೆ ಅರ್ಪಿಸುವುದಾಗಿ ಹೇಳಿದ್ದಾರೆ.

ಯಾವುದೇ ಸಾಧನೆ ಸುಲಭವಾಗಿ ಸಿಗುವುದಿಲ್ಲ. ಒಂದು ಕಲ್ಲು ಸುಂದರ ಮೂರ್ತಿಯಾಗಬೇಕಾದರೂ ಹಲವರ ಪರಿಶ್ರಮ ಅಗತ್ಯ. ಅದೇ ರೀತಿ ತಮ್ಮನ್ನು ಕಲಾವಿದೆಯಾಗಿ ಮತ್ತು ರಾಜಕಾರಣಿಯಾಗಿ ರೂಪಿಸಲು ಅನೇಕರು ನೆರವಾಗಿದ್ದಾರೆ ಎಂದು ಉಮಾಶ್ರೀ ಅಭಿಪ್ರಾಯಪಟ್ಟಿದ್ದಾರೆ.

1977ರಲ್ಲಿ ಮುಖಕ್ಕೆ ಬಣ್ಣ

1977ರಲ್ಲಿ ಮುಖಕ್ಕೆ ಬಣ್ಣ ಹಚ್ಚಿ, ಗೆಜ್ಜೆ ಕಟ್ಟಿ 'ದರ್ಬಾರ್ ಡ್ಯಾನ್ಸ್' ಮೂಲಕ ಕಲಾರಂಗ ಪ್ರವೇಶಿಸಿದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಆಗ ಸಿಕ್ಕ ಮೊದಲ ಸಂಭಾವನೆ ಕೇವಲ 50 ರೂಪಾಯಿ. ಆರಂಭದಲ್ಲಿ ಪೌರಾಣಿಕ ಪಾತ್ರದಲ್ಲಿ ನಟಿಸಿದಾಗ ತಮ್ಮ ಮಗನಿಗೆ ಕೇವಲ ಎರಡು ತಿಂಗಳಾಗಿತ್ತು ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅವರಿಗೆ 70 ವರ್ಷ ತುಂಬುವ ಹೊಸ್ತಿಲಲ್ಲಿದ್ದು, ಕಲಾ ಜೀವನಕ್ಕೂ 50 ವರ್ಷಗಳು ಪೂರ್ಣಗೊಳ್ಳುತ್ತಿವೆ.

ಪ್ರೇಕ್ಷಕರ ಚಪ್ಪಾಳೆ, ಶಿಳ್ಳೆಗಳೇ ಕಲಾವಿದರಿಗೆ ಮತ್ತಷ್ಟು ಕಲಿಯಲು ಮತ್ತು ಸಾಧಿಸಲು ಪ್ರೇರಣೆ ನೀಡುತ್ತವೆ ಎಂದಿರುವ ಅವರು, ಕನ್ನಡಿಗರು ತೋರಿದ ಪ್ರೀತಿ, ಅಭಿಮಾನವನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ.

ರಾಜಕೀಯ ಜೀವನ

ರಾಜಕೀಯ ಜೀವನದ ಕುರಿತು ಮಾತನಾಡಿದ ಉಮಾಶ್ರೀ, ಬಂಗಾರಪ್ಪನವರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶಿಸಿದ್ದನ್ನು ಸ್ಮರಿಸಿದ್ದಾರೆ. 1994ರಲ್ಲಿ ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ, ಜಗದೀಶ್ ಶೆಟ್ಟರ್ ಹಾಗೂ ಬೊಮ್ಮಾಯಿ ಅವರಂತಹ ನಾಯಕರ ಎದುರು ಕಣಕ್ಕಿಳಿದಿದ್ದರು. ಆಗ ನಾಲ್ಕು ಸಾವಿರ ಮತಗಳನ್ನು ಪಡೆದಿದ್ದರಂತೆ. ಆ ಘಟನೆಯನ್ನು ನೆನಪಿಸಿಕೊಂಡ ಅವರು, ಬೊಮ್ಮಾಯಿ ಈಗಲೂ ತಮಾಷೆಯಾಗಿ ತಮ್ಮನ್ನು ಸೋಲಿಸಿದ್ದೀರಿ ಎಂದು ಹೇಳುತ್ತಾರೆ ಎಂದಿದ್ದಾರೆ.

ಉತ್ತರ ಕರ್ನಾಟಕದ ಜನರೇ ತಮ್ಮನ್ನು ಶಾಸಕಿಯಾಗಿ, ಮಂತ್ರಿಯಾಗಿ ಬೆಳೆಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ ಉಮಾಶ್ರೀ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬೆಂಬಲ ನೀಡಿದ ಎಲ್ಲ ನಾಯಕರನ್ನು ಸ್ಮರಿಸಿದ್ದಾರೆ. ಕೊನೆಯಲ್ಲಿ ತಮಗೆ ದೊರೆತ ಪ್ರಶಸ್ತಿಯನ್ನು ನಾಡಿನ ಹೆಣ್ಣುಮಕ್ಕಳಿಗೆ ಅರ್ಪಿಸುವುದಾಗಿ ಹೇಳಿ ಭಾವುಕರಾದರು. ಡಾ. ರಾಜ್‌ಕುಮಾರ್ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ತಾವು ಕನಸಿನಲ್ಲೂ ನಿರೀಕ್ಷಿಸದ ಅತ್ಯುನ್ನತ ಗೌರವಗಳು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಸಿನಿಮಾಕ್ಕೆ ಆಫರ್​ ಬಂದ್ರೂ ರಕ್ಷಿನೇ ಫೈನಲ್​ ಮಾಡೋದು: ಈ ವಿಡಿಯೋದಲ್ಲಿ ರಶ್ಮಿಕಾ ಏನ್​ ಹೇಳಿದ್ರು ಕೇಳಿ
ಮಹಿಳೆಯರ ಆರೋಗ್ಯದ ಬಗ್ಗೆ ಮಹತ್ವದ ಅಭಿಯಾನಕ್ಕೆ ಮುಂದಾದ ಮೋಹಕ ತಾರೆ ರಮ್ಯಾ: ಏನದು ಪ್ಲ್ಯಾನ್?