ಒಂದು ದಿನವೂ ಮನೆಯಲ್ಲಿ ಇರಲು ಸಮಯ ಸಿಗುತ್ತಿಲ್ಲ: ‘ಪ್ರೇಮದ ಊರಲಿ’ ನಟಿ ತಪಸ್ವಿನಿ ಭಾವುಕ

Published : Nov 13, 2026, 08:07 PM IST
Thapaswini Poonacha

ಸಾರಾಂಶ

‘ಪ್ರೇಮದ ಊರಲಿ’ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದೆ. ಕೇವಲ 60 ಶೋಗಳಿಂದ ಆರಂಭವಾಗಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಚಿತ್ರದ ಗೆಲುವಿನ ಬಗ್ಗೆ ರುಕ್ಮಿಣಿ ಪಾತ್ರಧಾರಿ ತಪಸ್ವಿನಿ ಪೂಣಚ್ಚ ಸಂತಸ ಹಂಚಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಪ್ರಚಾರ, ಪ್ಯಾನ್ ಇಂಡಿಯಾ ಹವಾ ಇಲ್ಲದೆಯೂ ಒಂದು ಸಿನಿಮಾ ಪ್ರೇಕ್ಷಕರ ಮನಸ್ಸು ಗೆಲ್ಲಬಹುದು ಎಂಬುದಕ್ಕೆ ‘ಪ್ರೇಮದ ಊರಲಿ’ ಸಾಕ್ಷಿಯಾಗಿದೆ. ಕೇವಲ 60 ಶೋಗಳೊಂದಿಗೆ ಚಿತ್ರಮಂದಿರಗಳಲ್ಲಿ ತನ್ನ ಪಯಣ ಆರಂಭಿಸಿದ ಈ ಸಿನಿಮಾ, ಪ್ರೇಕ್ಷಕರ ಮೆಚ್ಚುಗೆ ಹೆಚ್ಚಾದಂತೆ 100ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ವಿಸ್ತರಿಸಿಕೊಂಡಿದೆ. ಇದೀಗ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿರುವ ಚಿತ್ರತಂಡ ಗೆಲುವಿನ ಸಂಭ್ರಮದಲ್ಲಿದೆ.

ಇಂದಿನ ಸ್ಪರ್ಧಾತ್ಮಕ ಸಿನಿಮಾ ಜಗತ್ತಿನಲ್ಲಿ ಕನ್ನಡ ಚಿತ್ರವೊಂದು ಈ ಮಟ್ಟದ ಯಶಸ್ಸು ಸಾಧಿಸಿರುವುದು ವಿಶೇಷ. ಕಥೆಯ ಮೇಲಿನ ನಂಬಿಕೆಯೊಂದಿಗೆ ತೆರೆಗೆ ಬಂದ ‘ಪ್ರೇಮದ ಊರಲಿ’ಗೆ ಪ್ರೇಕ್ಷಕರು ನಿರೀಕ್ಷೆಗೂ ಮೀರಿದ ಪ್ರೀತಿ ನೀಡಿದ್ದಾರೆ. ಈ ಗೆಲುವಿನ ಹಿಂದೆ ಅಭಿಮಾನಿಗಳ ಬೆಂಬಲವೇ ದೊಡ್ಡ ಶಕ್ತಿಯಾಗಿದ್ದು, ಚಿತ್ರದ ಕಲಾವಿದರು ಕೂಡ ಜನರ ಪ್ರೀತಿಯನ್ನು ಸಂಭ್ರಮಿಸುತ್ತಿದ್ದಾರೆ.

ಈ ನಡುವೆ ಸಿನಿಮಾದಲ್ಲಿ ರುಕ್ಮಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಒಂದು ದಿನವೂ ಮನೆಯಲ್ಲಿ ನೆಮ್ಮದಿಯಾಗಿ ಕಳೆಯಲು ಸಾಧ್ಯವಾಗದಷ್ಟು ಜನರು ಪ್ರೀತಿ ತೋರಿಸುತ್ತಿದ್ದಾರೆ ಎಂದು ಅವರು ಖುಷಿ ವ್ಯಕ್ತಪಡಿಸಿದ್ದಾರೆ.

‘ಜನರ ಕೂಗೇ ನಮ್ಮ ಸಕ್ಸಸ್ ಸೆಲೆಬ್ರೇಷನ್’

‘ಪ್ರೇಮದ ಊರಲಿ’ 50 ದಿನ ಪೂರೈಸಿರುವುದಕ್ಕೆ ತಪಸ್ವಿನಿ ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರೇಕ್ಷಕರ ಪ್ರೀತಿಯೇ ಕಾರಣ ಎಂದಿರುವ ಅವರು, ಯಶಸ್ಸನ್ನು ಹೇಗೆ ಸಂಭ್ರಮಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

'ತುಂಬಾನೇ ಖುಷಿಯಾಗುತ್ತಿದೆ. ಇವತ್ತು 50 ದಿನಗಳನ್ನು ಪೂರೈಸಿದ್ದೇವೆ. ‘ಪ್ರೇಮದ ಊರಲಿ’ ಸಿನಿಮಾ ನಿಮ್ಮ ಪ್ರೀತಿಯಿಂದ ಥಿಯೇಟರ್‌ಗಳಲ್ಲಿ ಇನ್ನೂ ಓಡುತ್ತಿದೆ. ಸಿನಿಮಾ ಬಿಡುಗಡೆಯಾದ ಮೇಲೆ ಒಂದು ದಿನವೂ ಮನೆಯಲ್ಲಿ ಇರಲು ಸಮಯ ಸಿಗುತ್ತಿಲ್ಲ. ಅಷ್ಟು ಪ್ರೀತಿ ತೋರಿಸುತ್ತಿದ್ದೀರಿ. ಸಕ್ಸಸ್ ಅನ್ನು ಯಾವ ರೀತಿ ಸೆಲೆಬ್ರೇಟ್ ಮಾಡುತ್ತಿದ್ದೀರಿ ಎಂದು ಎಲ್ಲರೂ ಕೇಳುತ್ತಿದ್ದರು. ಜನರ ಜೊತೆಗೆ ಬೆರೆತಾಗ ಕೇಳಿಬರುವ ಆ ಕೂಗು, ಸಂಭ್ರಮವೇ ನಮ್ಮ ಯಶಸ್ಸಿನ ಆಚರಣೆ' ಎಂದು ತಪಸ್ವಿನಿ ಪೂಣಚ್ಚ ಹೇಳಿದ್ದಾರೆ.

ಸಿನಿಮಾದ ಗೆಲುವಿನಲ್ಲಿ ಹೆಣ್ಣುಮಕ್ಕಳ ಪಾತ್ರವೂ ದೊಡ್ಡದು!

ಇದೇ ಸಂದರ್ಭದಲ್ಲಿ ಚಿತ್ರದ ಯಶಸ್ಸಿನ ಹಿಂದೆ ಮಹಿಳೆಯರ ಕೊಡುಗೆಯನ್ನೂ ತಪಸ್ವಿನಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ. ನಿರ್ಮಾಪಕಿ, ರುಕ್ಮಿಣಿ ಹಾಗೂ ವಸಂತಾ ಪಾತ್ರಗಳ ಜೊತೆಗೆ ಸಂತು ಪಾತ್ರಧಾರಿ ಶ್ರೀರಾಮ್ ಅವರ ಪತ್ನಿಯ ಕಾಲ್ಗುಣವೂ ಚಿತ್ರದ ಗೆಲುವಿಗೆ ಕಾರಣ ಎಂದು ಅವರು ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಹೇಳಿದ್ದಾರೆ.

'ಈ ಸಿನಿಮಾಗೆ ಹೆಣ್ಣುಮಕ್ಕಳೇ ಶಕ್ತಿ ಅಂತ ಹೇಳಬಹುದು. ನಮ್ಮ ನಿರ್ಮಾಪಕಿ, ರುಕ್ಮಿಣಿ, ವಸಂತ ಹಾಗೂ ಸಂತು ಪಾತ್ರಧಾರಿ ಶ್ರೀರಾಮ್ ಅವರ ಪತ್ನಿಯ ಕಾಲ್ಗುಣ' ಎಂದು ನಗುತ್ತಲೇ ಚಿತ್ರದ ಯಶಸ್ಸಿನ ಹಿಂದಿನ ವಿಶೇಷ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ಕೇವಲ 60 ಶೋಗಳಿಂದ ಆರಂಭವಾದ ‘ಪ್ರೇಮದ ಊರಲಿ’ಯ ಪಯಣ 50 ದಿನಗಳ ಸಂಭ್ರಮದವರೆಗೆ ತಲುಪಿದೆ. ಚಿತ್ರಕ್ಕೆ ಸಿಕ್ಕಿರುವ ಜನರ ಪ್ರೀತಿಯೇ ನಿಜವಾದ ಯಶಸ್ಸಿನ ಸಂಭ್ರಮ ಎಂದು ತಪಸ್ವಿನಿ ಪೂಣಚ್ಚ ಅವರ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ರುಕ್ಮಿಣಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಸ್ಥಾನ ಪಡೆದಿರುವ ನಟಿಗೆ ಈ ಗೆಲುವು ಖುಷಿಯ ಜೊತೆಗೆ ಮರೆಯಲಾಗದ ಅನುಭವವನ್ನೂ ನೀಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಟೋಗಳ ಮೇಲೂ ವಸಂತಾ ಫೋಟೋ, ಮೊಬೈಲ್‌ಗಳಲ್ಲಿ ‘ಪ್ರೇಮದ ಊರಲಿ’ ಹಾಡು: ರಮಿಕಾ ಫುಲ್ ಖುಷ್
ಆಮೀರ್​ ಖಾನ್​ ದಾಖಲೆ ಮುರೀತಾರಾ ಯಶ್​: 2 ಸಾವಿರ ಕೋಟಿ ಕಲೆಕ್ಷನ್​ ಮಾಡಿದ ಆ ಸಿನಿಮಾ ಯಾವುದು