
ಕಳೆದ 70-80 ಹಾಗೂ ತೊಂಬತ್ತರ ದಶಕದಲ್ಲಿ ನಟ ವಜ್ರಮುನಿ (Vajramuni) ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಆಸ್ತಿ ಎಂಬಂತಿದ್ದರು. ರಂಗಭೂಮಿ ಕಲಾವಿದರಾಗಿದ್ದ ನಟ ವಜ್ರಮುನಿಯವರು ಸಿನಿಮಾಗಳಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದರು. ತೆರೆಯ ಮೇಲೆ ಅವರ ಪಾತ್ರ ನೋಡಿ ಅದೆಷ್ಟೋ ಚಿಕ್ಕ ಮಕ್ಕಳು ಹೆದರಿಕೊಂಡು ಸಿನಿಮಾ ಥಿಯೇಟರ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರಂತೆ. ಅನೇಕ, ಮಹಿಳೆಯರು ಹಾಗು ಮಕ್ಕಳು ರಾತ್ರಿ ಕನಸಿನಲ್ಲಿ ಹೆದರಿಕೊಂಡು ಅಳುತ್ತಿದ್ದರಂತೆ.
ಹೌದು, ನಟ ವಜ್ರಮುನಿಯವರ ಪಾತ್ರ ಪೋಷಣೆ ಹಾಗೇ ಇರುತ್ತಿತ್ತು. ಬೆಂಕಿ ಉಗುಳುವ ಕಣ್ಣುಗಳನ್ನು ನೋಡಿದರೆ ಯಾರಿಗಾದರೂ ಭಯ ಆಗಲೇಬೇಕು. ಅಷ್ಟೇ ಅಲ್ಲ, ವಿಲನ್ ರೋಲ್‌ನಲ್ಲಿ ನಟ ವಜ್ರಮುನಿ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನುವಷ್ಟು ಅಮೋಘವಾಗಿ ನಟಿಸುತ್ತಿದ್ದರು. ಸಿನಿಮಾವನ್ನು ತೆರೆಯಲ್ಲಿ ನೋಡುವ ಪ್ರೇಕ್ಷಕರು ಹೆದರಿಕೊಳ್ಳುವುದು ಹಾಗಿರಲಿ, ಜೊತೆಯಲ್ಲಿ ನಟಿಸುತ್ತಿದ್ದ ನಾಯಕಿಯರು, ನಟಿಯರು ಸೆಟ್‌ನಲ್ಲೇ ಭಯಗೊಳ್ಳುತ್ತಿದ್ದರು. ಕೊನೆಗೆ ನಿರ್ದೇಶಕರು ಹಾಗೂ ಸಹನಟರೂ ಕೂಡ ಕೆಲವೊಮ್ಮೆ ಅವರನ್ನು ಸೆಟ್ಟಲ್ಲಿ ನೋಡಿ ಭಯಬೀಳುತ್ತಿದ್ದರಂತೆ.
ಗುರುಪ್ರಸಾದ್ ಕೊನೆ ಸಿನಿಮಾಗೆ ಬಿಡುಗಡೆ ಭಾಗ್ಯವಿಲ್ಲ, ಮುಂದೆಂದೂ ಬರೋದೇ ಇಲ್ವಂತೆ, ಯಾಕೋ..!
ವಿಲನ್ ಅಂದ್ರೆ ವಜ್ರಮುನಿ ಎಂಬಂತೆ ಇರುತ್ತಿದ್ದ, ನಟಿಸುತ್ತಿದ್ದ ನಟ ವಜ್ರಮುನಿಯವರು ಬದುಕಿದ್ದು 61 ವರ್ಷ. ಆದರೆ, ಅಷ್ಟರಲ್ಲೇ ಅವರು ಬಹಳಷ್ಟು ಸಿನಿಮಾಗಳಲ್ಲಿ ನಟಿಸಿ ಭಾರೀ ಜನಪ್ರಿಯತೆ ಪಡೆದಿದ್ದಾರೆ. ಅವರು ಸ್ಕ್ರೀನ್ ಮೇಲೆ ನಟಿಸುವಾಗ ಭಯ ಹುಟ್ಟಿಸುತ್ತಿದ್ದರೂ ಆಫ್‌ಸ್ಕ್ರೀನ್ ಅಂತ ಬಂದ್ರೆ ಅವರು ಅಪ್ಪಟ ಸಾಫ್ಟ್. ಸಹನಟಿಯರ ಜೊತೆ ನಟಿಸುವಾಗ ನಟ ವಜ್ರಮುನಿಯವರು ನಟಿಯರಿಗೆ ಕೈ ಮುಗಿದು ಮೊದಲೇ ಹೇಳಿಕೊಂಡು ಬಳಿಕ ಪಾತ್ರ ಮಾಡುತ್ತಿದ್ದರಂತೆ.
ನೋಡಮ್ಮಾ, ನಟಿಸುವುದು ನನ್ನ ವೃತ್ತಿ ಧರ್ಮ.. ನನ್ನ ವೃತ್ತಿಯ ಭಾಗವಾಗಿ ನಾನು ಮಾಡೋ ಪಾತ್ರಕ್ಕೆ ನಾನು ನ್ಯಾಯ ಒದಗಸಿಲೇಬೇಕು. ಈ ಪಾತ್ರ ನಾನು ಮಾಡುವಾಗ ನಿನಗೆ ಪಾತ್ರದಿಂದ ಅಥವಾ ಮನಸ್ಸಿಗೆ ನೋವಾದ್ರೆ ನನ್ನನ್ನು ಕ್ಷಮಿಸಿಬಿಡಮ್ಮಾ..' ಎಂದು ಮೊದಲೇ ಹೇಳಿ ಬಳಿಕ ಪಾತ್ರ ಮಾಡ್ತಾ ಇದ್ರು ನಟ ವಜ್ರಮುನಿ. ಆದರೂ ಸಾಧ್ಯವಾದಷ್ಟೂ ಸಹನಟಿಯರಿಗೆ ತೊಂದರೆ ಆಗದ ರೀತಿಯಲ್ಲಿ ನಡೆದುಕೊಂಡು, ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು.
ಸನ್ನಿ ಲಿಯೋನ್ ಹೇಳಿಕೊಟ್ಟ ಪಾಠ ಯಾಕೆ ಕಲೀಲಿಲ್ಲ..? ರಣವೀರ್ ಅಲ್ಲಾಬಾಡಿಯಾಗೆ ಸಕತ್ ಕ್ಲಾಸ್!
ನಟ ವಜ್ರಮುನಿಯವರು ಸಂಪತ್ತಿಗೆ ಸವಾಲ್, ಮಯೂರ್, ಅಂತ, ಬಾಂಬೆ ದಾದಾ ಸೇರಿದಂತೆ ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ನಟನೆಯಲ್ಲಿ ಪಕ್ಕಾ ವಿಲನ್ ಅಗಿದ್ದರೂ ನಿಜಜೀವನದಲ್ಲಿ ಪಕ್ಕಾ ಸಭ್ಯಸ್ಥ ನಟರಾಗಿದ್ದರು. ಅದೆಷ್ಟೋ ಬಾರಿ ತಮ್ಮ ಮೃದು ಸ್ವಭಾವದಿಂದ ಶೂಟಿಂಗ್ ಸೆಟ್‌ನಲ್ಲಿ ಆದ ಕೆಲವು ಘಟನೆಗಳಿಗೆ ಪ್ರತಿಕ್ರಿಯೆ ನೀಡದೇ ತಮ್ಮೊಳಗೇ ನೊಂದುಕೊಂಡಿದ್ದೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.