ನಟಿ ಶ್ರುತಿ ಹರಿಹರನ್ ಖಾತೆಯಿಂದ ರಮ್ಯಾಗೆ ಮೆಸೇಜ್‌; ಹ್ಯಾಕ್‌ ಮಾಡಲು ಪ್ರಯತ್ನಿಸಿದ ಕಿಡಿಗೇಡಿಗಳ

By Suvarna News  |  First Published Feb 19, 2022, 3:40 PM IST

ವೆರಿಫೈಡ್ ಖಾತೆ ಹೊಂದಿರುವವರು ಹುಷಾರಾಗಿರಿ. ಹ್ಯಾಕರ್‌ಗಳ ಬಗ್ಗೆ ಎಚ್ಚರಿಕೆ ಕೊಟ್ಟ ಮೋಹಕ ತಾರೆ.


ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ (Ramya) ಕೆಲವು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಈಗೀಗ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಕಲಾವಿದರಿಂದ ಹಿಡಿದು ನಿರ್ದೇಶಕರು, ಗಾಯಕರಿಗೆ ಸಪೋರ್ಟ್‌ ಆಗಿ ರಮ್ಯಾ  ನಿಂತಿದ್ದಾರೆ. ಸಿನಿಮಾ ಸೂಪರ್ ಆಗಿದ್ದರೆ, ಹಾಡು ಅದ್ಭುತವಾಗಿದ್ದರೆ ಪೋಸ್ಟ್ ಹಾಕಿ ತಂಡದ ಬೆನ್ನು ತಟ್ಟುತ್ತಾರೆ ಈ ಸುಂದರಿ.  ಆದರೀಗ ರಮ್ಯಾ ಖಾತೆಯನ್ನೇ ಯಾರೋ ಹ್ಯಾಕ್ ಮಾಡುವ ಪ್ರಯತ್ನ ಮಾಡಿದ್ದಾರೆ ಅದು ಶ್ರತಿ ಹರಿಹರನ್ (Sruthi Hariharan) ಖಾತೆ ಮೂಲಕ.

ಏನಿದು ಘಟನೆ: 

Tap to resize

Latest Videos

ರಮ್ಯಾ ಅವರಿಗೆ ಇನ್‌ಸ್ಟಾಗ್ರಾಂ (Instagram) ಖಾತೆ ಮೂಲಕ ನಟಿ ಶ್ರುತಿ ಹರಿಹರನ್ ಮೆಸೇಜ್ ಮಾಡುತ್ತಾರೆ. 

ಶ್ರುತಿ: ಹಾಯ್ ದಿವ್ಯಾ ನೀವು ಹೇಗಿದ್ದೀರಾ?ನಾನು ನಿಮಗೆ ಕಳುಹಿಸಿದ ನ್ಯೂಸ್‌ ಸೈಟ್‌ ಓಪನ್ ಮಾಡಿ ಓದಿದ್ದೀರಾ? 
ರಮ್ಯಾ:  ಶ್ರುತಿ ನಾನು ಚೆನ್ನಾಗಿರುವೆ. ದಯವಿಟ್ಟು ಕ್ಷಮಿಸು ನಾನು  ನ್ಯೂಸ್‌ ಅಪ್ಡೇಟ್ ಆಗುವುದರಲ್ಲಿ ಕೊಂಚ ವೀಕ್.
ಶ್ರುತಿ: ನೀವು ನನ್ನ ಕಾಂಪ್ಲಿಮೆಂಟ್‌ನ ಇಷ್ಟ ಪಡುತ್ತೀರಾ ಅಂದುಕೊಂಡಿರುವೆ. (ಗೂಗಲ್‌ ಲಿಂಕ್ ಶೇರ್ ಮಾಡುತ್ತಾರೆ) ಕೊಂಚ ಸಮಯದ ನಂತರ ಇದನ್ನು ಓದಿ ಆಯ್ತಾ? ಎಂದು ಕೇಳುತ್ತಾರೆ.
ರಮ್ಯಾ: ನನಗೆ ಓಪನ್ ಮಾಡಲು ಆಗುತ್ತಿಲ್ಲ. ಸೈನ್‌ ಇನ್‌ ಆಗುವುದಕ್ಕೆ ಕೇಳುತ್ತಿದೆ.
ಶ್ರುತಿ: ಹೌದು ರಮ್ಯಾ! ನೀವು ಇನ್‌ಸ್ಟಾಗ್ರಾಂ ಮೂಲಕವೇ ಈ ಸುದ್ದಿಯನ್ನು ಓದಬೇಕು. ಆನಂತರ ನಿಮ್ಮನ್ನು ನಿಜವಾದ ಸೈಟ್‌ಗೆ ಕರೆದುಕೊಂಡು ಹೋಗುತ್ತದೆ ಈ ಲಿಂಕ್.
ರಮ್ಯಾ: ಈ ರೀತಿ ಮಾಡುವುದು ನನಗೆ ಗೊತ್ತಿಲ್ಲ ತಿಳಿದುಕೊಳ್ಳುವೆ. ನಿಜಕ್ಕೂ ಇದು ಶ್ರುತಿನಾ? ಅಥವಾ ಯಾರಾದರೂ ಶ್ರುತಿ ಖಾತೆ ಹ್ಯಾಕ್ ಮಾಡಿದ್ದೀರಾ? ನನಗೆ ಬಲವಾಗಿ ಅನಿಸುತ್ತಿದೆ ನೀವು ಹ್ಯಾಕರ್‌ಗಳು ಎಂದು.

ಶ್ರುತಿ ಖಾತೆ ಹ್ಯಾಕ್ ಆಗಿಲ್ಲ ನಾನೇ ಮೆಸೇಜ್ ಮಾಡುತ್ತಿರುವುದು ಬೇಗ ಕ್ಲಿಕ್ ಮಾಡಿ ಓಪನ್ ಮಾಡಿ ಎಂದು ರಮ್ಯಾಗೆ ಪದೇ ಪದೇ ಒತ್ತಾಯ ಮಾಡುತ್ತಾರೆ. ಅಲ್ಲಿಗೆ ಇದು ಹ್ಯಾಕರ್‌ಗಳ ಕೆಲಸ ಎಂದು ಖಚಿತವಾಗುತ್ತದೆ.

' ನನ್ನ ಪ್ರಕಾರ ನಟಿ ಶ್ರುತಿ ಹರಿಹರನ್‌ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ. ಅವರ ಖಾತೆಯಿಂದ ನನಗೆ ಮೆಸೇಜ್ ಮಾಡಿ ಲಿಂಕ್ ಕ್ಲಿಕ್ ಮಾಡುವಂತೆ ಹೇಳುತ್ತಿದ್ದಾರೆ. ಪುಣ್ಯಕ್ಕೆ ನನ್ನ ಖಾತೆಯಲ್ಲಿ ಆಕ್ಸಿಸ್‌ ಇಲ್ಲ. ಟು ಸ್ಟೆಪ್‌ ವೇರಿಫಿಕೇಷ್‌ ಇರುವುದಕ್ಕೆ ನಾನು ಬಜಾವ್. ಶ್ರುತಿ ಖಾತೆಯಿಂದ ಬರುವ ಯಾವ ಮೆಸೇಜ್‌ಗೂ ಪ್ರತಿಕ್ರಿಯೆ ನೀಡಬೇಡಿ' ಎಂದು ರಮ್ಯಾ ಬರೆದುಕೊಂಡಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಹೊಸ ಸಿನಿಮಾ ಅನೌನ್ಸ್‌ ಮಾಡುತ್ತಿರುವ ನಟಿ Ramya!

ಇದಾದ ಕೆಲವು ನಿಮಿಷಗಳಲ್ಲಿ ಶ್ರುತಿ ಇನ್‌ಸ್ಟಾಗ್ರಾಂನಲ್ಲಿ ಹ್ಯಾಕ್‌ ಬಗ್ಗೆ ಬರೆದುಕೊಂಡಿದ್ದಾರೆ. 'ನನ್ನ ಖಾತೆಯನ್ನು ಯಾರೋ ಹ್ಯಾಕ್ ಮಾಡಿ ವಿಚಿತ್ರ ಮೆಸೇಜ್‌ಗಳನ್ನು ಕಳುಹಿಸುತ್ತಿದ್ದಾರೆ. ದಯವಿಟ್ಟು ಕ್ಷಮಿಸಿ. ನನ್ನಿಂದ ಮೆಸೇಜ್ ಪಡೆದುಕೊಂಡಿರುವವರು ಯಾರೂ ಈ ಲಿಂಕ್‌ನ ಕ್ಲಿಕ್ ಮಾಡಬೇಡಿ. ಸೆಲೆಬ್ರಿಟಿಗಳು ಮತ್ತು ವೆರಿಫೈಡ್‌ ಖಾತೆಗಳಿಗೆ ಮಾತ್ರ ಲಿಂಕ್ ಕಳುಹಿಸಲಾಗಿದೆ' ಎಂದು ಶ್ರುತಿ ಬರೆದುಕೊಂಡಿದ್ದಾರೆ.

ಹಿಜಾಬ್ v/s ಕೇಸರಿ, ಯುವಕರ ವಿಡಿಯೋಗೆ ಬೇಸರ ವ್ಯಕ್ತಪಡಿಸಿದ ನಟಿ Ramya

'ಬುಧವಾರ ನನಗೆ ನಿರ್ದೇಶಕ onir ಖಾತೆಯಿಂದ ಒಂದು ಲಿಂಕ್ ಬರುತ್ತದೆ. ಅದು ಕೂಡ ಹೀಗೆ ಕ್ಲಿಕ್ ಮಾಡಲು ಹೇಳಿತ್ತು ನಾನು ಮಾಡಲಿಲ್ಲ. ಅನುಮಾನದಿಂದ ತಕ್ಷಣವೇ ಪಾಸ್‌ವರ್ಡ್‌ ಬದಲಾಯಿಸಿದೆ. ಎರಡು ದಿನಗಳ ನಂತರ ಮುಂಬೈನಿಂದ ಯಾರೋ ನನ್ನ ಖಾತೆಗೆ ಲಾಗ್‌ಇನ್ ಆಗಿದ್ದಾರೆ. ದೂರು ನೀಡಿ ನನ್ನ ಖಾತೆಯನ್ನು ಹಿಂಪಡೆದುಕೊಂಡಿರುವೆ. ಮತ್ತೆ ಪಾಸ್‌ವರ್ಡ್‌ ಬದಲಾಯಿಸಿರುವೆ. ಈ ಹ್ಯಾಕರ್‌ಗಳು ನಾನು ಇದುವರೆಗೂ ಯಾರೊಟ್ಟಿಗೆ ಮೆಸೇಜ್ ಮಾಡಿದ್ದೆ ಅದೆಲ್ಲವೂ ಡಿಲೀಟ್ ಮಾಡಿದ್ದಾರೆ. ಅವರು ಲಿಂಕ್ ಕಳುಹಿಸಿರುವುದನ್ನೂ ಡಿಲೀಟ್ ಮಾಡಿದ್ದಾರೆ' ಎಂದು ಶ್ರುತಿ ಹೇಳಿದ್ದಾರೆ.

click me!