ಅಭಿಮಾನಿ ಮೇಲೆ ನಟ Dhanveer ಹಲ್ಲೆ, FIR ದಾಖಲು!

Suvarna News   | Asianet News
Published : Feb 19, 2022, 02:09 PM IST
ಅಭಿಮಾನಿ ಮೇಲೆ ನಟ Dhanveer ಹಲ್ಲೆ, FIR ದಾಖಲು!

ಸಾರಾಂಶ

ಸೆಲ್ಫಿ ಕೇಳಿದ ಅಭಿಮಾನಿ ಮೇಲೆ ನಟ ಧನ್ವೀರ್ ಹಲ್ಲೆ, ಸಿನಿಮಾ ಪ್ರಚಾರದ ವೇಳೆ ನಡೆದ ಘಟನೆ.

ಸಂತು (Santu) ನಿರ್ದೇಶನ ಮಾಡಿರುವ ಬೈಟು ಲವ್ (Bytwo) ಸಿನಿಮಾದಲ್ಲಿ ನಟ ಧನ್ವೀರ್ ಗೌಡ (Dhanveer Gowda) ಮತ್ತು ಶ್ರೀಲೀಲಾ (Sreeleela) ಅಭಿನಯಿಸಿದ್ದಾರೆ. ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿರುವ ಸಮಯದಲ್ಲಿ ನಟ ಧನ್ವೀರ್ ವಿರುದ್ಧ ಎಫ್‌ಐಆರ್‌ (FIR) ದಾಖಲಾಗಿದೆ. ಏನಿದು ಆರೋಪ? ನಿಜಕ್ಕೂ ನಡೆದ ಘಟನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಫೆಬ್ರವರಿ 17ರಂದು ಅನುಪಮಾ ಠಾಕಿಸ್‌ (Anupama Talkies) ಬಳಿ ಈ ಘಟನೆ ನಡೆದಿದೆ. ಸಿನಿಮಾ ರಿಲೀಸ್‌ಗೆ ಸಿದ್ಧತೆಗಳು ಹೇಗೆ ನಡೆಯುತ್ತಿದೆ ಎಂದು ಧನ್ವೀರ್ ತಮ್ಮ ತಂಡದ ಜೊತೆ ನಿಂತು ನೋಡಿಕೊಳ್ಳುತ್ತಿದ್ದರು. ಈ ವೇಳೆ ಸ್ನೇಹಿತರ ಜೊತೆ ಊಟ ಮಾಡಿಕೊಂಡು ಚಂದ್ರಶೇಖರ್ (Chandrashekar) ತೆರಳುತ್ತಿರುವಾಗ ನಟನನ್ನು ನೋಡಿದ್ದಾರೆ. ಅವರ ಇಡೀ ಗುಂಪು ಸೆಲ್ಫಿ (Selfie) ಪಡೆದುಕೊಳ್ಳಲು ಹೋಗಿದ್ದಾರೆ. ಸೆಲ್ಫಿ ಕೊಡಿ ಸರ್ ಎಂದು ಹೇಳಿದಾಗ ಧನ್ವೀರ್ ಅಸಭ್ಯವಾಗಿ ಮಾತನಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ ಎನ್ನಲಾಗಿದೆ. 

Film Review: ಬೈಟು ಲವ್

ಧನ್ವೀರ್ ಫೋಟೋ ಕೊಡಲು ನಿರಾಕರಿಸಿದಾಗ ನಾನು ಧ್ರುವ ಸರ್ಜಾ ಬಳಿ ಬೆಳಗ್ಗೆ ಫೋಟೋ ತೆಗೆಸಿಕೊಳ್ಳುವೆ ನಿಮ್ಮಿಂದ ನಮ್ಮ ಕನ್ನಡ ಚಿತ್ರರಂಗ ಉದ್ದಾರ ಆಗುವುದಿಲ್ಲ ಎಂದು ಚಂದ್ರಶೇಖರ್ ಹೇಳಿದ್ದಾರೆ. ಆಗ ಕೋಪಗೊಂಡ ಧನ್ವೀರ್ ಮತ್ತು ಸ್ನೇಹಿತರು ಚಂದ್ರಶೇಖರ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲೇ ಇದ್ದ ಖಾಸಗಿ ಮಾಧ್ಯಮ (Media) ಸೆರೆ ಹಿಡಿಯುತ್ತಿರುವುದನ್ನು ನೋಡಿ ಧನ್ವೀರ್ ಸ್ನೇಹಿತರು ಚಂದ್ರಶೇಖರ್‌ನನ್ನು ಪಕ್ಕಕ್ಕೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

'ಯಾವುದೋ ಒಂದು ಚಾನೆಲ್‌ ಇಲ್ಲಿ ಇತ್ತು ಯಾವಾಗ ಧನ್ವೀರ್ ಹುಡುಗರು ನನ್ನ ಕೈ ಹಿಡಿದುಕೊಂಡು ಎಳೆದುಕೊಂಡು ಹೋದರು ಆಗ ಆ ಕ್ಯಾಮೆರಾ (Camera) ದವರು ನನ್ನ ಹಿಂದೆನೇ ಬಂದರು. ನನ್ನ ಬಾತ್‌ರೂಮ್‌ನಲ್ಲಿ (Bathroom) ಕೂಡಿ ಹಾಕಿ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಯಾರೂ ಸಹಾಯ ಮಾಡುವುದಕ್ಕೆ ಬರಲಿಲ್ಲ.'ಎಂದು ಚಂದ್ರಶೇಖರ್ ಹೇಳಿಕೆ ನೀಡಿದ್ದಾರೆ. ಚಂದ್ರಶೇಖರ್ ಸ್ನೇಹಿತರು ಸೆಲ್ಫಿ ಪಡೆದುಕೊಳ್ಳಲು ಓಡಿ ಬರುವಾಗ ಈಗ ಸೆಲ್ಫಿ ಬೇಡ ನಾಳೆ ಬೆಳಗ್ಗೆ ಬರೋಣ ಬನ್ನಿ ಎಂದು ಚಂದ್ರುಶೇಖರ್ ಹೇಳಿದ್ದಾರೆ ಇದು ಧನ್ವೀರ್ ಸ್ನೇಹಿತರಿಗೆ ಕೇಳಿಸಿ  ನೀನು ಮೊದಲು ಕನ್ನಡ ಉಳಿಸಿ ಎಂದು ಹೇಳಿದ್ದಾರೆ. ಆಗ ದೊಡ್ಡ ಜಗಳ ಶುರುವಾಗಿದೆ ಎನ್ನಲಾಗಿದೆ. ಈ ಘಟನೆ ಬಗ್ಗೆ ಎರಡು ರೀತಿ ವಿವರ ಸಿಕ್ಕಿದೆ ಆದರೆ ಧನ್ವೀರ್ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.

ಶಿವಮೊಗ್ಗ Zooನಲ್ಲಿ ಬ್ಲ್ಯಾಕ್ ಪ್ಯಾಂಥರ್, ಚಿರತೆ ದತ್ತು ಪಡೆದ ನಟ ಧನ್ವೀರ್!

'ಧನ್ವೀರ್ ಅವರೇ ಕೊನೆಯಲ್ಲಿ ನೀರು (Water) ತಗೊಂಡು ಬಂದು ಕೊಟ್ಟು ಮುಖ ತೊಳೆದುಕೊಂಡು ಬಾ ನಿನ್ನ ನಂಬರ್ ಕೊಡು ನನಗೆ. ನಾನು ಯಾವುದೋ ಟೆನ್ಶನ್‌ನಲ್ಲಿ ಇದ್ದೆ ಮಾತನಾಡಿದ್ದು ತಪ್ಪಾಯ್ತು. ಬಾ ಮನೆಗೆ ಒಂದು ಸಲ ಅಂತ ಹೇಳಿದ್ದರು' ಎಂದು ಚಂದ್ರಶೇಖರ್ ಖಾಸಗಿ ಮಾಧ್ಯಮದಲ್ಲಿ ಮಾತನಾಡಿದ್ದಾರೆ. ಈ ಘಟನೆ ಬಗ್ಗೆ ಚಂದ್ರಶೇಖರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ನಟ ಧನ್ವೀರ್ ವಿರುದ್ಧ FIR ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?