ಮಗಳು ಕಿರುಚಾಡಿದರೂ ನಾನು ಹೊಡೆಯಲ್ಲ, ಬೈಯಲ್ಲ; ಪೇರೆಂಟಿಂಗ್ ಪಾಠ ಮಾಡಿದ ಶ್ರುತಿ ಹರಿಹರನ್

By Vaishnavi Chandrashekar  |  First Published Jun 5, 2024, 11:50 AM IST

 ಮಕ್ಕಳನ್ನು ಕೂಲ್ ಅಗಿ ಹ್ಯಾಂಡಲ್‌ ಮಾಡುವುದು ಹೇಗೆ ಎಂದು ಟಿಪ್ಸ್‌ ಕೊಟ್ಟ ನಟಿ ಶ್ರುತಿ ಹರಿಹರನ್‌...ಜೆಂಟಲ್‌ ಪೇರೆಂಟಿಂಗ್‌ ಅಂದ್ರೆ ಏನು?


ಕನ್ನಡ ಚಿತ್ರರಂಗದ ಸಿಂಪಲ್‌ ನಟಿ ಶ್ರುತಿ ಹರಿಹರನ್ ಇತ್ತೀಚಿಗೆ ಮಾಧ್ಯಮಗಳಲ್ಲಿ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಮಗಳ ಬಗ್ಗೆ ಹೆಚ್ಚಿಗೆ ಮಾತನಾಡಿದ್ದಾರೆ. ಜೆಂಟಲ್ ಪೇರೆಂಟಿಂಗ್‌ ರೂಲ್ಸ್ ಫಾಲೋ ಮಾಡುವ ಶ್ರುತಿ ಯಾಕೆ ಮಕ್ಕಳನ್ನು ಹೊಡೆದು ಬೈದು ಮಾತನಾಡಿಸಬಾರದು ಎಂದಿದ್ದಾರೆ. ಅಲ್ಲದೆ ಇದುವರೆಗೂ ಮಗಳು ಜಾನಕಿ ಮೇಲೆ ಕೈ ಮಾಡಿಲ್ಲ ಎಂದಿದ್ದಾರೆ. 

'ನಾನು ಜೆಂಟಲ್‌ ಪೇರೆಂಟಿಂಗ್‌ ನಂಬುವವಳು. ಇದವರೆಗೂ ನನ್ನ ಮಗಳಿಗೆ ಹೊಡೆದಿಲ್ಲ ಒಂದು ಸಲವೂ ಕೈ ಎತ್ತಿಲ್ಲ ಕೋಪ ಬಂದ್ರೂ ತೋರಿಸಿಕೊಂಡಿಲ್ಲ ಏಕೆಂದರೆ ನಮ್ಮ frustrationಯಿಂದ ಕೋಪ ಬರುವುದು ಅದನ್ನು ಅವರ ಮೇಲೆ ತೋರಿಸಿಕೊಳ್ಳಬಾರದು. ಮಗು ಮಾಡುವ ವಿಚಾರದಿಂದ ಎಂದೂ ಕೋಪ ಬರುವುದಿಲ್ಲ. ನನ್ನ ಗಂಡ ರಾಮ್‌ ಮತ್ತು ನಾನು ಜೆಂಟಪ್‌ ಪೇರೆಂಟಿಂಗ್ ಫಾಲೋ ಮಾಡ್ತೀವಿ. ಮಗಳು ಜಾನಕಿ ಹೊಸ ತಕರಾರು ಶುರು ಮಾಡಿಕೊಂಡಿದ್ದಾಳೆ, ಆಕೆಗೆ ಉದ್ದ ಕೂದಲು ತುಂಬಾನೇ ಇಷ್ಟವಾಗುತ್ತದೆ ಹೀಗಾಗಿ ಕತ್ತು ಎತ್ತಿ ಕೂದಲು ಮುಟ್ಟಿಕೊಂಡು ಉದ್ದ ಕೂದಲು ಉದ್ದ ಕೂದಲು ಅಂತ ಚಪಾ ಮಾಡುತ್ತಲೇ ಇರುತ್ತಾಳೆ' ಎಂದು ರೆಡಿಯೋ ಸಿಟಿ ಸಂದರ್ಶನದಲ್ಲಿ ಶ್ರುತಿ ಮಾತನಾಡಿದ್ದಾರೆ.

Latest Videos

undefined

ಮೊದ್ಲು ಕನ್ನಡ ಇಂಡಸ್ಟ್ರಿ ಬಿಟ್ಟು ಬೇರೆ ಕಡೆ ಹೋಗಿ; 'ಫುಲ್ ಮೀಲ್ಸ್‌' ನಟಿ ನೆಟ್ಟಿಗರಿಂದ ಬುದ್ಧಿಮಾತು

'ಕೆಲವೊಮ್ಮೆ ಆಕೆಗಿಂತ ಉದ್ದ ಕೂದಲು ಇರುವ ಹುಡುಗಿಯನ್ನು ನೋಡಿದಾಗ ಮನಸ್ಸಿನಲ್ಲಿ ಏನೋ ಒಂದು ರೀತಿ ತಳಮಳ ಆಗುತ್ತದೆ ಹೊಸ ಜಾನಕಿ ಹುಟ್ಟಿಕೊಳ್ಳುತ್ತಾಳೆ ಆಗ ರಬರ್ ಬ್ಯಾಂಡ್ ತೆಗೆದು ಜೋರಾಗಿ ಕೂಗಿ ಕಿರುಚಿ ಮಾಡುತ್ತಾಳೆ. ಇತ್ತೀಚಿಗೆ ಈ ಘಟನೆ ನಡೆದಿದ್ದು ನನ್ನ ಹುಟ್ಟುಹಬ್ಬದ ದಿನ. ಒಂದು ವಿಲ್ಲಾದಲ್ಲಿ ಆಚರಣೆ ಮಾಡುತ್ತಿದ್ವಿ ಆಗ ಆಕೆ ಕಿರಿಕಿರಿ ಶುರು ಮಾಡಿಕೊಂಡಳು ಆಗ ಸಮಾದಾನ ಮಾಡಲು 1 ಗಂಟೆ ಬೇಕಾಗಿತ್ತು. ಆ ಸಮಯದಲ್ಲಿ ಆಕೆ ಮೇಲೆ ನಾವು ಕೂಗಾಡಿಲ್ಲ ಕಿರುಚಾಡಿಲ್ಲ ಏನೂ ಮಾಡಿಲ್ಲ...ಏಕೆಂದರೆ ಆಕೆ ಏನು ಫೀಲ್ ಮಡುತ್ತಿದ್ದಾಳೆ ಅದು ಓಕೆ ಎಂದು ಭಾವಿಸುತ್ತೀನಿ. ನಾವು ಈ ರೀತಿ ವರ್ತಿಸಿದಾಗ ನಮ್ಮ ಪೋಷಕರು ಒಂದು ಸರಿಯಾಗಿ ಕೊಡುತ್ತಿದ್ದರು ಇಲ್ಲ ಕಣ್ಣಲ್ಲಿ ಒಂದು ಲುಕ್‌ ಕೊಟ್ಟರೆ ನಾವು ಮೂಲೆ ಸೇರುತ್ತಿದ್ವಿ' ಎಂದು ಶ್ರುತಿ ಹೇಳಿದ್ದಾರೆ.

ಆಂಕರ್ ಅನುಶ್ರೀ ಇಷ್ಟು ದಿನ ಮದುವೆ ಬೇಡ ಎನ್ನಲು ಕಾರಣವೇ ನಟ ಅರುಣ್ ಸಾಗರ್; ವಿಡಿಯೋ ವೈರಲ್!

'ಇತ್ತೀಚಿನ ದಿನಗಳಲ್ಲಿ ತಾಯಂದಿರು ಪ್ರತಿಯೊಂದು ವಿಚಾರಗಳನ್ನು ತಿಳಿದುಕೊಳ್ಳಲು ಗೂಗಲ್ ಮಾಡುತ್ತಾರೆ. ಈ ವಿಚಾರಕ್ಕೆ ನಮ್ಮ ಡಾಕ್ಟರ್ ಬೈಯುತ್ತಿದ್ದರು. ಮಕ್ಕಳಿಗೆ ಹಾಲುಣಿಸುವಾಗ ಮಲಗಿಸಬಾರದು ಎನ್ನುತ್ತಾರೆ ಆದರೆ ನಾನು ಆಕೆಯನ್ನು ಮಲಗಿಸುತ್ತಿದ್ದ ಕಾರಣ ನಾನು ಶೂಟಿಂಗ್ ಮಾಡುತ್ತಿದ್ದೆ. ಸಾಮಾನ್ಯವಾಗಿ 5 ವರ್ಷದವರೆಗೂ ಮಕ್ಕಳಿಗೆ ಆಗಾಗ ಜ್ವರ ಬರುತ್ತದೆ ಅದಕ್ಕೆ ಪೋಷಕರ ಮೇಲೆ ದೂರ ಬಾರದು. ಅಲ್ಲದೆ ಮಕ್ಕಳಿಗೆ ನಿದ್ರೆ ಟ್ರೈನಿಂಗ್ ಅಂತ ಈಗ ಮಾಡುತ್ತಾರೆ ಅದು ಮಕ್ಕಳಿಗೆ ಹಿಂದೆ ಕೊಡುತ್ತದ್ದೆ. ತಾಯಿಯಾಗಿ ನಮಗೆ ಏನು ವರ್ಕ್‌ ಆಗುತ್ತದೆ ಅದನ್ನು ಪಾಲಿಸಬೇಕು' ಎಂದಿದ್ದಾರೆ ಶ್ರುತಿ. 

click me!