ಆರ್‌ಆರ್‌ಆರ್ ಖ್ಯಾತಿಯ ಟೊಡರ್ ಸಾಥ್‌: ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ಸತತ 60 ದಿನ ಶೂಟಿಂಗ್‌!

By Girish Goudar  |  First Published Nov 7, 2024, 1:42 PM IST

ಆರ್‌ಆರ್‌ಆರ್' ಖ್ಯಾತಿಯ ಆ್ಯಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ ಕರಾವಳಿ ನೆಲದ ದಂತಕತೆಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಬನವಾಸಿ ಕದಂಬರ ಕಾಲಘಟ್ಟದ ಕಥೆ ಇರುವ 'ಕಾಂತಾರ 1' ಚಿತ್ರ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.


ಸಿನಿವಾರ್ತೆ(ನ.07):  ರಿಷಬ್ ಶೆಟ್ಟಿ ನಟನೆ, ನಿರ್ದೇಶನದ 'ಕಾಂತಾರ ಚಾಪ್ಟರ್ 1 ಚಿತ್ರೀಕರಣಕ್ಕೆ ಹಲವು ದಿನಗಳ ಕಾಲ ಬಿಡುವು ನೀಡಲಾಗಿತ್ತು. ಇದೀಗ ಮತ್ತೆ ಶೂಟಿಂಗ್ ಆರಂಭವಾಗಲಿದ್ದು, ಕುಂದಾಪುರದಲ್ಲಿರುವ ಸೆಟ್‌ನಲ್ಲಿ ಸತತ 60 ದಿನಗಳ ಕಾಲ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ. 

ಈ ಬಾರಿ 'ಆರ್‌ಆರ್‌ಆರ್' ಖ್ಯಾತಿಯ ಆ್ಯಕ್ಷನ್ ಡೈರೆಕ್ಟರ್ ಟೊಡರ್ ಲ್ಯಾಜರೋವ್ ಕರಾವಳಿ ನೆಲದ ದಂತಕತೆಗೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಇದಾದ ಬಳಿಕ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ. ಬನವಾಸಿ ಕದಂಬರ ಕಾಲಘಟ್ಟದ ಕಥೆ ಇರುವ 'ಕಾಂತಾರ 1' ಚಿತ್ರ ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

Tap to resize

Latest Videos

undefined

2025ಕ್ಕೆ ಕಾಂತಾರ ಚಾಪ್ಟರ್-1 ಓಪನ್: ಪ್ರಶಸ್ತಿ ಖುಷಿಯಲ್ಲಿ ಬಿಗ್ ನ್ಯೂಸ್ ಕೊಟ್ಟ ಹೊಂಬಾಳೆ

ಕಾಂತಾರ ಚಾಪ್ಟರ್​ 1 ಸೀಕ್ರೆಟ್ ಬಿಚ್ಚಿಟ್ಟ ರಿಷಬ್ ಶೆಟ್ಟಿ: ಸಮರ ವೀರನಾಗಿ ಹೊಸ ಅವತಾರ ಎತ್ತಿದ ಡಿವೈನ್ ಸ್ಟಾರ್!

ರಿಷಬ್ ಶೆಟ್ಟಿ ಟ್ಯಾಲೆಂಟ್‌ನ ಗತ್ತು ಇಡೀ ದೇಶಕ್ಕೆ ಗೊತ್ತು. ಹೀಗಾಗೆ ಶೆಟ್ರನ್ನ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಬಿಗಿದಪ್ಪಿತ್ತು. ಇಷ್ಟಾದ್ಮೇಲೆ ರಿಷಬ್ ಮೇಲೆ ನಿರೀಕ್ಷೆ ಬೆಟ್ಟದಷ್ಟಾಗಿದೆ. ಆ ನಿರೀಕ್ಷೆಯ ಬೆಟ್ಟ ಹತ್ತಿ ಹೊರಟಿದ್ದಾರೆ ಡಿವೈನ್​ ಸ್ಟಾರ್​​. ಅದಕ್ಕಾಗಿ ಕಳರಿಯಪಟ್ಟು ಯುದ್ಧ ಕಲೆ ಕಲಿಯುತ್ತಿದ್ದಾರೆ ರಿಷಬ್. ಹಾಗಾದ್ರೆ ರಿಷಬ್ ಕಳರಿ ಪಯಟ್ಟು ಕಲಾಕಾರ್ ಆಗಿದ್ದು ಯಾಕೆ..? ಜೆಸ್ಟ್ ಹ್ಯಾವ್ ಅ ಲುಕ್. ಅತ್ತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಮೇಲೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮೇಲೆ ಎಲ್ಲರ ಕಣ್ಣು ಇದೆ. 

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಚಿತ್ರದ ಶೇಕಡಾ 30ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಮುಂದಿನ ವರ್ಷವೇ ಸಿನಿಮಾ ರಿಲೀಸ್ ಎಂದು ನಿರ್ಮಾಪಕ ವಿಜಯ್ ಕಿರಗಂದೂರ್ ಬೇರೆ ಹೇಳಿದ್ದಾರೆ. ಇದೀಗ ರಿಷಬ್​ ಕಾಂತಾರಕ್ಕಾಗಿ ಕಳರಿ ಪಯಟ್ಟು ಕಲಾಕಾರ್ ಆಗಿದ್ದಾರೆ. ಕುಂದಾಪುರದ ಕೆರಾಡಿಯಲ್ಲಿ ಕಾಂತಾರ ಪ್ರೀಕ್ವೆಲ್ ಶೂಟಿಂಗ್ ಆಗುತ್ತಿದೆ. ಈ ಸಿನಿಮಾದಿಂದ 1000 ಕೋಟಿ ರೂ ಕಲೆಕ್ಷನ್ ಟಾರ್ಗೆಟ್ ಇಟ್ಟಿದ್ದಾರೆ. ಈ ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಕಸರತ್ತು ನಡೆಸುತ್ತಿದ್ದು, ಪಾತ್ರಕ್ಕಾಗಿ ಕಳರಿ ಪಯಟ್ಟು ಸಮರಕಲೆ ಕಲಿಯುತ್ತಿದ್ದಾರೆ. 

ದೈವದ ಚಿತ್ರ ಕಾಂತಾರ ಚಾಪ್ಟರ್1ಗೆ ವರುಣ ದೇವನ ಕಾಟ..! ಮಳೆಯಿಂದ ಶೂಟಿಂಗ್ ನಿಲ್ಲಿಸಿದ್ರು ರಿಷಬ್ ಶೆಟ್ಟಿ..!

ಕತ್ತಿ, ಗುರಾಣಿ ಹಿಡಿದು ರಿಷಬ್ ಶೆಟ್ಟಿ ಕಳರಿ ಪಯಟ್ಟು ಕಲಿಯುತ್ತಿರುವ ಫೋಟೊ ರಿವೀಲ್ ಆಗಿದೆ. ಕಳರಿ ಪಯಟ್ಟು ಕೇರಳದ ಪುರಾತನ ಸಮರಕಲೆ. 11-12ನೇ ಶತಮಾನದಲ್ಲಿ ಕೇರಳದಲ್ಲಿ ಕಳರಿಯಪಟ್ಟು ಸಮರಕಲೆ ಹುಟ್ಟಿಕೊಂಡಿತ್ತು. ಈಗ ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮಾರ್ಷಲ್ ಆರ್ಟ್ಸ್ಗೂ ಇದೇ ಕಳರಿ ಪಯಟ್ಟು ಮೂಲ ಎನ್ನಲಾಗುತ್ತದೆ. ಇಂದಿಗೂ ಕೇರಳದಲ್ಲಿ ಹಲವರು ಈ ಕಲೆಯನ್ನು ಶಿಸ್ತಿನಿಂದ ಕಲಿಯುತ್ತಿದ್ದಾರೆ. ಕರಾವಳಿಯ 'ಕಾಂತಾರ'-1 ಕಥೆಗೆ ಕೇರಳದ ಪುರಾತನ ಸಮರ ಕಲೆಗೂ ಏನು ಸಂಬಂಧ ಅನ್ನೋದೇ ಕಾಂತಾರ ಪ್ರೀಕ್ವೆಲ್​​ನ ಸೀಕ್ರೆಟ್. 

ಶಂಕರ್ ನಾಗ್ ನಟನೆಯ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಕೂಡ ಕಳರಿ ಪಯಟ್ಟು ಸನ್ನಿವೇಶಗಳಿದ್ದವು. ಮಲೆಯಾಳಂ ನಟ ಮೋಹನ್ ಲಾಲ್​ ಸಿನಿಮಾಗಳಲ್ಲೂ ಈ ಕಳರಿ ಪಯಟ್ಟು ಯುದ್ಧ ಕಲೆ ಪ್ರದರ್ಶನ ಆಗಿವೆ. ನಟಿ ಸಾಯಿ ಪಲ್ಲವಿ ಕೂಡ ಕಳರಿ ಪಯಟ್ಟು ಯುದ್ಧಕಲೆ ಕಲಿತಿದ್ದಾರೆ. ಅನುಕೋನಿ ಅತಿಧಿ ಸಿನಿಮಾದಲ್ಲಿ ಸಾಯಿ ಪಲ್ಲವಿ ತೊರಿಸಿದ್ದ ಕಳರಿ ಪಯಟ್ಟು ಸಮರ ಕಲೆ ಮರೆಯೋಕೆ ಸಾಧ್ಯವಿಲ್ಲ. ಈಗ ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್​ ಒನ್​ ಗಾಗಿ ಕಳರಿ ಪಯಟ್ಟು ಸಮಯ ಕಲೆ ಕಲಿತು ಬಂದಿದ್ದಾರೆ. ಕೇರಳದಲ್ಲಿ 15 ದಿನ ಈ ಸಮರಾಭ್ಯಾಸ ಮಾಡಿದ್ದಾರೆ ರಿಷಬ್. ಹೀಗಾಗಿ ಕಾಂತಾರ ಪ್ರೀಕ್ವೆಲ್​ ಮೇಲೆ ಈಗ ನಿರೀಕ್ಷೆಯ ಬೆಟ್ಟ ದೊಡ್ಡದಾಗಿದೆ.

click me!