ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಕಿಡಿ; 'ಬ್ರೋಕರ್‌'ಗಳಿಗೆ ಪ್ರೂವ್‌ ಮಾಡಬೇಕಿಲ್ಲ'?

Suvarna News   | Asianet News
Published : Sep 03, 2020, 04:06 PM ISTUpdated : Sep 03, 2020, 04:14 PM IST
ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ಕಿಡಿ; 'ಬ್ರೋಕರ್‌'ಗಳಿಗೆ ಪ್ರೂವ್‌ ಮಾಡಬೇಕಿಲ್ಲ'?

ಸಾರಾಂಶ

ಚಂದನವನದಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ. ಅದರಲ್ಲಿ ಗಂಡ ಹೆಂಡತಿ ನಟಿಯೂ ಇದ್ದಾರೆ ಎಂದು ಆರೋಪಿಸಿದ ಪ್ರಶಾಂತ್ ಸಂಬರಗಿ ವಿರುದ್ಧ ಸಂಜನಾ ತಿರುಗಿ ಬಿದ್ದಿದ್ದಾರೆ.

ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ ಡ್ರಗ್ಸ್ ವಿಚಾರ ಕೊರೋನಾ ವೈರಸ್‌ಗಿಂತಲೂ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದು, ಲಿಂಕ್ ಒಬ್ಬರಿಂದ ಮತ್ತೊಬ್ಬರದ್ದು ಸಿಗುತ್ತಿದೆ. ಗಾಂಜಾ ರಾಣಿ ಅನಿಕಾ ಪೊಲೀಸರಿಗೆ ಸಿಕ್ಕಾಕಿಕೊಂಡ ನಂತರ ಇಂದ್ರಜಿತ್ ಲಂಕೇಶ್‌ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದರು. ಸಿಸಿಬಿ ವಿಚಾರಣೆಯಲ್ಲಿರುವ ನಿರ್ದೇಶಕ ಇಂದ್ರಜಿತ್ ದಾಖಲೆ ಸಮೇತವಾಗಿ ವಿಚಾರಣೆಗೆ ಹಾಜರಾಗಿದ್ದು, ತಮ್ಮ ಬಳಿ ಇರುವ ಮಾಹಿತಿ ನೀಡಿದ್ದಾರೆ.

'ನಾನು ರಾಕಿ ಕಟ್ಟಿದ ಅಣ್ಣ ರಾಹುಲ್, ಅವರ ಬಗ್ಗೆ ನನಗೆ ಆತಂಕವಾಗ್ತಿದೆ'

ಪೆಡ್ಲರ್ ರಾಕೇಶ್‌ನನ್ನು ಪೊಲೀಸರು ಬಂಧಿಸಿದ ನಂತರ ನಟಿ ಸಂಜನಾ ಹೆಸರು ಕೇಳಿ ಬರುತ್ತಿದೆ. ಸಾರ್ವಜನಿಕರು ಹಾಗೂ ಮಾಧ್ಯಮದವರು ಪ್ರಶ್ನಿಸುತ್ತಿರುವ ಕಾರಣ ಸಂಜನಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಪ್ರಶಾಂತ್ ಸಂಬರಗಿ ಬಗ್ಗೆಯೂ ಮಾತನಾಡಿದ್ದಾರೆ. 

ಪ್ರಶಾಂತ್ ಬ್ರೋಕರ್‌ ಆ?:
ಡ್ರಗ್ಸ್‌ ಸ್ಕ್ಯಾಂಡಲ್‌ ವಿಚಾರವಾಗಿ ಅನೇಕರು ನನಗೆ ಪದೆ ಪದೇ ಕರೆ ಮಾಡುತ್ತಿದ್ದಾರೆ. ಇದರಿಂದ ನಾನು ಬಹಳ ನೋವು ಅನುಭವಿಸುವಂತಾಗಿದೆ.  ಇದರಿಂದ ನಾನೇನೂ ಹೆದರಿಲ್ಲ. ಆದರೆ, ಚೀಪ್ ಪಬ್ಲಿಸಿಟಿಯಿಂದ ದೂರ ಇರಬೇಕೆಂದು ಬಯಸುತ್ತೇನೆ. ನನ್ನ ಮಾಧ್ಯಮ ಸ್ನೇಹಿತರು ಒರಟಾಗಿ ವರ್ತಿಸಬಾರದೆಂದು ತೀರ್ಮಾನಿಸಿದ್ದೇನೆ. ಆದರೆ, ಅವರು ನನ್ನನ್ನು ಸುಮ್ಮನೆ ಬಿಡುತ್ತಿಲ್ಲ. ಈ ಕಾರಣಕ್ಕೆ ನಾನು ಕಾಲ್‌ ಕಟ್ ಮಾಡುತ್ತಿದ್ದೇನೆ. ಅಲ್ಲದೇ ಪ್ರಶಾಂತ್ ಸಂಬರಗಿ ಎಂಬ ವ್ಯಕ್ತಿಯೂ ನನ್ನ ಬಗ್ಗೆ ಮಾತನಾಡಿದ್ದಾರೆ. ಅವರು ರಾಜಕಾರಣಿಗಳಿಗೆ ಸರ್ವೆಂಟ್‌ ಎಂದು ಕೇಳಿದ್ದೇನೆಯೇ ಹೊರತು, ಅವರು ಯಾರೆಂಬುವುದೂ ಗೊತ್ತಿಲ್ಲ.  ಅವರು ಮಾಧ್ಯಮ ಎದುರು ಗಂಡ ಹೆಂಡತಿ ನಟಿ ಎಂದು ಹೇಳಿರುವುದನ್ನು ಕೇಳಿಸಿಕೊಂಡಿರುವೆ. ನಾನು ಒಂದೇ ಸಿನಿಮಾ ಮಾಡಿ, ಇಷ್ಟೆಲ್ಲಾ ಸಂಪಾದನೆ ಮಾಡಿರುವೆ ಎಂದಿದ್ದಾರೆ. ದಯವಿಟ್ಟು ನನ್ನ ವಿಕಿಪೀಡಿಯಾ ನೋಡಿದರೆ ನಾನೆಷ್ಟು ಸಿನಿಮಾಗಳಲ್ಲಿ, ಯಾವ ಯಾವ ಭಾಷೆಗಳಲ್ಲಿ ನಟಿಸಿರುವೆನೆಂದು. ಇದುವರೆಗೆ ಸುಮಾರು 50ಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳಲ್ಲಿ ಅಭಿನಯಿಸಿರುವೆ. ಅದರಲ್ಲಿ 43 ಸಿನಿಮಾಗಳಾಗಿದ್ದು, ಖ್ಯಾತ ನಟರಾದ ಶಿವಣ್ಣ, ದರ್ಶನ್ ಸರ್, ಪವನ್ ಕಲ್ಯಾಣ್ ಸರ್, ಪ್ರಭಾಸ್ ರಾಜು, ಸುದೀಪ್‌ ಸರ್ ಸೇರಿ ಅನೇಕ ದೊಡ್ಡ ದೊಡ್ಡ ಕಲಾವಿಧರೊಂದಿಗೂ ತೆರೆ ಹಂಚಿ ಕೊಂಡಿರುತ್ತೇನೆ. ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿಯೂ ನಟಿಸಿದ್ದೀನಿ.

ಮತ್ತೊಬ್ಬ ಖ್ಯಾತಿ ನಟಿಯ ಆಪ್ತ ಸಿಸಿಬಿ ಬಲೆಗೆ! ಮೊಬೈಲ್‌ನಲ್ಲಿ ಸಿಕ್ತು 'ರಂಗು ರಂಗಿನ' ಮಾಹಿತಿ

ಸಂಬರಗಿ ವಿಚಾರಣೆಯಾಗಲಿ:
ಪ್ರಶಾಂತ್‌ ಅವರನ್ನು ಫಿಲಂ ಚೇಂಬರ್‌ ವಿಚಾರಣೆಗೆ ತೆಗೆದುಕೊಳ್ಳಬೇಕಿದೆ. ಅವರು ನಮ್ಮ ಫಿಲಂ ಇಂಡಸ್ಟ್ರಿಗೆ ಸೇರಿದವರಲ್ಲ. ಕೇವಲ 200 ರೂಪಾಯಿಗೆ ಟಿವಿ ಮುಂದೆ ಪ್ರಚಾರಕ್ಕೆ ಬಂದು ಕೂರುತ್ತಾರೆ. ನನ್ನ ಹೆಸರು ಹೇಳುವಷ್ಟು ಗಟ್ಸ್ ಅವರಿಗೆ ಇಲ್ಲ. ಅದಕ್ಕೆ ನಾನು ನಟಿಸಿದ ಚಿತ್ರವನ್ನು ಹೆಸರಿಸುತ್ತಾರೆ. ನನ್ನ ಪೋಷಕರು ನನಗೆ ಒಂದು ಮಾತು ಹೇಳಿಕೊಟ್ಟಿದ್ದಾರೆ. 'ಬೀದಿ ನಾಯಿಗಳು ಬೋಗಳುತ್ತಿದ್ದರೆ, ನೀನು ಬಟ್ಟೆ ಬಿಚ್ಚಿಕೊಂಡು ತಿರುಗಿ ಬೊಗಳಬಾರದು. ಅದನ್ನು ನಿರ್ಲಕ್ಷಿಸಿ  ಮುಂದುವರಿ,' ಎಂದು. ಸಂಬರಗಿ ವಿಷಯದಲ್ಲಿಯೂ ನಾನು ಅದನ್ನೇ ಮಾಡುವೆ, ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ ಗಂಡ ಹೆಂಡತಿ ನಟಿ ಸಂಜನಾ. 

"

ಸಂಜನಾ ಯಶಸ್ಸು:
'ನಾನು ನನ್ನ ಯಶಸ್ಸಿನ ಬಗ್ಗೆ ಯಾರಿಗೂ ಸಾಬೀತು ಮಾಡಬೇಕಿಲ್ಲ. ನಾನೇನು ಐಶ್ವರ್ಯಾ ರೈ ಅಲ್ಲದೇ ಇರಬಹುದು. ಆದರೆ ಸಂಜನಾಳಾಗಿಯೇ ಸಾಕಷ್ಟು ಹೆಸರು ಮಾಡಿದ್ದೀನಿ. ನನ್ನ ಸ್ವಂತ ಶ್ರಮದಿಂದ ಹೆಸರು ಗಳಿಸಿರುವೆ ಹಾಗೂ ಫಾಲೋವರ್ಸ್‌ ಪಡೆದುಕೊಂಡಿರುವೆ.  ದೇವರ ದಯೆಯಿಂದ ನಾನು ಇನ್ನೂ ಚಿತ್ರರಂಗದಲ್ಲಿ ಸಿನಿಮಾ ಮಾಡಿಕೊಂಡಿರುವೆ. ಈಗಾಗಲೇ ಎರಡು ಕನ್ನಡ ಸಿನಿಮಾ ಹಾಗೂ ಎರಡು ತಮಿಳು ಸಿನಿಮಾ ಮತ್ತು  ಹಿಂದಿಯಲ್ಲಿಯೂ ಒಂದು ಶೋ ಇದೆ. ನನ್ನ ಯಶಸ್ಸಿಗೆ ನಾನು ಶ್ರಮ ಹಾಕಿ, ಸುಖವಾಗಿರುವೆ. ನನ್ನ ಬಳಿ ಮೂರು ಕಾರು ಹಾಗೂ ಇಂದಿರಾ ನಗರದಲ್ಲಿ ದೊಡ್ಡ ಮನೆಯಿದೆ ಎಂದು, ಪ್ರಶಾಂತ್ ಹೇಳಿಕೆ ನೀಡಿದ್ದಾರೆ. ದೇವರ ದಯೆಯಿಂದ ನನ್ನ ಬಳಿ ಅದಕ್ಕಿಂತಲೂ ಹೆಚ್ಚಿವೆ. ನಾನು 16 ವರ್ಷಗಳಿಂದಲೇ ಇಂಡಸ್ಟ್ರಿಯಲ್ಲಿರುವುದು. ನಾನು ದುಡಿದ ಪ್ರತೀ ಪೈಸೆಗೂ ತೆರಿಗೆ ಕಟ್ಟುತ್ತಿದ್ದೇನೆ. ಹಾಗೇ ಸುಮ್ ಸುಮ್ಮನೆ ಹಣ ಮಾಡಿದರೆ ಪ್ರಶ್ನಿಸಲು ಆದಾಯ ಇಲಾಖೆ ಇದೆ. ನನ್ನ ಬಳಿ ಅಗತ್ಯ ದಾಖಲೆಗಳಿವೆ. ರೋಡಿನಲ್ಲಿರುವ ಬ್ರೋಕರ್‌ಗಳ ಮಾತಿಗೆ ಕಿವಿಗೊಡುವ ಅಗತ್ಯವಿಲ್ಲ,' ಎಂದು ಉತ್ತರಿಸಿದ್ದಾರೆ.

ಚಿತ್ರಗಳಿಗಿಂತಲೂ ಬೇರೆ ಬೇರೆ ವಿವಿಧ ಕಾರಣಗಳಿಂದ ಈ ಸಂಜನಾ ಸುದ್ದಿಯಲ್ಲಿರುವುದು ಸುಳ್ಳಲ್ಲ. ಇತ್ತೀಚೆಗೆ ಡ್ರೈವ್ ಮಾಡುವಾಗ ಸೆಲ್ಫೀ ವೀಡಿಯೋ ಮಾಡಿಕೊಂಡು, ಶೇರ್ ಮಾಡಿದ ಕಾರಣ ಸುದ್ದಿಯಾಗಿದ್ದರು. ನಿರ್ಮಾಪಕಿ ವಂದನಾ ಜೈನ್ ಅವರೊಂದಿಗೂ ಕಿರಿಕ್ ಮಾಡಿಕೊಂಡು, ಈ ಇಬ್ಬರೂ ದೂರು, ಪ್ರತಿ ದೂರು ದಾಖಲಿಸಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!