Hyderabad ಏರ್‌ಪೋರ್ಟಿನಲ್ಲಿ ಹುಚ್ಚೆದ್ದು ಕುಣಿದ ರಶ್ಮಿಕಾ; ವಿಡಿಯೋ ವೈರಲ್!

Suvarna News   | Asianet News
Published : Mar 05, 2020, 01:53 PM IST
Hyderabad ಏರ್‌ಪೋರ್ಟಿನಲ್ಲಿ ಹುಚ್ಚೆದ್ದು ಕುಣಿದ ರಶ್ಮಿಕಾ; ವಿಡಿಯೋ ವೈರಲ್!

ಸಾರಾಂಶ

ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಮಾನ ನಿಲ್ದಾಣದಲ್ಲಿ ಫ್ಲಾಂಟ್‌ ಮಾಡಿ, ಡ್ಯಾನ್ಸ್‌ ಫೋಸ್‌ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿದೆ. ಈಗಾಗಲೇ ಡಯಟ್ ಬದಲಾಯಿಸಿದ ನಟಿಯದ್ದು ಇದೀಗ ಡ್ಯಾನ್ಸ್ ಕ್ರೇಜ್.

ಸ್ಯಾಂಡಲ್‌ವುಡ್‌, ಕಾಲಿವುಡ್‌ ಹಾಗೂ ಟಾಲಿವುಡ್‌ ಲೋಕದಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಂದರೆ ತಪ್ಪಿಲ್ಲ. ತಿಂದರೂ ಟ್ರೋಲ್‌, ಡಯಟ್‌ ಮಾಡಿದರೂ ಟ್ರೋಲ್‌, ಅಷ್ಟೇ ಏಕೆ ಖಡಕ್‌ ಡೈಲಾಗ್‌ ಹೇಳಿದ್ರಂತೂ ಫುಲ್‌ ಟ್ರೋಲ್‌....

'ಭೀಷ್ಮ' ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ, ಹೆಚ್ಚಾಗಿ ಹೈದರಾಬಾದ್‌ನಲ್ಲಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ಏರ್‌ಪೋರ್ಟ್‌ಗೆ ತೆರಳುವ ವೇಳೆ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದು, ಸಿಕ್ಕಾಪಟ್ಟೆ ಮಜಾವಾಗಿದೆ. 

ಬಿರಿಯಾನಿ ಲವರ್ ಈಗ ಪ್ಯೂರ್‌ ವೆಜ್: ರಶ್ಮಿಕಾಳ ಹೊಸ ಡಯಟ್ ಟ್ರಿಕ್!

ಕಾಸ್ಟ್ಯೂಮ್‌ ಡಿಸೈನರ್‌ ಜೊತೆ ವಿಮಾನ ನಿಲ್ದಾಣಕ್ಕೆ ತೆರಳಿದ ರಶ್ಮಿಕಾ, ಇಯರ್‌ ಫೋನ್‌ನಲ್ಲಿ ಹಾಡು ಕೇಳುತ್ತಾ ಚೆಕ್‌-ಇನ್‌ ಆಗುವವರೆಗೂ ಡ್ಯಾನ್ಸ್‌ ಮಾಡುತ್ತಲೇ ನಡೆದಿದ್ದಾರೆ. ಈ ವಿಡಿಯೋವನ್ನು ಫೋಟೋಗ್ರಾಫರ್‌ ಕಮಲೇಶ್ ಆನಂದ್‌ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, ವೈರಲ್ ಆಗುತ್ತಿದೆ. 

'ಭೀಷ್ಮ' ರೋಮ್ಯಾಂಟಿಕ್‌ ಕಾಮಿಡಿ ಚಿತ್ರವಾಗಿದ್ದು, ನಿತಿನ್‌ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ. ವೆಂಕಿ ಕುಡುಮುಲು ನಿರ್ದೇಶನ, ಸೂರ್ಯದೇವರಾಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಏಪ್ರಿಲ್‌‌ನಲ್ಲಿ ತೆರೆಕಾಣುವ ಸಾಧ್ಯತೆಗಳಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?