
ಫೆ.26ರಿಂದ ಮಾ.4ರವರೆಗೆ ಎಂಟು ದಿನಗಳ ಕಾಲ ಯಶಸ್ವಿಯಾಗಿ ನಡೆದ ಚಿತ್ರೋತ್ಸವಕ್ಕೆ ಬುಧವಾರ ವಿದ್ಯುಕ್ತವಾಗಿ ತೆರೆ ಬಿದ್ದಿತು. ಸಂಜೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ ಸಮಾರೋಪ ಸಮಾರಂಭ ನಡೆಯಿತು. ಚಿತ್ರೋತ್ಸವದಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಚಿತ್ರತಂಡಗಳಿಗೆ ರಾಜ್ಯಪಾಲ ವಜುಬಾಯ್ ವಾಲಾ ಮತ್ತು ಉಪ ಮುಖ್ಯಮಂತ್ರಿ ಡಾ ಸಿ.ಎನ್. ಅಶ್ವತ್ಥ ನಾರಾಯಣ ಪ್ರಶಸ್ತಿ ನೀಡಿ ಗೌರವಿಸಿದರು.
ಯೋಧನಾಗಿ ದರ್ಶನ್, ಅದೇ ಚಿತ್ರದಲ್ಲಿ ಅಭಿಷೇಕ್: ಮುನಿರತ್ನ
ಚಿತ್ರೋತ್ಸವ ಪ್ರಶಸ್ತಿಯ ಕನ್ನಡ ಸಿನಿಮಾ ವಿಭಾಗದ ಪುನೀತ್ ರಾಜ್ ಕುಮಾರ್ ನಿರ್ಮಾಣದ ‘ಕವಲು ದಾರಿ’ ಚಿತ್ರವು ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ. ಹಾಗೆಯೇ ಸಚಿನ್ ಶೆಟ್ಟಿನಿರ್ದೇಶನದ ‘ಒಂದು ಶಿಕಾರಿ ಕತೆ’, ದಯಾಳ್ ಪದ್ಮನಾಭನ್ ನಿರ್ದೇಶನದ ‘ರಂಗನಾಯಕಿ’ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ಆಯ್ಕೆ ಆಗಿವೆ. ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಮಧು ಚಂದ್ರ ನಿರ್ದೇಶನದ ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಪಾತ್ರವಾಗಿದೆ. ಹಾಗೆಯೇ ಏಷಿಯನ್ ಸಿನಿಮಾ ವಿಭಾಗದಲ್ಲಿ ಥೈಲ್ಯಾಂಡ್ ಸಿನಿಮಾ ‘ಹ್ಯಾಪಿ ಒಲ್ಡ್ ಈಯರ್’ಗೆ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಕ್ಸಾಂ ಟೆನ್ಷನ್‌ಗೆ ನೋ ಹೇಳಿ; ಡಿ-ಬಾಸ್ ಕೊಟ್ಟ ಟಿಪ್ಸ್ ನೋಡಿ!
ಚಿತ್ರಭಾರತಿ ಇಂಡಿಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ‘ಪ್ಯಾಂಗ್ರೋನ್’ ಪ್ರಶಸ್ತಿಗೆ ಪಾತ್ರವಾದರೆ, ಮಲಯಾಳಂ ಸಿನಿಮಾ ‘ಬಿರಿಯಾನಿ’ಗೆ ತೀರ್ಪುಗಾರರ ವಿಶೇಷ ಸಿನಿಮಾ ಪ್ರಶಸ್ತಿ ನೀಡಲಾಯಿತು. ನೆಟ್‌ಪ್ಯಾಕ್ ಅಂತಾರಾಷ್ಟ್ರೀಯ ತೀರ್ಪುಗಾರರ ಪ್ರಶಸ್ತಿಗೆ ಪ್ರೀತಮ್ ಶೆಟ್ಟಿನಿರ್ದೇಶನದ ‘ಪಿಂಗಾರ’, ಇಂಟರ್ ನ್ಯಾಷನಲ್ ಕ್ರಿಟಿಕ್ ಜ್ಯೂರಿ ಪ್ರಶಸ್ತಿಗೆ ‘ದಿ ಡಾಗ್ ಆ್ಯಂಡ್ ಈಸ್ ಮ್ಯಾನ್’ ಚಿತ್ರವನ್ನು ಆಯ್ಕೆ ಮಾಡಿ, ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಸಿನಿಮಾ ತಂಡಗಳಿಗೆ ರಾಜ್ಯಪಾಲರು, ಶುಭ ಹಾರೈಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.