
ಇಡೀ ಕನ್ನಡ ಚಿತ್ರರಂಗ ಬಿಡುಗಡೆಗೆ ಕಾಯುತ್ತಿರುವ ಸಿನಿಮಾ ಕೋಟಿಗೊಬ್ಬ 3 (Kotigobba 3). ಕಿಚ್ಚ ಸುದೀಪ್ (Kichcha Sudeep) ನಾಟಿ (Naughty),ಸ್ಮಾರ್ಟ್ ಲುಕ್ ಪೋಸ್ಟರ್ ಮತ್ತು ಟೀಸರ್ (Teaser) ವೀಕ್ಷಕರ ಗಮನ ಸೆಳೆಯುತ್ತಿದೆ. ಈ ನಡುವೆ ಚಿತ್ರತಂಡ ಅಫೀಶಿಯಲ್ 4k ಟ್ರೈಲರ್ (Trailer) ಬಿಡುಗಡೆ ಮಾಡಿದೆ. ಇದನ್ನು ವೀಕ್ಷಿಸಿ ಸ್ಯಾಂಡಲ್‌ವುಡ್ (Sandalwood) ಮೋಹಕ ತಾರೆ ರಮ್ಯಾನೂ ಫಿದಾ ಆಗಿದ್ದಾರೆ.
ಹೌದು! ರಮ್ಯಾ (Ramya) ಕೋಟಿಗೊಬ್ಬ 3 ಟ್ರೈಲರ್ ವೀಕ್ಷಿಸಿ ತಮ್ಮ ಇನ್‌ಸ್ಟಾಗ್ರಾಂ (Instagram) ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂದ್ದಾರೆ. 'ನಮ್ಮೆಲ್ಲರ ಪ್ರೀತಿಯ Benjamin Button ಕಿಚ್ಚ ಸುದೀಪ್. ನಿಮಗೆ ವಯಸ್ಸೇ ಆಗೋಲ್ವಾ ಹೇಗೆ? ಟ್ರೈಲರ್ ಫುಲ್ ಆನ್ ಆಗಿದೆ. ಸೂಪರ್,' ಎಂದು ರಮ್ಯಾ ಬರೆದುಕೊಂಡಿದ್ದಾರೆ. ವೀಕ್ಷಿಸಲು ಲಿಂಕ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಬೆಂಜಮಿನ್ ಬಟನ್ ಅಂದ್ರೆ ಮುದುಕನಾಗಿ ಹುಟ್ಟಿ, ಮಗುವಾಗಿ ಅಂತ್ಯವಾಗುವ ಕಥೆ. ಕಿಚ್ಚ ಸುದೀಪ್ ಅವರು ದಿನೇ ದಿನೇ ಯಂಗ್ ಆಗಿ ಕಾಣಿಸುತ್ತಿರುವ ಕಾರಣ ಅವರಿಗೆ ಹೋಲಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ಸಿನಿ ಸ್ನೇಹಿತರಿಗೆ ಹಾಗೂ ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮಾತುಗಳನ್ನೇ ಆಡುತ್ತಲೇ ಇರುತ್ತಾರೆ. ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಾರೆ. ನೀನಾಸಂ ಸತೀಶ್ (Sathish Ninasam) ನಟನೆಯ ಮೊದಲು ತಮಿಳು ಚಿತ್ರದ ಟೈಟಲ್ ಮತ್ತು ಪೋಸ್ಟರ್ ರಿಲೀಸ್ ಮಾಡಿದ್ದೂ ರಮ್ಯಾ. ಕನ್ನಡ ಚಿತ್ರರಗಂದ (Kannada Movies) ನಟಿ ರಕ್ಷಿತಾ (Rakshita Prem) ಹುಟ್ಟುಹಬ್ಬಕ್ಕೆ ಸೀರೆ ಗಿಫ್ಟ್ ನೀಡಿದ್ದು, ರಚಿತಾ ರಾಮ್ (Rachita Ram) ಹುಟ್ಟು ಹಬ್ಬಕ್ಕೆ ಹೂ ಗುಚ್ಚ ಗಿಫ್ಟ್ ಮಾಡಿದ್ದರು. ನಿನ್ನೆ ಅದ್ಧೂರಿಯಾಗಿ ಬಿಡುಗಡೆಯಾದ ನಿನ್ನ ಸನಿಹಕೆ (Ninna Sanihake) ಚಿತ್ರತಂಡಕ್ಕೂ ವಿಶ್ ಕೂಡ ಮಾಡಿದ್ದಾರೆ.
ಅಕ್ಟೋಬರ್ 14ರಂದು ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗುತ್ತಿದೆ. ಇದರ ಪ್ರೀ ರಿಲೀಸ್ ಕಾರ್ಯಕ್ರಮ (Pre release programme) ಅಕ್ಟೋಬರ್ 3ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಸೆಲೆಬ್ರಿಟಿಗಳ ಲಿಸ್ಟ್ ರಿವೀಲ್ ಮಾಡಿಲ್ಲ. ಆದರೆ ಅದೇ ದಿನ ದುನಿಯಾ ವಿಜಯ್ (Duniya Vijay) ಸಲಗ ಟೀಂ ಕೂಡ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿದೆ.
ಕೋಟಿಗೊಬ್ಬ2 ಚಿತ್ರದ ಸೀಕ್ವೆಲ್ ಕೋಟಿಗೊಬ್ಬ 3. ಈ ಚಿತ್ರದಲ್ಲಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್ (Madonna Sebastian) ನಾಯಕಿಯಾಗಿ ನಟಿಸಿದ್ದಾರೆ. ಆಶಿಕಾ ರಂಗನಾಥ್ (Ashika Ranganath) ಪಟ್ಟಾಕಿ ಪೋರಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಸೇರಿದಂತೆ ದೊಡ್ಡ ತಾರ ಬಳಗವೇ ಇದೆ. ಸೂರಪ್ಪ ಬಾಬು ಬಂಡವಾಳ ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.