'ಅರಸು' ನಟಿ ಮೀರಾ ಜಾಸ್ಮಿನ್ ಕಮ್‌ಬ್ಯಾಕ್; ನಟಿ ಕೈಯಲ್ಲಿದೆ ಗೋಲ್ಡನ್ ವೀಸಾ!

Suvarna News   | Asianet News
Published : Oct 09, 2021, 02:18 PM ISTUpdated : Oct 09, 2021, 03:08 PM IST
'ಅರಸು' ನಟಿ ಮೀರಾ ಜಾಸ್ಮಿನ್  ಕಮ್‌ಬ್ಯಾಕ್; ನಟಿ ಕೈಯಲ್ಲಿದೆ ಗೋಲ್ಡನ್ ವೀಸಾ!

ಸಾರಾಂಶ

ಹಲವು ವರ್ಷಗಳ ನಂತರ ನಟನೆಗೆ ಕಮ್‌ ಬ್ಯಾಕ್ ಮಾಡಿದ ಮೀರಾ. ಸತ್ಯನ್ ಅಂತಿಕಾಡ್‌ ಸಿನಿಮಾ ಸಹಿ ಮಾಡಿದ ಸುಂದರಿ....

2001ರಲ್ಲಿ ಸೂತ್ರಧರನ್ (Soothradharan) ಚಿತ್ರದ ಮೂಲಕ ಮಾಲಯಾಳಂ (Mollywood) ಚಿತ್ರರಂಗಕ್ಕೆ ಕಾಲಿಟ್ಟ ಮೀರಾ ಜಾಸ್ಮಿನ್ (Meera Jasmine) ಮೌರ್ಯ, ಅರಸು (Arasu), ದೇವರು ಕೊಟ್ಟ ತಂಗಿ, ಇಜ್ಜೋಡು, ಹೂ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಮೀರಾ ಕಮ್‌ಬ್ಯಾಕ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಇದು ನನ್ನ ಅದೃಷ್ಟ ಎಂದು ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. 

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಮೀರಾ ಎರಡನೇ ಇನ್ನಿಂಗ್ ಚಿತ್ರವನ್ನು ಸತ್ಯನ್ ಅಂತಿಕಾಡ್‌ (Sathyan Anthikad) ಆ್ಯಕ್ಷನ್ ಕಟ್ (Action Cut) ಹೇಳುತ್ತಿದ್ದಾರೆ. ಸಿನಿಮಾ ಆಯ್ಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿರುವೆ ಒಂದೊಂದೇ ಚಿತ್ರಗಳಿಗೆ ಸಹಿ ಮಾಡುವ ಮೂಲಕ ಚಿತ್ರರಂಗದಲ್ಲಿ ಬ್ಯುಸಿಯಾಗಬೇಕು ಎಂದುಕೊಂಡಿರುವೆ ಎಂದಿದ್ದಾರೆ. ಮೋಹನ್‌ಲಾಲ್ (Mohanlal), ಪೃಥ್ವಿರಾಜ್‌ (Prithviraj Sukumaran) ನಂತರ UAE ಮೀರಾ ಜಾಸ್ಮಿನ್‌ ಅವರಿಗೆ 5-10 ವರ್ಷಗಳ ಅವಧಿಯ ಗೋಲ್ಡನ್‌ ವೀಸಾ (Golden Visa) ನೀಡಿದ್ದಾರೆ. ವೀಸಾ ಪಡೆದುಕೊಂಡ ನಂತರ ಕೇರಳ ಹಾಗೂ ದುಬೈ ನಡುವೆ ಪ್ರಯಾಣಿಸಿ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವೆ ಎಂದಿದ್ದಾರೆ. 

ಆಭಿಮಾನಿಗಳು ಮೀರಾ ಕಮ್‌ಬ್ಯಾಕ್‌ ವಿಚಾರ ತಿಳಿದು ತೋರಿಸುತ್ತಿರುವ ಪ್ರೀತಿಗೆ ಫಿದಾ ಆಗಿದ್ದಾರೆ. ಅವರು ಪ್ರೀತಿಯಿಂದ ನಾನು ಮತ್ತೆ ನಟಿಸಲು ಇಷ್ಟ ಪಡುತ್ತಿರುವೆ. ಈ ಹಿಂದೆ ನಾಲ್ಕು ಸಿನಿಮಾಗಳಲ್ಲಿ ಸತ್ಯನ್ ಅಂತಿಕಾಡ್‌ ನಿರ್ದೇಶನದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಮ್‌ಬ್ಯಾಕ್ ಮಾಡಲು ಅವರ ಸಿನಿಮಾನೇ ಆಯ್ಕೆ ಮಾಡಿಕೊಂಡಿರುವುದಕ್ಕೆ ಒಂದೇ ರೀತಿಯ ಸಿನಿಮಾ ಎಂದುಕೊಳ್ಳಬೇಡಿ ಇದು ತುಂಬಾನೇ ಡಿಫರೆಂಟ್ ಆಗಿರುವ ಸಿನಿಮಾ ಹೊಸ ರೀತಿಯಲ್ಲಿ ನನ್ನನ್ನು ನೋಡಬಹುದು. ಮಲಯಾಳಂ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಪಡೆಯುತ್ತಿದೆ ಹಾಗೂ ಒಂದೊಂದು ಸಿನಿಮಾನೂ ಗುರುತಿಸಿಕೊಳ್ಳುತ್ತಿದೆ ನಮಗೂ ಒಳ್ಳೆಯ ಸಮಯ ಬರುತ್ತದೆ ಎಂದಿದ್ದಾರೆ ಮೀರಾ ಜಾಸ್ಮಿನ್.

'ಅರಸು' ಚಿತ್ರದಲ್ಲಿ ಪುನೀತ್‌ ಜೊತೆ ಕಾಣಿಕೊಂಡ ನಟಿ ಮೀರಾ ಜಾಸ್ಮಿನ್‌ ಈಗೆಲ್ಲಿದ್ದಾರೆ?

ಅನಿಲ್ ಎಂಬುವವರ ಜೊತೆ ವೈವಾಹಿಕ ಜೀವನಕ್ಕೆ (Married Life) ಕಾಲಿಟ್ಟ ನಂತರ ಮೀರಾ ಜಾಸ್ಮಿನ್ ದುಬೈ (Dubai)ನಲ್ಲಿ ನೆಲೆಸಿದ್ದರು. ಮದುವೆ ನಂತರ ಸಿನಿ ರಂಗದಿಂದ ಬ್ರೇಕ್ ತೆಗೆದುಕೊಂಡರು. ಮೀರಾ ಮದುವೆ ವಿಚಾರದ ಬಗ್ಗೆ ಸಾಕಷ್ಟು ಗಾಸಿಪ್‌ಗಳು ಹರಿದಾಡಿತ್ತು. ಅನಿಲ್‌ ಅವರಿಗೆ ಈ ಹಿಂದೆ ಮದುವೆ ಆಗಿತ್ತು ಆದರೂ ದುಬೈ ಪೊಲೀಸರ ರಕ್ಷಣೆ ಪಡೆದುಕೊಂಡು ಎರಡನೇ ಮದುವೆ ಆಗಿದ್ದಾರೆ ಎಂಬ ಅಂತೆ ಕಂತೆಗಳಿದ್ದವು.  ಮೀರಾ ಪತಿ ಜೊತೆ ಕಾಣಿಸಿಕೊಂಡಿದ್ದು ಕಡಿಮೆನೇ. 

ಒಟ್ಟಿನಲ್ಲಿ ಮಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಮೀರಾ, ಸ್ಯಾಂಡಲ್‌ವುಡ್‌ಗೂ (Sandalwood) ಬರುಬೇಕು ಎನ್ನುವುದು ಕನ್ನಡಿಗರ ಆಸೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?