ಪ್ರಶಾಂತ್ ಸಂಬರಗಿ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ!

Suvarna News   | Asianet News
Published : Jun 18, 2021, 02:14 PM ISTUpdated : Jun 18, 2021, 02:16 PM IST
ಪ್ರಶಾಂತ್ ಸಂಬರಗಿ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ!

ಸಾರಾಂಶ

ನಟಿ ರಾಗಿಣಿಯನ್ನು ಪದೇ ಪದೇ ಟಾರ್ಗೇಟ್ ಮಾಡಿದ ವ್ಯಕ್ತಿ ಮೈಂಡ್‌ ಸೆಟ್‌ ಏನು ಗೊತ್ತಾ? ಡ್ರಗ್ಸ್‌ ಮಾಫಿಯಾ ಬಗ್ಗೆ ರಾಗಿಣಿ ಮಾತು...  

ಇಡೀ ಕನ್ನಡ ಚಿತ್ರರಂಗವನ್ನೇ ಅಲ್ಲೋಲ ಕಲ್ಲೋಲ ಮಾಡಿದ 'ಡ್ರಗ್ಸ್ ಮಾಫಿಯಾ' ಬಗ್ಗೆ ನಟಿ ರಾಗಿಣಿ ದ್ವಿವೇದಿ ಮಾತನಾಡಿದ್ದಾರೆ. ಬಿಗ್‌ ಬಾಸ್‌ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಬ್ಯುಸಿಯಾಗಿರುವ ಪ್ರಶಾಂತ್‌ ಸಂಬರಗಿ ಇದಕ್ಕೆ ರಿಯಾಕ್ಟ್ ಮಾಡುತ್ತಾರಾ? 

ಹೌದು! ಇತ್ತೀಚಿಗೆ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ ರಾಗಿಣಿ 'ಡ್ರಗ್ಸ್ ಪ್ರಕರಣದಲ್ಲಿ ಶೇ.100ರಷ್ಟು ನನ್ನನ್ನು ಟಾರ್ಗೇಟ್ ಮಾಡಲಾಗಿದೆ. ಬರೀ ಈ ಒಂದು ಪ್ರಕರಣದಲ್ಲಿ ಮಾತ್ರವೇ ಅಲ್ಲ ಹೆಣ್ಣು ಮಕ್ಕಳು ಎಂದರೆ ಪ್ರತಿಯೊಂದೂ ವಿಷಯದಲ್ಲಿಯೂ ಟಾರ್ಗೇಟ್ ಮಾಡಲಾಗುತ್ತದೆ. ಡ್ರಗ್ಸ್ ಪ್ರಕರಣದಲ್ಲಿ ನನ್ನನ್ನು ಉದ್ದೇಶಪೂರ್ವಕವಾಗಿ ಸಿಕ್ಕಿ ಹಾಕಿಸಲಾಗಿದೆ,' ಎಂದು ರಾಗಿಣಿ ಮಾತನಾಡಿದ್ದಾರೆ.

ಪ್ರಕರಣದ ಬಗ್ಗೆ ಮಾತನಾಡಿದ ರಾಗಿಣಿ ಪ್ರಶಾಂತ್ ಬಗ್ಗೆ ಹೇಳಿದ್ದಾರೆ. 'ಅವರು ಏನು ಮಾತನಾಡುತ್ತಾರೋ ಮಾತನಾಡಲಿ. ಅವರನ್ನು ನಾನು ನಿಯಂತ್ರಿಸಲು ಆಗುವುದಿಲ್ಲ. ಅವರವರ ಅಭಿಪ್ರಾಯ ಅವರದ್ದು. ಪ್ರಶಾಂತ್ ಸಂಬರಗಿಯವರನ್ನು ನಾನು ನೋಡಿಲ್ಲ. ಭೇಟಿಯಾಗಿಲ್ಲ. ಅವರ ಪರಿಚಯವೂ ನನಗಿಲ್ಲ. ಅವರು ಏನು ಮಾತನಾಡುತ್ತಾರೆ ಅದು ನನಗೆ ಮುಖ್ಯವಲ್ಲ, ನಾನು ಮಾತನಾಡುವುದು ಹಾಗೂ ನಡೆದುಕೊಳ್ಳುವುದು ನನಗೆ ಮುಖ್ಯ.  ಯಾವುದೇ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳನ್ನು ಹೆಚ್ಚಾಗಿ ಟಾರ್ಗೇಟ್ ಮಾಡುವುದು ಹಲವರಿಗೆ ತುಂಬಾ ಸುಲಭವಾಗಿಬಿಟ್ಟಿದೆ. ಬೇರೆ ಅವರ ಬಗ್ಗೆ ಆರೋಪ ಮಾಡುವ ಬದಲಿಗೆ ನನ್ನ ಜೀವನ ಸರಿಯಾಗಿದ್ಯಾ ಅಂತ ನೋಡಬೇಕು,' ಎಂದಿದ್ದಾರೆ. 

ವ್ಯಾಕ್ಸಿನ್ ಪಡೆಯುವ ಮುನ್ನ ರಕ್ತದಾನ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ! 

ಜೈಲಿನಿಂದ ಹೊರ ಬಂದ ನಂತರ ರಾಗಿಣಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹಾಗೂ ಎರಡು ಮೂರು ಸಿನಿಮಾಗಳಿಗೂ ಸಹಿ ಮಾಡಿದ್ದಾರೆ. ಕೊರೋನಾ ಸಮಯದಲ್ಲಿ ಯಾರಿಗೂ ಯಾವುದಕ್ಕೂ ಅಂಜದೇ ನಾನ್‌ ಸ್ಟಾಪ್ ಕೆಲಸ ಮಾಡುತ್ತಿರುವ ರಾಗಿಣಿಗೆ ಭೇಷ್ ಎಂದಿದ್ದಾರೆ ನೆಟ್ಟಿಗರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಪೆಷಲ್ ಡೇಟ್ ಮಿಸ್ ಮಾಡ್ಕೊಂಡ ಶ್ರೀಮುರಳಿ…. ಪತ್ನಿಗಾಗಿ ನೈಲ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಶೆಫ್ ಆದ ನಟ
ಮೈಸೂರಿನಲ್ಲಿ ಕಿಚ್ಚನ ಹವಾ; 'ಮಾರ್ಕ್' ಸಕ್ಸಸ್ ಬೆನ್ನಲ್ಲೇ ಅಭಿಮಾನಿಗಳ ಜೊತೆ ಸುದೀಪ್ ಸಿನಿಮಾ ವೀಕ್ಷಣೆ!