ಟೀಸರ್ ರಿಲೀಸ್ ಮಾಡಿ ಮಗನ ಹೆಸರು ರಿವೀಲ್ ಮಾಡಿದ ರಿಷಬ್ ಶೆಟ್ಟಿ | ಗಮನ ಸೆಳೆದಿದೆ ರಿಷಬ್ ಶೆಟ್ಟಿ ರಿಲೀಸ್ ಮಾಡಿರುವ ವಿಡಿಯೋ | ಸಿನಿಮಾ ರೀತಿಯಲ್ಲೇ ಕ್ರಿಯೆಟಿವಿಟಿ ತೋರಿಸಿದ್ದಾರೆ ರಿಷಬ್
ಸ್ಯಾಂಡಲ್‌ವುಡ್ ಕ್ರಿಯೆಟಿವ್ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಿಷಬ್ ಶೆಟ್ಟಿ ಅವರ ಸಿನಿಮಾಗಳನ್ನು ಕ್ರಿಯೆಟಿವ್ ಆಗಿ ಮಾಡ್ತಾರೆ ಅಂತ ಗೊತ್ತು. ಅವರ ಸಿನಿಮಾಗಳು ಡಿಫರೆಂಟಾಗಿರುತ್ತದೆ ಅಂತ ಗೊತ್ತು. ನೇಟಿವಿಟಿ ಇರುತ್ತೆ ಅಂತಾನೂ ಗೊತ್ತು. ಸಿನಿಮಾಗಳ ರೀತಿಯಲ್ಲೇ ಇದೀಗ ಮಗನ ನಾಮಕರಣವನ್ನೂ ಡಿಫರೆಂಟಾಗಿ ಮಾಡಿದ್ದಾರೆ.
ಸಿನಿಮಾ ರೀತಿಯಲ್ಲೇ ಟೀಸರ್ ರಿಲೀಸ್ ಮಾಡಿ ಮಗನನ್ನು ಪರಿಚಯಿಸಿದ್ದಾರೆ. ನಮ್ಮನೆ ಮುದ್ದು ಮಗುವನ್ನ ನಿಮಗೆ ಪರಿಚಯ ಮಾಡಿಕೊಡ್ತಿದೀವಿ. ಮರಿ ಡಿಟೆಕ್ಟೀವ್ ಕಡೆಯಿಂದ ಎಲ್ರಿಗೂ ಹ್ಯಾಪಿ ಮಕ್ಕಳ ದಿನಾಚರಣೆ..! ಎಂದು ವಿಶ್ ಮಾಡುತ್ತಾ ಟೀಸರ್ ರಿಲೀಸ್ ಮಾಡಿದ್ದಾರೆ.
ನಮ್ಮನೆ ಮುದ್ದು ಮಗುವನ್ನ ನಿಮಗೆ ಪರಿಚಯ ಮಾಡಿಕೊಡ್ತಿದೀವಿ.
ಮರಿ ಡಿಟೆಕ್ಟೀವ್ ಕಡೆಯಿಂದ ಎಲ್ರಿಗೂ ಹ್ಯಾಪಿ ಮಕ್ಕಳ ದಿನಾಚರಣೆ..! 😎
Seeking your blessings & wishes we introduce our bundle of joy Ranvit Shettyhttps://t.co/UJlGKtid1p
ಮಗನಿಗೆ ರಣ್ವಿತ್ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ. ಫಿಲ್ಮಿ ಸ್ಟೈಲ್‌ನಲ್ಲಿರುವ ಈ ಟೀಸರ್‌ನಲ್ಲಿ ಮಗ ರಾಜ್‌ಕುಮಾರ್ ಫೋಟೋ ಜೊತೆ ಆಟವಾಡುತ್ತಿರುವುದು, ರಿಷಬ್ ಶೆಟ್ಟಿ 'ಬೆಲ್ ಬಾಟಂ' ಲುಕ್‌ನಲ್ಲಿ ಕಾಣಿಸಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ರಿಷಬ್ ಶೆಟ್ಟಿ- ಪ್ರಗತಿ ಫೆಬ್ರವರಿ 9, 2017 ರಲ್ಲಿ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು. ಇದೇ ಏಪ್ರಿಲ್ 7 ರಂದು ಪ್ರಗತಿ ಗಂಡು ಮಗುವಿಗೆ ಜನ್ಮ ನೀಡಿದ್ದರು.