
‘ಕಸ್ತೂರಿ ನಿವಾಸ’, ‘ಸತ್ಯ ಹರಿಶ್ಚಂದ್ರ’ ಮುಂತಾದ ಚಿತ್ರಗಳ ನಂತರ ಡಾ ರಾಜ್‌ಕುಮಾರ್ ಅವರ ಮತ್ತೊಂದು ಸಿನಿಮಾ ಈ ಜನರೇಷನ್ ಪ್ರೇಕ್ಷಕರ ಮುಂದೆ ಬರುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಯಾವ ರೀತಿಯಲ್ಲಿ ಬೆಳೆಯುತ್ತಾರೆ. ಒಳ್ಳೆಯ ದಾರಿಯಲ್ಲಿ ಹೋಗುವವನು ವಿದ್ಯಾವಂತ, ಕೆಟ್ಟ ದಾರಿಯಲ್ಲಿ ಹೋಗುವವನು ಮೋಸಗಾರನಾಗುತ್ತಾನೆ ಎನ್ನುವ ಒಂದು ಕ್ಲಾಸಿಕ್ ಕತೆಯನ್ನು ಆಗಲೇ ಅದ್ಭುತವಾಗಿ ತೆರೆ ಮೇಲೆ ತಂದವರು ಪೇಕೇಟಿ ಶಿವರಾಂ ನಿರ್ದೇಶನದ ಈ ಚಿತ್ರವನ್ನು ಕೆ ಸಿ ಎನ್ ಗೌಡ ಅವರು ನಿರ್ಮಿಸಿದ್ದರು.
ರಸ್ತೆ ಮಧ್ಯದಲ್ಲಿ ಜೇಬಲ್ಲಿದ್ದ ಹಣವನ್ನೆಲ್ಲಾ ದಾನ ಮಾಡಿದ ಸ್ಯಾಂಡಲ್‌ವುಡ್ ನಟ!
ಒಂದು ಹಳೆಯ ಸಿನಿಮಾ ಮರು ಬಿಡುಗಡೆಯಾಗುತ್ತಿರುವ ಸಂತಸವನ್ನು ಹಂಚಿಕೊಳ್ಳುವುದಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಓಂಸಾಯಿ ಪ್ರಕಾಶ್, ನಿರ್ಮಾಪಕ ಕೆ ಸಿ ಎನ್ ಚಂದ್ರಶೇಖರ್ ಮುಂತಾದವರು ಆಗಮಿಸಿದ್ದರು. ರಾಜೇಂದ್ರ ಸಿಂಗ್ ಬಾಬು, ಚಿತ್ರದ ಕುರಿತು ಹಳೆಯ ನೆನಪುಗಳನ್ನು ಬಿಚ್ಚಿಟ್ಟರೆ, ಆಗಿನ ನಿರ್ಮಾಣದ ಸಾಹಸಗಳನ್ನು ಅನಾವರಣ ಮಾಡಿದರು ಕೆ ಸಿ ಎನ್ ಚಂದ್ರಶೇಖರ್.
70ರ ದಶಕದ ಈ ಸೂಪರ್ ಹಿಟ್ ಚಿತ್ರದಲ್ಲಿ ಆರತಿ, ಜಯಮಾಲ, ಮಂಜುಳಾ, ತೂಗದೀಪ ಶ್ರೀನಿವಾಸ್, ವಜ್ರಮುನಿ, ಅಶ್ವಥ್ ಮುಂತಾದವರು ನಟಿಸಿದ್ದರು. ಸದ್ಯಕ್ಕೆ ಈ ಚಿತ್ರವನ್ನು 7.1 ಸೌಂಡ್ ಮಿಕ್ಸಿಂಗ್ ಮಾಡಿ 2ಕೆ ಡಿಟಿಎಸ್‌ನೊಂದಿಗೆ ಕೆ ಸಿ ಎನ್ ಚಂದ್ರಶೇಖರ್ ಅವರ ತಂಡ ಮರು ಬಿಡುಗಡೆ ಮಾಡುತ್ತಿದೆ. ಡಾ.ರಾಜ್ ಅಭಿಮಾನಿ ಎಂ.ಮುನಿರಾಜು ಅವರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.