
ಚಿಕ್ಕಮಗಳೂರು (ಜ.21): ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬದವರು ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಐದು ದಿನಗಳಿಂದ ಸಹಸ್ರ ಚಂಡಿ ಯಾಗ ಮಾಡಿಸುತ್ತಿದ್ದು, ಇಂದು ಯಾಗ ಮಂಟಪದಲ್ಲಿ ಪೂರ್ಣಾಹುತಿ ನೆರವೇರಲಿದೆ. ಮಾಜಿ ಪ್ರಧಾನಿಯ ಕುಟಂದ ಬಹುತೇಕ ಸದಸ್ಯರು ಯಾಗದಲ್ಲಿ ಪಾಲ್ಗೊಂಡಿದ್ದು, ಈ ದಿನವೇ ಶ್ರೀ ಕ್ಷೇತ್ರಕ್ಕೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಹ ಭೇಟಿ ನೀಡಿರುವುದು ಹಲವು ಗುಸು ಗುಸುಗಳಿಗೆ ಕಾರಣವಾಗಿವೆ.
ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!
'ನಿಖಿಲ ಜೊತೆ ಬಂದ್ರಾ ರಚಿತಾ?' ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದು, ತಮ್ಮ ಪ್ರೀತಿಯ ನಟಿಯೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಮಂದಿ ಮುಗಿ ಬಿದ್ದಿದ್ದರು. ಆದರೆ, ಈ ಊಹಾಪೋಹವನ್ನು ತಳ್ಳಿ ಹಾಕಿದ ರಚಿತಾ, 'ನಾನು ಶೃಂಗೇರಿಗೆ ಆಗಮಿಸಿದ್ದಕ್ಕೂ, ದೇವೇಗೌಡರ ಯಾಗಕ್ಕೂ ಸಂಬಂಧವಿಲ್ಲ. ನಾನು ಬಂದಿರುವುದು ಮಾತೆ ಶಾರದಾಂಬೆ ದರ್ಶನಕ್ಕೆ. ಶೃಂಗೇರಿಯಿಂದ ಹೊರನಾಡಿಗೆ ಹೋಗುತ್ತಿದ್ದೇನೆ,' ಎಂದು ಸ್ಪಷ್ಟಪಡಿಸಿದ್ದಾರೆ.
'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'
ಡಿಂಪಲ್ ಹುಡುಗಿ ದೈವಭಕ್ತೆ. ಬಿಡುವಿನ ಸಮಯದಲ್ಲಿ ಕುಟುಂಬದವರ ಜೊತೆ ತಮ್ಮ ಕುಲದೇವರ ಪೂಜೆಗೂ ತೆರಳುತ್ತಾರೆ. ಅಲ್ಲದೇ ದಿನಾ ತಪ್ಪದೇ ದೇವರಿಗೆ ಪೂಜಿಸುತ್ತೇನೆಂದು ಇತ್ತೀಚೆಗೆ ಸುವರ್ಣನ್ಯೂಸ್‌ನೊಂದಿಗೆ ಸಂಕ್ರಾಂತಿ ಆಚರಿಸಿದಾಗಲೂ ರಚಿತಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ರಚಿತಾ ಅಪ್ಪಟ ಆಂಜನೇಯನ ಭಕ್ತೆಯೂ ಹೌದು. ಪ್ರತಿ ಶನಿವಾರವೂ ದೇವಸ್ಥಾನಕ್ಕೆ ಹೋಗುತ್ತಾರೆ. ಇನ್ನು ಅಭಿಮಾನಿಗಳಲಿ ರಚಿತಾ ಹಣೆ ಮೇಲೆ ಸದಾ ಗಂಧ/ಅರಿಶಿಣ ಏಕೆ ಹಚ್ಚುತ್ತಾರೆ ಎಂಬ ಅನುಮಾನವೂ ಸಹಜ. 'ನನಗೆ ಕೋಪ ಜಾಸ್ತಿ ಅದನ್ನು ಕಂಟ್ರೋಲ್ ಮಾಡೋಕೆ' ಎಂದು ಅವರೇ ಒಮ್ಮೆ ಆ್ಯಂಕರ್ ಅನುಶ್ರೀ ತಮ್ಮ ಯೂಟ್ಯೂಬ್ ಚಾನಲ್‌ಗೆ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.