'ಕೆಟ್ಟದ್ದಕ್ಕೂ, ಒಳ್ಳಯದ್ದಕ್ಕೂ ನಾನೇ ಕಾರಣವಂತೆ, ಇದೆಲ್ಲ ಹೇಗೆ ಸಾಧ್ಯ!'

By Web Desk  |  First Published Oct 21, 2019, 9:40 AM IST

ದ್ವಾರಕೀಶ್ ಚಿತ್ರ ಸಂಸ್ಥೆಯ ಬಹುನಿರೀಕ್ಷಿತ ಚಿತ್ರ ‘ಆಯುಷ್ಮಾನ್ ಭವ’ ನ.1ಕ್ಕೆ ತೆರೆಗೆ ಬರುತ್ತಿದೆ. ಶಿವರಾಜ್ ಕುಮಾರ್ ಹಾಗೂ ರಚಿತಾ ರಾಮ್ ಜೋಡಿಯ ಚಿತ್ರವಿದು. ಆಪ್ತಮಿತ್ರ ಹಾಗೂ ಶಿವಲಿಂಗ ಚಿತ್ರಗಳ ಖ್ಯಾತಿಯ ನಿರ್ದೇಶಕ ಪಿ.ವಾಸು ಇದರ ನಿರ್ದೇಶಕರು.


ಈ ಸಿನಿಮಾ ಪ್ರಚಾರದ ಭಾಗವಾಗಿ ತಂಡ ಇತ್ತೀಚೆಗೆ ಸುದ್ದಿಗೋಷ್ಠಿ ಏರ್ಪಡಿಸಿತ್ತು. ಅಲ್ಲಿ ತಮ್ಮ ಪಾತ್ರದ ಕುರಿತು ಮಾತನಾಡಿದ ನಾಯಕಿ ರಚಿತಾ ರಾಮ್, ‘ಇದರಲ್ಲಿ ಚೆನ್ನಾಗಿಯೇ ಅಭಿ ನಯಿಸಿದ್ದೇನೆ.ಆದರೂ ಈ ಪಾತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆಯದೋ, ಕೆಟ್ಟದೋ ಯಾವುದೇ ಅಭಿಪ್ರಾಯ ಬಂದರೂ ಅದಕ್ಕೆ ನಿರ್ದೇಶಕ ಪಿ. ವಾಸು ಅವರೇ ಕಾರಣ ’ ಎಂದಿದ್ದರು.

ಮುಖ ಮುಚ್ಕೊಂಡು ಮೆಟ್ರೋಲಿ ಸಂಚರಿಸಿದ ಡಿಂಪಲ್ ಹುಡುಗಿ

Tap to resize

Latest Videos

ಆ ದಿನ ವಾಸು ಹಾಜರಿರಲಿಲ್ಲ. ಆದರೆ ಈಗ ರಚಿತಾ ಹೇಳಿಕೆಗೆ ನಿರ್ದೇಶಕ ಪಿ.ವಾಸು ತೀವ್ರ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕಲಾವಿದರು ಹೀಗೆಲ್ಲ ಹೇಳುವುದಕ್ಕೆ ಹೇಗೆ ಸಾಧ್ಯ ಎನ್ನುವುದು ಅವರ ಪ್ರಶ್ನೆ. ಶನಿವಾರ ಸಂಜೆ ನಗರದ ಖಾಸಗಿ ಹೊಟೇಲ್‌ವೊಂದರಲ್ಲಿ ಅದ್ದೂರಿಯಾಗಿ ನಡೆದ ‘ಆಯುಷ್ಮಾನ್ ಭವ ’ಚಿತ್ರ ಆಡಿಯೋ ಲಾಂಚ್ ಸಂದರ್ಭದಲ್ಲಿ ಮಾತನಾಡುತ್ತಾ ರಚಿತಾ ರಾಮ್ ಅನುಪಸ್ಥಿತಿಯಲ್ಲೇ ಅವರ ಮಾತಿಗೆ ಅಸಮಾಧಾನ ಹೊರಹಾಕಿದರು.

ಶಿವಣ್ಣ ಅಂದ್ರೆ ಫೆಂಟಾಸ್ಟಿಕ್‌, ವೆರಿ ಹಂಬಲ್‌, ವೆರಿ ಸಿನ್ಸಿಯರ್‌:ದ್ವಾರಕೀಶ್‌

‘ಚಿತ್ರದ ಮೊದಲ ಸುದ್ದಿಗೋಷ್ಟಿಗೆ ನಾನಿರಬೇಕಿತ್ತು. ತುಂಬಾ ಮಿಸ್ ಮಾಡಿಕೊಂಡೆ. ನಾನಾಗ ಮಲೇಷಿಯಾದಲ್ಲಿದ್ದೆ. ಅಲ್ಲಿದ್ದುಕೊಂಡೇ ಸುದ್ದಿಗೋಷ್ಠಿಯ ವಿವರ ಪಡೆದುಕೊಂಡೆ. ಅವತ್ತು ನಾಯಕಿ ರಚಿತಾ ರಾಮ್ ನನ್ನ ಬಗ್ಗೆ ಆಡಿದ ಮಾತನ್ನು ನಿರೀಕ್ಷಿಸಿರಲಿಲ್ಲ. ಹೀಗೆಲ್ಲ ಹೇಳುವುದಕ್ಕೆ ಹೇಗೆ ಸಾಧ್ಯ?’ ಎಂದು ಬೇಸರ ಹೊರ ಹಾಕಿದರು. ಹಾಗೆಂದು ರಚಿತಾ ನಟನೆಯ ಬಗ್ಗೆ ಆಕ್ಷೇಪ ಮಾಡಲಿಲ್ಲ. ಚಿತ್ರದಲ್ಲಿ ರಚಿತಾ ಅದ್ಭುತವಾಗಿ ಅಭಿನಯಿಸಿದ್ದರು. ಪ್ರೇಕ್ಷಕರಿಂದ ಅವರಿಗೆ ಒಳ್ಳೆಯ ಮಾತುಗಳೇ ಸಿಗುತ್ತವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ವಾಸು ಕೊಟ್ಟ ಪ್ರತಿಕ್ರಿಯೆಯಲ್ಲಿ
ತೀವ್ರ ಬೇಸರ, ಕೋಪ ಇತ್ತು. ಮಾತಿನಲ್ಲೇ ಅವರು ರಚಿತಾ ಮೇಲಿನ ಸಿಟ್ಟನ್ನು ತಣ್ಣಗೆ ಹೊರ ಹಾಕಿದರು.

click me!