
ಅದು ಏನೋ ಗೊತ್ತಿಲ್ಲ. ಕನ್ನಡದ ಮಟ್ಟಿಗೆ ಅತಿ ಹೆಚ್ಚಿನ ಟ್ರೋಲ್ ಗೆ ಗುರಿಯಾಗುವವರೆಂದರೆ ಅದು ನಟಿ ರಶ್ಮಿಕಾ ಮಂದಣ್ಣ. ಸೋಶಿಯಲ್ ಮೀಡಿಯಾದಲ್ಲಿ ಇವರನ್ನು ಅನೇಕರು ಟ್ರೋಲ್ ಮಾಡಿ ಕಾಡುತ್ತಾರೆ ಬಿಡಿ.
ಧ್ರುವ ಸರ್ಜಾ ಅವರೊಂದಿಗೆ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಮಾಡಿರುವ ಟ್ವೀಟ್ ಇದೀಗ ಸುದ್ದಿ ಮಾಡುತ್ತಿದೆ. ಅಕ್ಟೋಬರ್ 24 ರಂದು ಚಿತ್ರದ ಟ್ರೇಲರ್ ರಿಲೀಸ್ ಗೆ ಮುಹೂರ್ತವೂ ಫಿಕ್ಸ್ ಆಗಿದೆ. ಇದೇ ವಿಚಾರದಕ್ಕೆ ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.
ದೇವರಕೊಂಡ ಜತೆ ಇದ್ದ ಪೋಟೋಗಳೆಲ್ಲಾ ಡಿಲೀಟ್
ನಂದಕಿಶೋರ್ ನಿರ್ದೇಶನದ ಚಿತ್ರ ಪಕ್ಕಾ ಮಾಸ್ ಎಂದು ಹೇಳಲಾಗುತ್ತಿದೆ. ನನ್ನ ಕನ್ನಡದ ಕುಟುಂಬ ನಿಜಕ್ಕೂ ಕಾಯುತ್ತಿದೆಯೇ? ಕೌಂಟ್ ಡೌನ್ ಸ್ಟಾರ್ಟ್ ಆಗಿದೆ ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾಪರ್ಣೆ ಮಾಡಿದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಂತರ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬ್ಯೂಸಿಯಾದರು. ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜತೆ ಕಿಸ್ಸಿಂಗ್ ಸೀನ್ ಗಳಲ್ಲಿಯೂ ಕಾಣಿಸಿಕೊಂಡು ಸುದ್ದಿ ಮಾಡಿದರು. ರಶ್ಮಿಕಾ ಕನ್ನಡದ ಚಮಕ್, ಯಜಮಾನ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ. ತೆಲಗು ಮತ್ತು ತಮಿಳಿನಲ್ಲಿ ಬ್ಯೂಸಿಯಾಗಿರುವ ನಟಿ ಕೈನಲ್ಲಿ ಅನೇಕ ಚಿತ್ರಗಳಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.