
ಕನ್ನಡ ಚಿತ್ರರಂಗದಲ್ಲಿ ಮಿಂಚಿ ಮರೆಯಾದ ನಟಿಯರಲ್ಲಿ ಪ್ರೇಮಾ (Prema) ಕೂಡ ಒಬ್ಬರು. ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಪ್ರೇಮಾ ಅವರು, ತಮ್ಮ ನಟನೆಯ ಎರಡನೇ ಚಿತ್ರ 'ಓಂ' ಚಿತ್ರವು ಸೂಪರ್ ಹಿಟ್ ಆಗುವ ಮೂಲಕ ಸ್ಟಾರ್ ನಟಿಯಾಗಿ ನೆಲೆ ನಿಂತರು. ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ನಟಿಸಿರುವ ಪ್ರೇಮಾ ಅವರು ಬಹಳಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಪ್ರೇಮಾ ಅವರು ಮದುವೆಯಾಗಿದ್ದು, ಬಳಿಕ ಸಂಸಾರದಲ್ಲಿ ಏನೋ ಸಮಸ್ಯೆ ಕಾಣಿಸಿಕೊಂಡು ವಿಚ್ಚೇದನ ಪಡೆದಿದ್ದು ಎಲ್ಲವೂ ಕನ್ನಡ ಸಿನಿಪ್ರೇಕ್ಷರಿಗೆ ಗೊತ್ತು. ಅವೆಲ್ಲವೂ ಒಂಥರಾ ಓಪನ್ ಸೀಕ್ರೆಟ್ ಎನ್ನಬಹುದು. ಆದರೆ, ಇದೀಗ ಪ್ರೇಮಾ ಹೇಳಿದ್ದಾರೆ ಎಂಬ ಸಂಗತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ನಿಜವಾಗಿಯೂ ಇಷ್ಟೊಂದು ಕಾಲ ಓಪನ್ ಆಗಿರದಿದ್ದ ಸೀಕ್ರೆಟ್!
ಅತಿಲೋಕ ಸುಂದರಿ ಜೊತೆ ಚಿರಂಜೀವಿ ಡಾನ್ಸ್ ಮಾಡುವಾಗ ಡಾಕ್ಟರ್-ನರ್ಸ್ ಅಲ್ಲಿದ್ರು ಯಾಕೆ?
ಹಾಗಿದ್ದರೆ ನಟಿ ಪ್ರೇಮಾ ಅವರು ಅಂಥ ಯಾವ ಸೀಕ್ರೆಟ್‌ಅನ್ನು ಜಗತ್ತಿಗೆ ಬಿಚ್ಚಿಟ್ಟಿದ್ದಾರೆ? ಇಲ್ಲಿಯವರೆಗೂ ಬಾಯ್ಬಿಡದ ಗುಟ್ಟು ಈಗ ರಟ್ಟಾಗಿದೆ ಎಂದರೆ ಅದೇನು ಎಂಬ ಕುತೂಹಲ ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.. 'ಓಂ ಚಿತ್ರ ಹಿಟ್ ಆಗಿರಲಿಲ್ಲ ಅಂದ್ರೆ ನಾನು ಚಿತ್ರರಂಗ ಬಿಟ್ಟು ಬೇರೆ ಕೆಲಸ ಮಾಡಲು ನಿರ್ಧರಿಸಿದ್ದೆ' ಎಂದಿದ್ದಾರೆ ನಟಿ ಪ್ರೆಮಾ. ಜೊತೆಗೆ, 'ಕಾಸ್ಟಿಂಗ್ ಕೌಚ್ ಬಗ್ಗೆ ನನಗೆ ಗೊತ್ತಿಲ್ಲ, ನಾನು ಹಾರ್ಡ್ ವರ್ಕ್ ಮಾಡಿ ಮೇಲೆ ಬಂದಿದ್ದೇನೆ. ಹಾಗೂ, ನಮ್ಮ ಕಾಲದಲ್ಲಿ ಅದು ಇರುತ್ತಿರಲಿಲ್ಲ' ಎಂದಿದ್ದಾರೆ ನಟಿ ಪ್ರೇಮಾ.
ಹೌದು, ನಟಿ ಪ್ರೇಮಾ ಈ ಎರಡರ ಬಗ್ಗೆ ಮಾತನ್ನಾಡುವ ಮೂಲಕ ಕನ್ನಡ ಚಿತ್ರರಂಗ ಹಾಗು ಅವರ ಅಭಿಮಾನಿಗಳು, ಎರಡೂ ಕಡೆಯವರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕಾರಣ, 'ನಟಿಯರೆಂದರೆ ಕಾಸ್ಟಿಂಗ್ ಕೌಚ್ ಎದುರಿಸಿರುತ್ತಾರೆ. ಅದಕ್ಕೆ ಕಾಂಪ್ರೋಮೈಸ್ ಆದವರು ಮಾತ್ರ ಆ ವೃತ್ತಿಯಲ್ಲಿ ಮೇಲೆ ಬಂದು ಸ್ಟಾರ್ ನಟಿಯರಾಗುತ್ತಾರೆ. ಉಳಿದವರು ಮೂಲೆಗುಂಪು ಸೇರುತ್ತಾರೆ' ಎಂಬ ಅಭಿಪ್ರಾಯ ಹಲವರಲ್ಲಿದೆ. ಅದಕ್ಕೆ ಪುಷ್ಟಿ ಕೊಡುವಂತೆ ಚಿತ್ರರಂಗದಲ್ಲಿ ಇರುವ ಕೆಲವು ನಟಿಯರೇ ಮಾತನ್ನಾಡಿದ್ದಾರೆ.
ಬೆನ್ನಿನ ಮೇಲೆ ಅಂಬರೀಷ್ ಎತ್ತಿಕೊಂಡು ಕೋಪ ಕಮ್ಮಿಆಗಲೆಂದು ಬಯಸಿದ್ರಾ ಸುಧಾರಾಣಿ!
ಆದರೆ, ಕನ್ನಡತಿ ನಟಿ ಪ್ರೇಮಾ ಅವರು ಹೇಳಿರುವ ಮಾತು ಅದು ಸುಳ್ಳು ಎಂದು ಸಾಬೀತು ಮಾಡಿದೆ. ಕಾರಣ, ನಟಿ ಪ್ರೇಮಾ ಅವರು ಒಂದೆರಡು ಚಿತ್ರಗಳಲ್ಲಿ ನಟಿಸಿ ಮರೆಯಾದ ನಟಿಯಲ್ಲ. ಬರೋಬ್ಬರಿ ಒಂದು ದಶಕಗಳ ಕಾಲ ಮೆರೆದು ಕನ್ನಡ ಚಿತ್ರರಂಗದಲ್ಲಿ ಛಾಪ್ ಮೂಡಿಸಿದ ನಟಿ. ಹೀಗಾಗಿ ಪ್ರೇಮಾ ಮಾತನ್ನು ಗಣನೆಗೆ ತೆಗೆದುಕೊಳ್ಳುವುದು ಗ್ಯಾರಂಟಿ. ಆದ್ದರಿಂದ ಪ್ರೇಮಾರ ಈ ಮಾತು ಕನ್ನಡ ಚಿತ್ರರಂಗದಲ್ಲಿರುವ ಪುರುಷರ ಘನತೆ ಹೆಚ್ಚಿಸಿದೆ ಎಂದು ಘಂಟಾಘೋಷವಾಗಿ ಹೇಳಬಹುದು. ನೀವೇನಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.