ನಾನೊಬ್ಬ ಸ್ಟಾರ್ ಅಲ್ಲ ನಟ ಅಷ್ಟೇ; ಕಿರಿಕ್ ಕೀರ್ತಿಗೆ ಅಪ್ಪು ಹೀಗೆ ಹೇಳಿದ್ಯಾಕೆ?

By Shriram Bhat  |  First Published Nov 21, 2024, 4:36 PM IST

ನಾನು ಅದಕ್ಕೆ ಪ್ರೊಡ್ಯೂಸರ್, ನಿಮ್ಮನ್ನು ನಾನು ಫಾಲೋ ಮಾಡ್ಬೇಕಿತ್ತು, ನಾನು ನಿಮ್ಮನ್ನ ಫಾಲೋ ಮಾಡ್ತಾನೇ ಇದ್ದೆ ಬ್ಯಾಕ್ ಟು ಬ್ಯಾಕ್.. ನೀವು ಮನೆಯಿಂದ ಹೊರಟ್ರಿ, ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಆವತ್ತು.. ನೀವು ನಂಗೆ ಹೇಳ್ತಾನೇ ಇದ್ರಿ, ಅಲ್ಲಿದೀನಿ ಇಲ್ಲಿದೀನಿ..


ಇಲ್ಲೊಂದು ವಿಷ್ಯ ಇದೆ, ಇದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರಿಗೆ ಸಂಬಂಧಿಸಿದ್ದು. ನಿರೂಪಕ ಕಿರಿಕ್ ಕೀರ್ತಿ (Kirik Keerthi) ಒಂದು ಘಟನೆ ಬಗ್ಗೆ ಪುನೀತ್ ರಾಜ್‌ಕುಮಾರ್ ಎದುರಲ್ಲೇ ಒಮ್ಮೆ ಹೇಳಿದ್ದಾರೆ.. 'ನಾವು ಒಂದು ವೋಟಿಂಗ್ ತರ ಮಾಡಿದ್ವಿ ಒಂದು ನ್ಯೂಸ್ ಚಾನೆಲ್‌ನಲ್ಲಿ, ಬೆಸ್ಟ್‌ ಆಕ್ಟರ್ ಯಾರು ಈ ವರ್ಷ ಅಂತ.. ಅದ್ರಲ್ಲಿ ನೀವು ಗೆದ್ದಿದ್ರಿ.. ಹತ್ತು ಗಂಟೆಗೆ ಒಂದ್ ಲೈವ್ ಇತ್ತು.. ಲೈವ್‌ನಲ್ಲಿ ನಿಮ್ಗೆ ಅವಾರ್ಡ್ ಕೊಡೋದು ಅಂತ.. ಗ್ರೀನ್ ಮ್ಯಾಟ್ ಸ್ಟುಡಿಯೋ ಅದು.. 

ಅಲ್ಲೊಂದು ಲೈವ್ ಕಾರ್ಯಕ್ರಮ ಇತ್ತು.. ನಿಮಗೆ ಅಲ್ಲೊಂದು ಪ್ರಶಸ್ತಿ ಕೊಡ್ಬೇಕು ಅಂತ, 10 ಗಂಟೆಗೆ ಲೈವ್.. ಬಟ್ ನೀವು ಅಲ್ಲಿಗೆ ಏನ್ ಅಂದ್ಕೊಂಡು ಬಂದ್ರೋ ಏನೋ! ಹತ್ತು ಗಂಟೆಗೆ ಲೈವ್, ಅಲ್ಲಿ ನಿಮಗೆ ನಾವು ಪ್ರಶಸ್ತಿ ಕೊಡ್ಬೇಕು, ಪುನೀತ್ ರಾಜ್‌ಕುಮಾರ್ ಜೊತೆ ಲೈವ್ ಅಂತ, ಇದು ಮ್ಯಾಟರ್. 

Tap to resize

Latest Videos

undefined

ಅತಿಲೋಕ ಸುಂದರಿ ಜೊತೆ ಚಿರಂಜೀವಿ ಡಾನ್ಸ್ ಮಾಡುವಾಗ ಡಾಕ್ಟರ್‌-ನರ್ಸ್ ಅಲ್ಲಿದ್ರು ಯಾಕೆ?

ನಾನು ಅದಕ್ಕೆ ಪ್ರೊಡ್ಯೂಸರ್, ನಿಮ್ಮನ್ನು ನಾನು ಫಾಲೋ ಮಾಡ್ಬೇಕಿತ್ತು, ನಾನು ನಿಮ್ಮನ್ನ ಫಾಲೋ ಮಾಡ್ತಾನೇ ಇದ್ದೆ ಬ್ಯಾಕ್ ಟು ಬ್ಯಾಕ್.. ನೀವು ಮನೆಯಿಂದ ಹೊರಟ್ರಿ, ಸಿಕ್ಕಾಪಟ್ಟೆ ಟ್ರಾಫಿಕ್ ಇತ್ತು ಆವತ್ತು.. ನೀವು ನಂಗೆ ಹೇಳ್ತಾನೇ ಇದ್ರಿ, ಅಲ್ಲಿದೀನಿ ಇಲ್ಲಿದೀನಿ, ವಿಧಾನಸೌಧದ ಹತ್ರ ಇದೀನಿ ಅಂತೆಲ್ಲಾ.. ಆದ್ರೆ ಕೇವಲ 3-4 ನಿಮಿಷ ಉಳಿದಿತ್ತು ಲೈವ್‌ಗೆ.. ನಾನು ನಿಮಗೆ ಫೋನ್ ಮಾಡಿದ್ದೆ, ಸರ್, ಇನ್ನೆರಡು ನಿಮಿಷಕ್ಕೆ ಲೈವ್ ಹೋಗ್ಬೇಕು ಅಂತ.. 

ಅದಕ್ಕೆ ಆ ಕಡೆಯಿಂದ ನೀವು 'ಇನ್ನು ಒಂದ್ ನಿಮಿಷಕ್ಕೆ ನಾನು ಬರ್ತೀನಿ' ಅಂದ್ರಿ.. ಒಂದೇ ನಿಮಿಷಕ್ಕೆ ಬಂದ್ರಿ.. ಹೇಗೆ ಅಂದ್ರೆ ರಾಜಭವನದ ಹತ್ರ ಟ್ರಾಫಿಕ್‌ನಲ್ಲಿ ಸಿಕ್ಕಾಕ್ಕೊಂಡಿದ್ರಿ, ಆದ್ರೆ ಅಲ್ಲೇ ನೀವು ಕಾರು ಇಳಿದು ನಮ್ ಸ್ಟುಡಿಯೋ ತನಕ ನಡ್ಕೊಂಡು ಬಂದ್ರಿ.. ಬಂದವ್ರೇ ನನ್ ಹೆಗಲ ಮೇಲೆ ಕೈ ಹಾಕಿ, 'ಸಾರಿ ಬ್ರದರ್, ಹೆವ್ವಿ ಟ್ರಾಫಿಕ್..' ಅಂತಂದ್ರಿ.. ನಿಮಗೆ ಆವತ್ತು ಬೆಸ್ಟ್ ಆಕ್ಟರ್ ಅವಾರ್ಡ್‌ ಕೊಟ್ಟಿದ್ದು, ಅದೂ ಇದೂ ಬೇರೆ ಎಲ್ಲಕ್ಕಿಂತ ಮಿಕ್ಕಿದ್ದು ನಿಮ್ಮ ಪರ್ಸನಾಲಿಟಿ.

ಬೆನ್ನಿನ ಮೇಲೆ ಅಂಬರೀಷ್ ಎತ್ತಿಕೊಂಡು ಕೋಪ ಕಮ್ಮಿಆಗಲೆಂದು ಬಯಸಿದ್ರಾ ಸುಧಾರಾಣಿ! 

ಈ ಸಂಗತಿನ ನಾನು ಸಾವಿರ ಜನಕ್ಕೆ ಹೇಳಿರಬಹುದು. ಒಬ್ಬ ವ್ಯಕ್ತಿಯಾಗಿ, ವ್ಯಕ್ತಿತ್ವದಲ್ಲಿ ಒಬ್ಬ ಸ್ಟಾರ್‌ಗೆ ಇರೋದಕ್ಕಿಂತ ಸಿಕ್ಕಾಪಟ್ಟೆ ಹೆಚ್ಚು ದೊಡ್ಡ ಗುಣ ನಿಮ್ಮಲ್ಲಿದೆ ಸರ್..' ಎಂದಿದ್ದಾರೆ ಕಿರಿಕ್ ಕೀರ್ತಿ. ಅದಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರು 'ಥ್ಯಾಂಕ್ಸ್‌ ಕೀರ್ತಿ, ಥ್ಯಾಂಕ್ಸ್ ವೆರಿ ಮಚ್. ಇದು ನನಗೂ ಆಕ್ಚುಯಲಿ ಮರ್ತೋಗಿತ್ತು ಕೀರ್ತಿಯವರೇ, ನೀವು ನೆನಪಿಸಿಕೊಟ್ಟದೀರ ಕೀರ್ತಿಯವ್ರೇ.. 'ನಾನೊಬ್ಬ ಸ್ಟಾರ್ ಅಲ್ಲ, ನಟ ಅಷ್ಟೇ.. ನನ್ನ ವೃತ್ತಿ ಬಂದು ನಟನೆ.. ಅದ್ರ ಮೂಲಕ ನನಗೆ ತುಂಬಾ ಹೆಸರು ಸಿಕ್ಕಿದೆ, ತುಂಬಾ ಪ್ರೀತಿ ಸಿಕ್ಕಿದೆ..'

 

 

click me!