ಚಾಕೊಲೇಟ್ ತಿನ್ಬಾರ್ದು, ಡಿಫರೆಂಟ್ ಸಲಾಡ್‌ಗಳೇ ಊಟ: ಬ್ಯೂಟಿ ಆಂಡ್ ಡಯಟ್ ಸೀಕ್ರೆಟ್‌ ಬಿಚ್ಚಿಟ್ಟ ನಟಿ ಲಕ್ಷ್ಮಿ

By Vaishnavi ChandrashekarFirst Published Jan 17, 2024, 10:38 AM IST
Highlights

ಇಷ್ಟು ದಿನ ಯಾರಿಗೂ ಹೇಳಿರದ ಬ್ಯೂಟಿ ಮತ್ತು ಫಿಟ್ನೆಸ್‌ ಸೀಕ್ರೆಟ್‌ ರಿವೀಲ್ ಮಾಡಿದ ನಟ ಲಕ್ಷ್ಮಿ. Do's & Dont's ಏನಿರಬಹುದು?
 

70'ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ರೂಲ್ ಮಾಡುತ್ತಿದ್ದ ನಟಿ ಲಕ್ಷ್ಮಿ ಈಗಲೂ ಎವರ್‌ಗ್ರೀನ್. ಕಲಾವಿದರಿಗೆ ವಯಸ್ಸೇ ಆಗೋಲ್ಲ ಅನ್ನೋದು ಲಕ್ಷ್ಮಿ ಅವರ ವಿಚಾರದಲ್ಲಿ 100% ಸತ್ಯ. ಸಿನಿಮಾ ಮತ್ತು ಕಿರುತೆರೆಯಲ್ಲಿ ಮಿಂಚುತ್ತಿರುವ ಲಕ್ಷ್ಮಿ ಈಗ ಓಟಿಟಿ ಲೋಕಕ್ಕೂ ಕಾಲಿಟ್ಟಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ ಬ್ಯೂಟಿ ಆಂಡ್ ಫಿಟ್ನೆಸ್‌ ಸೀಕ್ರೆಟ್‌ ಏನಾಗಿತ್ತು? ಅವರೇ ರಿವೀಲ್ ಮಾಡಿದ್ದಾರೆ ನೋಡಿ.

'60-70ರಲ್ಲಿ ಕ್ಯಾಡ್ಬೆರಿ ಚಾಕೊಲೇಟ್ ಆಗಷ್ಟೇ ಬಂದಿತ್ತು. ಅದನ್ನು ತೆಗೆದುಕೊಂಡು ತಿಂದರೆ...ಅದನ್ನು ತಿನ್ನಬಾರದು ಹಲ್ಲು ಹೋಗುತ್ತೆ ಅಂತಿದ್ದರು. Do's & Dont's ಜಾಸ್ತಿ ಇತ್ತು ನಮ್ಮ ಗ್ರೂಪ್‌ಗೆ. ಆಗ ಬರುತ್ತಿದೆ ಮ್ಯಾಗಜಿನ್‌ ಒಂದರಲ್ಲಿ ನಾನು ಓದಿದ್ದೆ, ದಿನ ಒಂದು ಹೊತ್ತು ಊಟ ಅಂತ ತರಕಾರಿ ಮತ್ತು ಹಣ್ಣು ತಿನ್ನಬೇಕು ಒಳ್ಳೆ ಆರೋಗ್ಯ ಕೊಡುತ್ತದೆ ಹಾಗೂ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು. ಅದನ್ನು ತಪ್ಪದೆ ಫಾಲೋ ಮಾಡಿ...ಅದೇ ನನ್ನ ಊಟ ಆಗಿತ್ತು. ಯಾವುದೇ ರೀತಿಯಲ್ಲಿ ಕಾರ್ಬೋಹೈಡ್ರೇಟ್ ಸ್ವೀಕರಿಸುತ್ತಿರಲಿಲ್ಲ. ಬೆಳಗ್ಗೆ 6 ಗಂಟೆಗೆ ಶೂಟಿಂಗ್‌ ಸೆಟ್‌ನಲ್ಲಿ ಇರಬೇಕು ಹೀಗಾಗಿ ಬೆಳಗ್ಗೆ 4 ಗಂಟೆಗೆ ಎದ್ದೇಳಬೇಕು ಆಗ  ಹಾಲು ಕುಡಿಯುತ್ತೀನಿ. ಮಗಳು ಹುಟ್ಟಿದ್ದಾಗ ನಾನು 20 ಗಂಟೆಗಳ ಕಾಲ ಚಿತ್ರೀಕರಣ ಮಾಡುತ್ತಿದ್ದೆ. ಆ ಸಮಯದಲ್ಲಿ ಲೋಕಲ್ ಶೂಟಿಂಗ್ ಇದ್ದ ಕಾರಣ ಬೆಳಗ್ಗೆ 10.30ಗೆ ಮನೆ ಕಡೆ ಹೊರಟಿ ಫೀಡಿಂಗ್ ಮಾಡಿ ಮತ್ತೆ ಶೂಟಿಂಗ್ ಬರುತ್ತಿದ್ದೆ. ಮಧ್ಯಾಹ್ನ 1 ಗಂಟೆಗೆ ಮಜ್ಜಿಗೆ ಕುಡಿಯುವುದು, 2 ಗಂಟೆಗೆ ನಾನು ತಯಾರಿ ಮಾಡಿರುವ ಸಾಲಡ್‌ಗಳನ್ನು ತಿನ್ನುತ್ತಿದ್ದೆ. ಕೊನೆಯಲ್ಲಿ ತಿನ್ನುವ ಸಲಾಡ್‌ಗೆ ಮೊಸರು ಮತ್ತು ಸ್ವಲ್ಪ ಸಕ್ಕರೆ ಸೇರಿಸುತ್ತಿದ್ದೆ ಏಕೆಂದರೆ ನಾನು ಸ್ವೀಟ್‌ ವ್ಯಕ್ತಿ' ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಲಕ್ಷ್ಮಿ ಮಾತನಾಡಿದ್ದಾರೆ.

ಗಲ್ಲಿಗೇರಬೇಕಾದವನು ಕಣ್ಣು ಮಿಟುಕಿಸಿ, ಮ್ಮು..ಎಂದನಂತೆ! ಜ್ಯೂಲಿ ಲಕ್ಷ್ಮೀ ಹೇಳಿದ ಕೈದಿ ಕಥೆ

'ಕಾಫಿ ಟೀ ಅಭ್ಯಾಸ ಇಲ್ಲದ ಕಾರಣ ಸಲಾಡ್‌ ತಿನ್ನುತ್ತಿದ್ದೆ. ಸುಮಾರು 1971ರಿಂದ 1988ರ ವರೆಗೂ ನನ್ನ ಪ್ರಮುಖ ಆಹಾರವೇ ತರಕಾರಿ ಹಣ್ಣುಗಳ ಸಲಾಡ್. ಪ್ರತಿ ಸಲವೂ ವಿಭಿನ್ನವಾಗಿ ಸೇವಿಸುತ್ತಿದ್ದೆ..ಅಪ್ಪಳ ಕೂಡ ಸೇರಿಸಿಕೊಳ್ಳುತ್ತಿದ್ದೆ. ನಟ ನಾಗಾರ್ಜುನ ಒಂದು ಸಲ ತೆಲುಗು ಸಿನಿಮಾ ಮಾಡುವಾಗ ಹೇಳಿದ್ದರು 'ಇಷ್ಟು ಚೆನ್ನಾಗಿರುವ ಸಲಾಡ್ ನಾನು ತಿಂದಿಲ್ಲ' ಎನ್ನುತ್ತಿದ್ದರು. ನಾವು ಸಾಮಾನ್ಯವಾಗಿ ಪ್ರತಿ ದಿನ ಅನ್ನ ತಿಂದು ಬೆಳೆದವರು ಅದರಲ್ಲೂ ಮೊಸರನ್ನ ಬೇಕಿತ್ತು ಆದರೆ ನನಗೆ ಎಂದೂ ಅನ್ನ ತಿನ್ನ ಬೇಕು ಅನ್ನೋ ಆಸೆ ಇರಲಿಲ್ಲ. 1988ರಲ್ಲಿ ನನ್ನ ಪತಿ ಹೇಳಿದ್ದರು ಇದನ್ನು ಇನ್ನೂ ತಿಂದು ನೀನು ಏನು ಸಾಧನೆ ಮಾಡುತ್ತಿರುವೆ ಅಂತ. ನಟ ಪ್ರಭು ಕೂಡ ರೀ ನಿಮ್ಮ ಜೊತೆ ಕುಳಿತುಕೊಳ್ಳಲು ಬೇಸರವಾಗುತ್ತದೆ ಇದೇ ತಿನ್ನುತ್ತೀರಾ ಅಂತ. ಅವರು ಹೇಳ್ತಾರೆ ಲೋ ಅವರಿಗೆ ಊಟ ಹಾಕ್ರೋ ಸುಮ್ಮನೆ ಹಸು ತರ ಮೇಯಿತ್ತಿರುತ್ತಾಳೆ ಅಂತ ಗಲಾಟೆ ಮಾಡಿದರು. ಅವರ ಮನೆಯಲ್ಲಿ ಒಂದು ಊಟ ಮಾಡಲು ಶುರು ಮಾಡಿದೆ, ಅವರ ಮನೆಯಲ್ಲಿ ಮೊಸರನ್ನ ಶುರು ಮಾಡಿದೆ. ವಯಸ್ಸು ಆಗುತ್ತಿದ್ದಂತೆ ಪ್ರತಿಯೊಂದು ಕಡಿಮೆ ಮಾಡಿಕೊಂಡು ಬಂದಿರುವೆ' ಎಂದು ಲಕ್ಷ್ಮಿ ಹೇಳಿದ್ದಾರೆ. 

click me!