ಬಿಗ್‌ಬಾಸ್‌ ವಿನ್ನರ್ ಶಶಿಗೆ ಗಾಯ: ಮೆಹಬೂಬಾ ಸಿನಿಮಾ ರಿಯಲಿಸ್ಟಿಕ್‌ ಫೈಟ್ ವೇಳೆ ಅವಘಡ

By Sathish Kumar KH  |  First Published Jan 16, 2024, 1:58 PM IST

ಬಿಗ್‌ಬಾಸ್‌ ಕನ್ನಡ ಸೀಸನ್ 6ರ ವಿಜೇತ ಶಶಿ ಅವರು ಮೆಹಬೂಬಾ ಸಿನಿಮಾದ ಶೂಟಿಂಗ್ ವೇಳೆ ಫೈಟಿಂಗ್‌ ಸೀನ್‌ ವೇಳೆ ಅವಘಡ ಸಂಭವಿಸಿದ್ದು, ಕಳೆದೊಂದು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.


ಬೆಂಗಳೂರು (ಜ.16): ಬಿಗ್‌ಬಾಸ್‌ ಕನ್ನಡ ಸೀಸನ್ 6ರ ವಿಜೇತ ಶಶಿ ಅವರು ಮೆಹಬೂಬಾ ಸಿನಿಮಾದ ಶೂಟಿಂಗ್ ವೇಳೆ ಫೈಟಿಂಗ್‌ ಸೀನ್‌ ವೇಳೆ ಅವಘಡ ಸಂಭವಿಸಿದ್ದು, ಕಳೆದೊಂದು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.

ಮೈಸೂರಿನ ಕಾಲೇಜಿನಲ್ಲಿ ಕಟ್ಟಡದ ಮೇಲೆ ಹತ್ತುವ ಸೀನ್‌ ಇತ್ತು. ಇದನ್ನು ರಿಯಲಿಸ್ಟಿಕ್‌ ಆಗಿ ಶೂಟಿಂಗ್ ಮಾಡುವಾಗ ಈ ಅವಘಡ ಸಂಭವಿಸಿದೆ. ಕಟ್ಟಡವನ್ನು ಹತ್ತುವಾಗ ಹಳೆಯ ಕಟ್ಟಡವಾದ್ದರಿಂದ ಹಗ್ಗವನ್ನು ಕಟ್ಟಿದ್ದರೂ ಕೂಡ ಸಿಮೆಂಟ್‌ ಸ್ವಲ್ಪ ಬಿಟ್ಟುಕೊಂಡಿದ್ದರಿಂದ ಹಗ್ಗವೂ ಜಾರಿಗೆ. ಹೀಗಾಗಿ, ನಾನು ಸುಮಾರು 8 ಅಡಿ ಎತ್ತರಿಂದ ಬಿದ್ದಿದ್ದೇನೆ. ಆಗ ನನ್ನ ಕಾಲಿಗೆ ಸ್ವಲ್ಪ ಗಾಯವಾಗಿದ್ದು, ಕಳೆದೊಂದು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿದ್ದೇನೆ. ಈಗ ನಾನು ಸಂಪೂರ್ಣ ಗುಣಮುಖವಾಗಿದ್ದೇನೆ. ಈಗ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Tap to resize

Latest Videos

ಸೀತಾರಾಮ: ಲವ್‌ಗೆ ಸಪೋರ್ಟ್ ಮಾಡೋ ಗೆಳೆಯಾ ಅಂದ್ರೆ, ಲವರ್ ಫ್ರೆಂಡ್‌ನ ಬುಟ್ಟಿಗಾಕೊಂಡ ಅಶೋಕ!

ಇದೊಂದು ಅಂತರ್ ಧರ್ಮೀಯ ಪ್ರೇಮಕಥೆ: ಇನ್ನು ಸಿನಿಮಾದ ಬಗ್ಗೆ ಸ್ವತಃ ಮಾಹಿತಿ ಹಂಚಿಕೊಂಡಿರುವ ನಾಯಕ ನಟ ಶಶಿ ಅವರು ಮೆಹಬೂಬಾ ಇದು ಅಯೋಧ್ಯೆ ಅಥವಾ ಬಾಬರಿ ಮಸೀದಿಯ ಕಥೆಯಲ್ಲ. ಇದು ಹಿಂದೂ ಹುಡುಗ ಕಾರ್ತಿಕ್ ಗೌಡ ಮತ್ತು ಮುಸ್ಲಿಂ ಹುಡುಗಿ ನಜ್ರಿಯಾ ಬಾನು ಅವರ ಪ್ರೇಮಕಥೆಯಾಗಿದೆ. ಮೆಹಬೂಬಾ ಅಂದರೆ ಗರ್ಲ್‌ಫ್ರೆಂಡ್‌ ಅಲ್ಲ. ನೀವು ಪಾತ್ರ ಅಥವಾ ನಟನಿಗಾಗಿ ಚಪ್ಪಾಳೆ ತಟ್ಟದೇ ಸಿನಿಮಾಕ್ಕಾಗಿ ಚಪ್ಪಾಳೆ ತಟ್ಟಿ ಎಂದು ಕೇಳಿದ್ದಾರೆ.

ಮಾರ್ಡನ್ ರೈತ ಶಶಿಗೆ ಕೃಷಿ ಸಚಿವ ಚಲುವನಾರಾಯಣಸ್ವಾಮಿ ಸಾಥ್:
ಬಿಗ್ ಬಾಸ್ ಖ್ಯಾತಿಯ ಶಶಿ ಜನವರಿ 6ರಂದು ಜನ್ಮದಿನದ ಸಂಭ್ರಮವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ, ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ ‘ಮೆಹಬೂಬ’ ಪೋಸ್ಟರ್ ಅನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಬಿಡುಗಡೆ ಮಾಡಿಸಿದೆ. ಈ ವೇಳೆ ಸಚಿವರೂ ಕೂಡ ಇಡೀ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

ಇದ್ದಕ್ಕಿದ್ದಂತೆ 'ಮ್ಯಾಕ್ಸ್‌' ಶೂಟಿಂಗ್ ನಿಂತಿದ್ದಕ್ಕೆ ಕಾರಣ ಬಿಚ್ಚಿಟ್ಟ ಸುದೀಪ್; ಅಪ್ಡೇಟ್‌ ನೋಡಿ ಫ್ಯಾನ್ಸ್‌ ಖುಷ್!

ಈ ವೇಳೆ ಮಾತನಾಡಿದ್ದ ಸಚಿವ ಚಲುವನಾರಾಯಣಸ್ವಾಮಿ ಅವರು, ಮೆಹಬೂಬಾ ಸಿನಿಮಾಗೆ ಶಶಿ ಪ್ರೊಡ್ಯೂಸರ್ - ಹೀರೋ ಅವರೇ..ಲಾಭ-ನಷ್ಟ ಹಾಗೂ ಹೆಸರು ಅವ್ರದ್ದೇ. ರಾಜ್ಯದ ಜನ ಆಶೀರ್ವಾದ ಮಾಡಬೇಕಾಗುತ್ತದೆ. ನಾಯಕಿ ನನ್ನ ಗೆಳೆಯನ ಮಗಳು. ಹೀಗಾಗಿ ಇಬ್ಬರಿಗೆ ಸಿನಿಮಾ ಸಕ್ಸಸ್ ತರಲಿ. ಇತ್ತೀಚೆಗೆ ಅನೇಕ ಚಿತ್ರಗಳು ಸಕ್ಸಸ್ ಆಗುತ್ತಿವೆ. ಜನರಿಗೆ ಯಾವ ರೀತಿ ಚಿತ್ರಗಳು ಇಷ್ಟಪಡುತ್ತಾರೆ. ಇಷ್ಟಪಡಲ್ಲ ಅನ್ನುವುದು ಊಹೆ ಮಾಡಲು ಆಗುವುದಿಲ್ಲ. ನಿಮ್ಮೆಲ್ಲ ಸಹಕಾರ ಇಡೀ ತಂಡ ಮೇಲೆ ಇರಲಿ ಎಂದು ಹಾರೈಸಿದ್ದರು.

click me!