ಇದು ನನ್ನ ಮೊದಲ ಸಿನಿಮಾ ಎಂದೆನಿಸುತ್ತಿದೆ: ನಟಿ ಕೃಷಿ ತಾಪಂಡ

By Suvarna NewsFirst Published Sep 9, 2021, 2:49 PM IST
Highlights

ಲಂಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕೃಷಿ ತಾಪಂಡ ಕಮ್ ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. 

ಗಣೇಶ ಹಬ್ಬದ ಪ್ರಯುಕ್ತ ನಾಳೆ ರಾಜ್ಯದ್ಯಾಂತ ಲೂಸ್ ಮಾದ ಯೋಗೇಶ್ ಹಾಗೂ ಕೃಷಿ ತಾಪಂಡ ನಟನೆಯ ಲಂಕೆ ಸಿನಿಮಾ ಬಿಡುಗಡೆಯಾಗುತ್ತಿದೆ. 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದ ನಂತರ ಇದು ಕೃಷಿ ಕಮ್ ಬ್ಯಾಕ್ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ. 

ಚಿತ್ರ ಬಿಡುಗಡೆ ಸಂಭ್ರಮದಲ್ಲಿರುವ ಕೃಷಿ, ಚಿತ್ರದ ಬಗ್ಗೆ ಟೈಮ್ಸ್‌ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ. 'ಕಥೆ ಕೇಳಿದ ಮೊದಲ ದಿನವೇ ನನಗೆ ಗೊತ್ತಿತ್ತು ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಎಲ್ಲಾ ತರ ಎಲಿಮೆಂಟ್ ಹೊಂದಿದೆ ಆದರೆ ಯಾವ ಎಕ್ಸಪರಿಮೆಂಟ್ ಇಲ್ಲ ಎಂದು. ಚಿತ್ರದಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಚಿತ್ರವಿಡೀ ನಾನು ಯೋಗಿ ಕಾಣಿಸಿಕೊಳ್ಳುತ್ತೇವೆ. ನನಗೆ ಈ ಕಮರ್ಷಿಯಲ್ ಬ್ರೇಕ್ ಬೇಕಿತ್ತು' ಎಂದು ಕೃಷಿ ಮಾತನಾಡಿದ್ದಾರೆ. 

'ಎರಡು ದಶಕಗಳನ್ನು ನಡೆಸಿರುವ ಕಥೆ ಇದು ಒಂದು ಇಂಟ್ರೆಸ್ಟಿಂಗ್ ರೀತಿಯಲ್ಲಿ ಲಿಂಕ್ ಹೊಂದಿರುತ್ತದೆ. ನನ್ನ ಪಾತ್ರ ತುಂಬಾ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪಕ್ಕದ ಮನೆ ಹುಡುಗಿ ತರನೂ ಇರುತ್ತಾಳೆ ಹಾಗೂ ಸಣ್ಣ ಫೈಟ್‌ ಸೀನ್ ಕೂಡ ಮಾಡುತ್ತಾಳೆ. ಮಾಸ್, ಪ್ರೀತಿ, ಭಾವನೆಗಳು, ಕಣ್ಣೀರು ಹಾಗೂ ಸಂತೋಷ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ತುಂಬ ವರ್ಷಗಳಿಂದ ನಾನು ಯೋಗಿ ಸ್ನೇಹಿತರು, ಒಮ್ಮೆ ಒಟ್ಟಿಗೆ ಕೆಲಸ ಮಾಡಬೇಕು ಎಂದಿತ್ತು ಲಂಕೆ ಮೂಲಕ ಇಡೇರಿದೆ' ಎಂದು ಕೃಷಿ ಹೇಳಿದ್ದಾರೆ. 

‘ಲಂಕೆ’ಯಲ್ಲಿ ರಾಮ, ರಾವಣ ಎರಡೂ ಆಗಲಿದ್ದಾರೆ ಲೂಸ್ ಮಾದ ಯೋಗಿ!

ಹಲವು ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕೃಷಿ ಕಮ್ ಬ್ಯಾಕ್ ಬಗ್ಗೆ ಮಾತನಾಡಿದ್ದಾರೆ. ' 2018ರಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ನಂತರ ಯಾವ ಚಿತ್ರವೂ ಬಿಡುಗಡೆ ಆಗಿರಲಿಲ್ಲ. ನಾಲ್ಕು ಸಿನಿಮಾಗಳಲ್ಲಿ ನಟಿಸಿರುವೆ ಆದರೆ ಕೊರೋನಾ ಪ್ಯಾಂಡಮಿಕ್‌ನಿಂದ ಬಿಡುಗಡೆ ತಡವಾಗಿದೆ. ಈಗ ಲಂಕೆ ರಿಲೀಸ್ ಆಗುತ್ತಿರುವುದಕ್ಕೆ ಇದು ನನ್ನ ಮೊದಲ ಸಿನಿಮಾ ರಿಲೀಸ್ ಭಾವನೆ ನೀಡುತ್ತಿದೆ' ಎಂದಿದ್ದಾರೆ.

click me!