
ಕನ್ನಡ ನಟಿ ಕಾರುಣ್ಯಾ ರಾಮ್ ಅವರು ( Actress Karunya Ram Sister ) ತಂಗಿ ಸಮೃದ್ಧಿ ಅವರು ಬೆಟ್ಟಿಂಗ್ ಆಡಿ, ಸಾಲ ಮಾಡಿದ್ದಾರೆ ಎಂದು ಆರೋಪ ಮಾಡಿ, ಸ್ವಂತ ತಂಗಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ನಟಿ ಕಾರುಣ್ಯಾ ರಾಮ್ ಅವರು ತಂಗಿ ಸಮೃದ್ಧಿ ರಾಮ್ ಕೂಡ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಈ ವೇಳೆ ಸಮೃದ್ಧಿ ಅವರು ಮೇಕಪ್ ಆರ್ಟಿಸ್ಟ್, ಬ್ಯೂಟಿಕ್ ಆಗಿ ಕೂಡ ಕೆಲಸ ಮಾಡುತ್ತಿದ್ದರು.
ಕೆಲ ವರ್ಷಗಳಿಂದ ಕಾರುಣ್ಯಾ ರಾಮ್ ಅವರು ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಸಮೃದ್ಧಿ ರಾಮ್ ಅವರು ಒಂದೂರಲ್ಲಿ ರಾಜ ರಾಣಿ, ಮನೆ ದೇವ್ರು ಧಾರಾವಾಹಿಯಲ್ಲಿ ನಟಿಸಿದ್ದರು. ಸೀರಿಯಲ್‌ನಲ್ಲಿ ನಟಿಸಿದ್ದ ಸಮೃದ್ಧಿ ರಾಮ್ ಅವರು ಇತ್ತೀಚೆಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡಿದ್ದು ಕಡಿಮೆ. ಸೀರಿಯಲ್ ಬಿಟ್ಟ ಬಳಿಕ ಅವರು ಬ್ಯುಸಿನೆಸ್ ಕಡೆಗೆ ಮುಖ ಮಾಡಿದ್ದರು.
ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಆಟ ಆಡಿ 25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬ್ಯುಸಿನೆಸ್‌ನಲ್ಲಿಯೂ ನಷ್ಟ ಮಾಡಿಕೊಂಡಿದ್ದರು. ಆಮೇಲೆ ಖಾಸಗಿ ವ್ಯಕ್ತಿಗಳಿಂದ ಸಾಲ ಕೂಡ ಪಡೆದಿದ್ದರು. ಹೀಗಾಗಿ ಅವರು ಮನೆಯಲ್ಲಿದ್ದ ಹಣ, ಚಿನ್ನವನ್ನು ಸಾಲಕ್ಕೆ ಬಳಸಿದ್ದಾರೆ.
ಸಾಲಗಾರರು ಮನೆಗೆ ಬಂದು ಹಣ ಕೊಡಿ ಎಂದು ಪೀಡಿಸಿದ ಮೇಲೆ, ಹಣ ಬಳಕೆ ಮಾಡಿಕೊಂಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಮೃದ್ಧಿ ರಾಮ್ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ.
ಅತ್ತ ಕಾರುಣ್ಯಾ ರಾಮ್ ಅವರಿಗೆ ಮನೆ ಮುಂದೆ ಬಂದು ಸಾಲಗಾರರು ಕಾಟ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಪೋಸ್ಟ್ ಹಾಕಿದರೂ ಕೂಡ ಕೆಲವರು ಅಶ್ಲೀಲ ಕಾಮೆಂಟ್‌ಗಳನ್ನು ಹಾಕುತ್ತಿದ್ದರಂತೆ. ಹೀಗಾಗಿ ಕಾರುಣ್ಯಾ ರಾಮ್ ಅವರು ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರತಿಭಾ, ರಕ್ಷಿತ್, ಪ್ರಜ್ವಲ್, ಸಾಗರ್, ಸಮೃದ್ಧಿ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.