ಗೂನು ಬೆನ್ನಿನ ನಟಿಯೆಂದು ಅಣಕ ಮಾಡಿದ್ದವರ ಎದುರೇ ಸ್ಟಾರ್ ಆಗಿ ಬೆಳೆದಿದ್ದು ಹೇಗೆ ಕಲ್ಪನಾ?

By Shriram Bhat  |  First Published Aug 26, 2024, 6:22 PM IST

ನಟಿ ಕಲ್ಪನಾ ಅವರನ್ನು ಲಂಡನ್ ಹಾಗು ಅಮೆರಿಕದ ಎಲೆಜೆಬೆತ್ ಟೈಲರ್‌ಗೆ ನಟಿ ಕಲ್ಪನಾ ಅವರನ್ನು ಹೋಲಿಸುತ್ತಿದ್ದರು ಎನ್ನಲಾಗಿದೆ. ಕಲ್ಪನಾ ಅವರನ್ನು ಭಾರೀ ಸೌಂದರ್ಯವತಿ ಎನ್ನಲಾಗದಿದ್ದರೂ ಯಾರೂ ಸರಿಗಟ್ಟಲಾಗದ..


ಚಿತ್ರರಂಗವನ್ನು ಬಣ್ಣದ ಲೋಕ ಎಂದು ಕರೆಯುವುದು ಎಲ್ಲರಿಗೂ ಗೊತ್ತು. ಅಲ್ಲಿ ಮಿಂಚಬೇಕು ಎಂದರೆ ಮುಖದ ಬಣ್ಣವೇ ಪ್ರಧಾನ ಎನ್ನುತ್ತಾರೆ. ಅದರಲ್ಲೂ ನಟಿಯರಿಗಂತೂ ಅದು ಬಹಳಷ್ಟು ಹೆಚ್ಚಾಗಿಯೇ ಅನ್ವಯಿಸುತ್ತದೆ. ಆದರೆ ಆ ಮಾತನ್ನು ಬಹಳ ಕಾಲದ ಹಿಂದೆಯೇ ಕನ್ನಡದ ನಟಿಯೊಬ್ಬರು ಸುಳ್ಳು ಮಾಡಿದ್ದಾರೆ. ಅವರೇ ಮಿನುಗುತಾರೆ ಖ್ಯಾತಿಯ ನಟಿ ಕಲ್ಪನಾ. 

ನಟಿ ಕಲ್ಪನಾ (Minugutare Kalpana) ಅವರನ್ನು ಲಂಡನ್ ಹಾಗು ಅಮೆರಿಕದ ಎಲೆಜೆಬೆತ್ ಟೈಲರ್‌ಗೆ ನಟಿ ಕಲ್ಪನಾ ಅವರನ್ನು ಹೋಲಿಸುತ್ತಿದ್ದರು ಎನ್ನಲಾಗಿದೆ. ಕಲ್ಪನಾ ಅವರನ್ನು ಭಾರೀ ಸೌಂದರ್ಯವತಿ ಎನ್ನಲಾಗದಿದ್ದರೂ ಯಾರೂ ಸರಿಗಟ್ಟಲಾಗದ ನಟನೆಯ ಪ್ರತಿಭೆ ಅವರಲ್ಲಿತ್ತು ಎಂಬುದು ಅವರೊಂದಿಗೆ ಕೆಲಸ ಮಾಡಿದ್ದ ಹಲವು ನಿರ್ದೇಶಕರು ಹೇಳಿರುವ ಮಾತು ಎನ್ನಲಾಗಿದೆ. ತೆರೆಯ ಮೇಲೆ ನಟಿ ಕಲ್ಪನಾ ಅವರ ಅಭಿನಯ ನೋಡಿದವರಿಗೆ ಈ ಮಾತು ಸುಳ್ಳು ಎನ್ನಲಾಗದು. 

Latest Videos

undefined

ರಾಕಿಂಗ್ ಸ್ಟಾರ್ ಜತೆಯಾದ ಹಾಲಿವುಡ್ ಹೀರೋ, ಟಾಕ್ಸಿಕ್‌ಗೆ ಬ್ರಿಟಿಷ್ ಸೂಪರ್ ಸ್ಟಾರ್ ಎಂಟ್ರಿ!

ನಟಿ ಕಲ್ಪನಾ ಅವರದು ಸ್ವಲ್ಪ ಗೂನು ಬೆನ್ನು. ಮೊದಲಿಗೆ ನಟಿ ಕಲ್ಪನಾ ಅವರ ಕಾಲ್‌ಶೀಟ್ ಪಡೆಯಲು ಬಂದಿದ್ದ ನಿರ್ದೇಶಕರೊಬ್ಬರು ಅವರ ಗೂನು ಬೆನ್ನು ನೋಡಿ ಅಣಕ ಮಾಡಿದ್ದರಂತೆ. ಆದರೆ, ಅದೇ ನಟಿ ಕಲ್ಪನಾ ತಮ್ಮ ಅಸಾಧಾರಣ ನಟನಾ ಚಾತುರ್ಯದಿಂದ ಇಡೀ ಕರುನಾಡು ಮೆಚ್ಚುವಂತೆ ಬೆಳೆದರು. ಅಂದಿನ ಕಾಲದಲ್ಲಿ ಮೊದಲ ಸ್ಟಾರ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದರಿ ಕಲ್ಪನಾ. 

ಅಂದಿನ ಕಾಲದಲ್ಲಿ ನಟಿ ಕಲ್ಪನಾ ಅವರದು ತುಂಬಾ ಲಕ್ಷುರಿ ಲೈಫ್ ಎನ್ನಲಾಗಿದೆ. ಅವರು ಶೂಟಿಂಗ್‌ಗೆ ಬಂದು ಉಳಿದುಕೊಳ್ಳುತ್ತಿದ್ದುದು ಆಗಿನ ಕಾಲದಲ್ಲಿ ಸಾವಿರಾರು ರೂಪಾಯಿ ಬಾಡಿಗೆ ಕೊಡುತ್ತಿದ್ದ ಹೊಟೇಲ್ ರೂಮಿನಲ್ಲಿ ಎಂಬುದು ಗಮನಿಸಬೇಕಾದ ಸಂಗತಿ. ಅಂದಿನ ಸಾವಿರಾರು ರೂಪಾಯಿ ಇಂದು ಲಕ್ಷಕ್ಕೆ ಸಮ ಎಂಬುದು ಗೊತ್ತಿರುವ ವಿಷ್ಯ. ಅಷ್ಟೇ ಅಲ್ಲ, ನಟಿ ಕಲ್ಪನಾ ಕಾಲ್‌ಶೀಟ್‌ ಪಡೆಯಲು ನಿರ್ಮಾಪಕರು ಹರಸಾಹಸ ಪಡಬೇಕಿತ್ತು ಎನ್ನಲಾಗಿದೆ. 

ಡಾ ರಾಜ್ 'ಗಂಧದಗುಡಿ'ಗೆ ಬೆಂಗಳೂರಲ್ಲಿ ಪವನ್ ಕಲ್ಯಾಣ್ ಬಹುಪರಾಕ್, ಟಾಲಿವುಡ್‌ನಲ್ಲಿ ಸ್ಟಾರ್ ವಾರ್!

ಆದರೆ, ಅಂಥ ನಟಿ ಕಲ್ಪನಾ ಅವರು ತಮ್ಮ ಜೀವಿತದ ಅವಧಿಯಲ್ಲಿಯೇ ಯಶಸ್ಸನ್ನು ನೋಡಿದಂತೆ ಅವಸಾನವನ್ನೂ ನೋಡಿಬಿಟ್ಟರು. ಕೊನೆಕೊನೆಗೆ ನಟಿ ಕಲ್ಪನಾ ಅವರ ಬದುಕು ಅಕ್ಷರಶಃ ಬೀದಿಗೆ ಬಂದಂತಿತ್ತು ಅಂತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಸ್ಟಾರ್ ನಟಯಾಗಿ 'ಮಿನುಗುತಾರೆ' ಬಿರುದು ಹೊತ್ತು ಬದುಕಿದ್ದ ನಟಿ ಕಲ್ಪನಾ, ಕೊನೆಗಾಲದಲ್ಲಿ ಪಡಬಾರದ ಪಾಡು ಪಟ್ಟು ದುರಂತ ಅಂತ್ಯ ಕಂಡರು. ಅವರ ಸಾವು ಇಂದಿಗೂ ಕೂಡ ಕಣ್ಣೀರು ತರಿಸುವಂತೆ ಮಾಡುತ್ತದೆ. 

click me!