ರಾಕಿಂಗ್ ಸ್ಟಾರ್ ಜತೆಯಾದ ಹಾಲಿವುಡ್ ಹೀರೋ, ಟಾಕ್ಸಿಕ್‌ಗೆ ಬ್ರಿಟಿಷ್ ಸೂಪರ್ ಸ್ಟಾರ್ ಎಂಟ್ರಿ!

By Shriram Bhat  |  First Published Aug 26, 2024, 3:15 PM IST

ಟಾಕ್ಸಿಕ್​.. ಇಡೀ ದೇಶದಲ್ಲಿರೋ ಯಶ್​ ಫ್ಯಾನ್ಸ್ ಕಣ್ಣಿಟ್ಟು ಕೂತಿರೋ ಸಿನಿಮಾ. ಆದ್ರೆ ಯಶ್ ಮಾತ್ರ ಇಡೀ ಪ್ರಪಂಚದ ಸಿನಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟಿದ್ದಾರೆ. ಯಾಕಂದ್ರೆ ಟಾಕ್ಸಿಕ್ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ..


ಟಾಕ್ಸಿಕ್ ಶೂಟಿಂಗ್ ಶುರುವಾಗಿ ಕಳೆಯಿತು 15 ದಿನ. ರಾಕಿಂಗ್ ಸ್ಟಾರ್ ಯಶ್​ (Rocking Star Yash) ಈಗ ಟಾಕ್​ ಆಫ್​ ದಿನ ಟೌನ್. ಯಶ್​​ ಟಾಕ್ಸಿಕ್​​ ಶೂಟಿಂಗ್ ಟೇಕಾಫ್ ಮಾಡಿದ್ದಾರೆ. ಈ ಟಾಕ್ಸಿನ್​ ಬಗ್ಗೆ ಒಂದೊಂದೇ ಎಕ್ಸ್​ಕ್ಲ್ಯೂಸೀವ್ ಸುದ್ದಿಗಳು ಹೊರ ಬರುತ್ತಿವೆ. ಈಗ ಯಶ್​ ಬಳಗದಲ್ಲಿ ಇಂಗ್ಲೇಂಡ್​​ ನ ಸೂಪರ್​ ಸ್ಟಾರ್​​ ಒಬ್ರು ಮಿಂಚು ಹರಿಸುತ್ತಿರೋ ಸರ್​ಪ್ರೈಸ್ ವಿಷಯ ರಿವೀಲ್ ಆಗಿದೆ. ಹಾಗಾದ್ರೆ ಟಾಕ್ಸಿಕ್​​ ನಲ್ಲಿ ಮಿಂಚೋ ಆ ಬ್ರಿಟೀಷ್​ ಸೂಪರ್ ಸ್ಟಾರ್​ ಯಾರು..? 15 ದಿನದ ಚಿತ್ರೀಕರಣದಲ್ಲಿ ಏನೆಲ್ಲಾ ಕೆಲಸಗಳಾಗಿವೆ. ಈ ಎಲ್ಲ ಮಾಹಿತಿ ಇಲ್ಇದೆ ನೋಡಿ...

ಟಾಕ್ಸಿಕ್​.. ಇಡೀ ದೇಶದಲ್ಲಿರೋ ಯಶ್​ ಫ್ಯಾನ್ಸ್ ಕಣ್ಣಿಟ್ಟು ಕೂತಿರೋ ಸಿನಿಮಾ. ಆದ್ರೆ ಯಶ್ ಮಾತ್ರ ಇಡೀ ಪ್ರಪಂಚದ ಸಿನಿ ಪ್ರೇಕ್ಷಕರ ಮೇಲೆ ಕಣ್ಣಿಟ್ಟಿದ್ದಾರೆ. ಯಾಕಂದ್ರೆ ಟಾಕ್ಸಿಕ್ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಅಂತ ಯಶ್​ ಅವರೇ ಅನೌನ್ಸ್ ಮಾಡಿದ್ರು. 

Tap to resize

Latest Videos

undefined

ಟಾಕ್ಸಿಕ್ ಪ್ಯಾನ್ ವರ್ಲ್ಡ್​ ಕಂಟೆಟ್ ಮೂವಿ ಅಂತ ಯಶ್​ ಹಿಂಟ್ ಕೊಟ್ಟಿದ್ದೆ ತಡ. ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸಬಹುದು ಅಂತ ಲೆಕ್ಕಾಚಾರ ಹುಡುಕಾಟ ಶುರುವಾಗಿತ್ತು. ಟಾಕ್ಸಿಕ್ ಸೆಟ್​ನಲ್ಲಿ ಹಾಲಿವುಡ್​​ ಸ್ಟಾರ್ ನಟ ಅಕ್ಷಯ್ ಒಬೆರಾಯ್ ಕಾಣಿಸಿದ್ರು. ಈಗ ಇಂಗ್ಲೇಡ್​ನ ಸೂಪರ್​ ಸ್ಟಾರ್​ ಟಾಕ್ಸಿಕ್ ಅಡ್ಡದಲ್ಲಿ ಅಡ್ಡಾಡುತ್ತಿದ್ದಾರೆ. ಅವರೇ ಬ್ರಿಟೀಷ್ ನಟ ಡ್ಯಾರೆಲ್ ಡಿಸಿಲ್ವಾ. ಬ್ರಿಟೀಷ್ ಬಣ್ಣದ ಜಗತ್ತಿನ​ ಸೂಪರ್​ ಸ್ಟಾರ್​ ಡ್ಯಾರೆಲ್ ಡಿಸಿಲ್ವಾ

ಸ್ವಲ್ಪ ತಲೆ ಎತ್ತಿದ್ರೆ ಸಾಕು, ನಮ್ಮಮ್ಮ ಮತ್ತೆ ತಲೆ ಎತ್ತೋಕೇ ಬಿಡ್ತಿರ್ಲಿಲ್ಲ; ಪ್ರಶ್ನೆಗೆ ಸುಧಾರಾಣಿ ಉತ್ತರ..!

ಡ್ಯಾರೆಲ್ ಡಿಸಿಲ್ವಾ ಯೂರೋಪ್​​ನ ಸೂಪರ್ ಸ್ಟಾರ್. ಸಿನಿಮಾ. ಟಿವಿ ಶೋಗಳಲ್ಲಿ ಮಿಂಚೋ ಡ್ಯಾರೆಲ್ ಡಿಸಿಲ್ವಾ, 'A MILLION DAYS', 'WRATH OF MAN' ನಂತದ ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಈ ಸ್ಟಾರ್​ ಟಾಕ್ಸಿಕ್​ನಲ್ಲಿ ನಟಿಸುತ್ತಾರೆ ಅಂತ ಈ ಹಿಂದೊಮ್ಮೆ ಸುದ್ದಿಯಾಗಿತ್ತು. ಈಗ ಕನ್ನಡಿಗರ ಹಾಲಿವುಡ್​ ಕಸನು ಟಾಕ್ಸಿಕ್​​​​​ನಲ್ಲಿ ಯಶ್​ ಎದುರು ತೊಡೆ ತಟ್ಟುತ್ತಿರೋದು ಪಕ್ಕಾ ಆಗಿದೆ. ಅಷ್ಟೆ ಅಲ್ಲ ಶೂಟಿಂಗ್​​ನಲ್ಲೂ ಡ್ಯಾರೆಲ್​ ಡಿಸಿಲ್ವಾ ಭಾಗಿ ಆಗಿದ್ದಾರೆ. 

ಕನ್ನಡದ ಟಾಕ್ಸಿಕ್ ಮೇಲೆ ಹಾಲಿವುಡ್​​​​ ಮಂದಿ ಕಣ್ಣು ಬೀಳಬೇಕು ಅಂದ್ರೆ ಅಂತಹ ಫೇಮ್ ಇರೋ ಸ್ಟಾರ್​ಗಳು ಸಿನಿಮಾದಲ್ಲಿರಬೇಕು. ಅದೇ ಗುರಿಯಲ್ಲಿರೋ ಯಶ್​ ಸಿನಿ ಜಗತ್ತಿನ ಸ್ಟಾರ್​​ಗಳನ್ನ ಟಾಕ್ಸಿಕ್​​ಗೆ ಕರೆತರುತ್ತಿದ್ದಾರೆ. ಯಶ್​​ ಹಿಂದೊಮ್ಮೆ ಎಲ್ಲಾ ಚಿತ್ರರಂಗದವರು ನಮ್ಮ ಸ್ಯಾಂಡಲ್​ವುಡ್​ಗೆ ಬರುವಂತೆ ಮಾಡುತ್ತೇನೆ ಅಂದಿದ್ರು. ಅಂದು ಆಡಿದ ಮಾತನ್ನ ಇಂದು ಯಶ್​ ಪ್ರ್ಯೂ ಮಾಡಿದ್ದಾರೆ. ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಸಿನಿಮಾಗಳ ನಟ ನಟಿಯರೆಲ್ಲಾ ಯಶ್​ರ ಟಾಕ್ಸಿಕ್​ನಲ್ಲಿ ಮಿಂಚು ಹರಿಸುತ್ತಿದ್ದಾರೆ. 

ಕಳೆದ 15 ದಿನದ ಟಾಕ್ಸಿಕ್ ಶೂಟಿಂಗ್​ನಲ್ಲಿ ಬಾಲಿವುಡ್​ ಬ್ಯೂಟಿ ಕಿಯಾರಾ ಅಡ್ವಾನಿ, ಸೌತ್​ ಲೇಡಿ ಸೂಪರ್ ಸ್ಟಾರ್ ನಯನತಾರಾ, ಹುಮಾ ಕುರೇಶಿ, ತಾರಾ ಸುಥಾರಿ, ಹಾಟಿ ಶೃತಿ ಹಾಸನ್ ಟಾಕ್ಸಿಕ್​ ಹಾಜರಾಗಿದ್ದಾರೆ. 

ಟಾಕ್ಸಿಕ್​ ಎಷ್ಟು ಭಾಷೆಯಲ್ಲಿ ತೆರೆ ಕಾಣುತ್ತೆ ಗೊತ್ತಾ.? ಅಂದಾಜು 200 ಕೋಟಿ ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ಮೂಡಿ ಬರಲಿದೆ. ಯಶ್ ಹಾಗೂ ವೆಂಕಟ್ ಕೋನಂಕಿ ಜಂಟಿಯಾಗಿ ಇನ್ವೆಸ್ಟ್​ಮೆಂಟ್​ ಮಾಡಿದ್ದಾರೆ. ವಿಶೇಷ ಅಂದ್ರೆ ಎಲ್ಲಾ ಯುರೋಪ್​ ಭಾಷೆಯಲ್ಲಿ ಟಾಕ್ಸಿಕ್ ಮೂಡಿ ಬರಲಿದೆ. ಒಟ್ಟು 25 ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡೋ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. 

ಡಾ ರಾಜ್ 'ಗಂಧದಗುಡಿ'ಗೆ ಬೆಂಗಳೂರಲ್ಲಿ ಪವನ್ ಕಲ್ಯಾಣ್ ಬಹುಪರಾಕ್, ಟಾಲಿವುಡ್‌ನಲ್ಲಿ ಸ್ಟಾರ್ ವಾರ್!

ಟಾಕ್ಸಿಕ್ ಆ್ಯಕ್ಷನ್ ಧಮಾಕದ ಜೊತೆ 60-70ರ ದಶಕದ ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಬೆಂಗಳೂರಿನ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಅದ್ಧೂರಿ ಸೆಟ್ ನಿರ್ಮಿಸಿ ಚಿತ್ರೀಕರಣ ಮಾಡುತ್ತಿದ್ದಾರೆ. ಹಾಲಿವುಡ್ ತಂತ್ರಜ್ಞರಾದ ಜೆಜೆ ಪೆರ್ರಿ ಹಾಗೂ ಸ್ಟೀವ್ ಗ್ರಿಫಿನ್ ಕೂಡ ತಂಡದಲ್ಲಿದ್ದಾರೆ. ರಾಕಿಂಗ್ ಸ್ಟಾರ್ ಮತ್ತೊಮ್ಮೆ ಗ್ಯಾಂಗ್‌ಸ್ಟರ್ ಆಗಿ ಅಬ್ಬರಿಸಲಿದ್ದಾರೆ. ಆವತ್ತಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಸಾಕಷ್ಟು ಶ್ರಮವಹಿಸಿದೆ. ಭಾರೀ ಗ್ರಾಫಿಕ್ಸ್ ಕೂಡ ಚಿತ್ರದಲ್ಲಿ ಇರಲಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

click me!