ಬ್ಯಾಚುಲರ್​ ಚಿತ್ರಾನ್ನ ಮಾಡಿದ ಚಂದನ್ ಶೆಟ್ಟಿ: ಬೇಗ್​ ಮದ್ವೆಯಾಗಿ ಗುರೂ ಅಂತಿರೋ ಫ್ಯಾನ್ಸ್​

By Suchethana D  |  First Published Aug 26, 2024, 4:27 PM IST

ಗಾಯಕ ಚಂದನ್ ಶೆಟ್ಟಿಯರವರು ಚಿತ್ರಾನ್ನ ಮಾಡುತ್ತಿದ್ದು ಅದರ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಥರಹೇವಾರಿ ಕಮೆಂಟ್ಸ್​ ಹಾಕುತ್ತಿದ್ದಾರೆ.
 


 ಚಂದನ್ ಶೆಟ್ಟಿ ಅವರ ವಿಚ್ಛೇದನ ಆದಾಗಿನಿಂದಲೂ ಅವರ ಅಭಿಮಾನಿಗಳಿಗೆ ಒಂದೇ ಚಿಂತೆ. ಅವರು  ಯಾವಾಗ ಗುಡ್‌ನ್ಯೂಸ್‌ ಕೊಡುತ್ತಾರೆ ಎಂದೇ ಬಹುತೇಕ ಮಂದಿ ಕಾಯುತ್ತಿದ್ದಾರೆ. ಸದ್ಯ ತಮ್ಮ ಕರಿಯರ್‌ ಬಗ್ಗೆ ಗಮನ ಹರಿಸುತ್ತಿದ್ದೇನೆ. ಮದುವೆ ಎಲ್ಲಾ ಆಮೇಲೆ ಎಂದು ಇದಾಗಲೇ ಹಲವು ಬಾರಿ ಚಂದನ್‌ ಅವರು ಹೇಳಿದ್ದರೂ, ಅವರ ಅಭಿಮಾನಿಗಳಿಗೆ ಅವರನ್ನು ಮದುವೆ ಮಾಡಿಸುವವರೆಗೂ ಸಮಾಧಾನವಿಲ್ಲ. ಅಷ್ಟಕ್ಕೂ,  ನಿವೇದಿತಾ ಗೌಡ ಜೊತೆ ಚಂದನ್​ ಶೆಟ್ಟಿಯವರು  ಯಾವುದೇ ಗಲಾಟೆ, ಗೊಂದಲಕ್ಕೆ ಆಸ್ಪದ ಕೊಡದೇ ಡಿವೋರ್ಸ್​ ಪಡೆದುಕೊಂಡಿದ್ದರಿಂದ ಭಾರಿ ಶ್ಲಾಘನೆಗೆ ಒಳಗಾಗಿದ್ದಾರೆ.  ಚಂದನ್​  ಶೆಟ್ಟಿ ಪರವೇ ಬಹುತೇಕ ಮಂದಿ ನಿಂತಿರುವುದೂ ಸಾಕ್ಷಿಯಾಗಿದೆ.  ಡಿವೋರ್ಸ್​ ಬಳಿಕವೂ ಮಾಜಿ ಪತ್ನಿಯ ಬಗ್ಗೆ ಅದೇ ಗೌರವ ಉಳಿಸಿಕೊಂಡು, ನಿವೇದಿತಾರನ್ನು ಬಹುವಚನದಿಂದಲೇ ಸಂಬೋಧಿಸುತ್ತಾ ಆಕೆಯ ಬಗ್ಗೆ ಕಾಳಜಿ ತೋರುವುದರಿಂದಲೂ ಚಂದನ್​  ಶೆಟ್ಟಿ ಅಭಿಮಾನಿಗಳಿಗೆ ಮತ್ತಷ್ಟು ಆಪ್ತರಾಗುತ್ತಿದ್ದಾರೆ. ಡಿವೋರ್ಸ್ ಬಳಿಕ ಚಂದನ್‌ ಶೆಟ್ಟಿಯವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿ ಎನ್ನಬಹುದು.

ಇದೀಗ ಚಂದನ್​ ಅವರು ಚಿತ್ರಾನ್ನ ಮಾಡಿಕೊಳ್ತಿರೋ ವಿಡಿಯೋ ವೈರಲ್​ ಆಗಿದೆ. ಅದರಲ್ಲಿ ವಿಡಿಯೋ ಮಾಡ್ತಿರೋ ಕೀರ್ತಿಯವರು  ಒಹ್​ ಬ್ಯಾಚುಲರ್​ ಚಿತ್ರಾನ್ನನ್ನಾ  ಎಂದಿದ್ದಾರೆ. ಅದಕ್ಕೆ ಚಂದನ್​  ಶೆಟ್ಟಿ ಹೌದು ಹೌದು ಎಂದಿದ್ದಾರೆ. ಅದಕ್ಕೆ ಕೀರ್ತಿ ಅವರು ರಾತ್ರಿ ಉಳಿದ ಅನ್ನ ಇಂದಿನ ಪರಮಾನ್ನ ಎಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಯಾಕೋ ಬೇಸರ ಆದಂತಿದೆ. ಬೇಗ ಮದ್ವೆಯಾಗು ಗುರೂ ಎಂದಿದ್ದರೆ, ಮತ್ತೆ ಕೆಲವರು ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡ್ಬೇಡಿ, ಒಳ್ಳೆಯ ಹುಡುಗಿಯನ್ನು ಮದ್ವೆಯಾಗಿ ಅಂತನೂ ಹೇಳ್ತಿದ್ದಾರೆ. ಮತ್ತೆ ಕೆಲವರು ಬ್ಯಾಚುಲರ್​ ಲೈಫೇ ಬೆಸ್ಟ್​ ಕಣೋ ಅಂತಿದ್ದಾರೆ. ಒಟ್ಟಿನಲ್ಲಿ ಚಂದನ್​ ಶೆಟ್ಟಿ ಚಿತ್ರಾನ್ನ ಸೋಷಿಯಲ್​  ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. 

Tap to resize

Latest Videos

ಹೈ ಫೈ ಮೊಟ್ಟೆ ಫ್ರೈ ಮಾಡುತ್ತಲೇ ಬದುಕಿನ ಬಹು ದೊಡ್ಡ ನಿರ್ಧಾರ ತಿಳಿಸಿದ ಚಂದನ್​ ಶೆಟ್ಟಿ!

ಸದ್ಯ ಚಂದನ್‌ ಶೆಟ್ಟಿ ಅವರು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಈಚೆಗಷ್ಟೇ ಅವರ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರ ಚಂದನ್‌ ಶೆಟ್ಟಿ ಅವರಿಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೇ ರೀತಿ ಇವರ ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಬೇಕಿದೆ. ಅಷ್ಟಕ್ಕೂ ಚಂದನ್‌ ಶೆಟ್ಟಿಯವರು ಈ ರೀತಿ ರೀಲ್ಸ್‌ ಮಾಡುವುದು ಕಡಿಮೆ. ಅದರಲ್ಲಿಯೂ ಡಾನ್ಸ್‌ಗೆ ರೀಲ್ಸ್‌ ಮಾಡುವುದು ಕಡಿಮೆಯೇ. ಆದರೆ ಇವರ ಮಾಜಿ ಪತ್ನಿ ನಿವೇದಿತಾ ಮಾತ್ರ ದಿನವೂ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಮಾಡುತ್ತಲೇ ಇರುತ್ತಾರೆ. ಆದರೆ ವಿಚಿತ್ರ ಎಂದರೆ ನಿವೇದಿತಾ ಅವರಿಗೆ ಎಲ್ಲರೂ ಟ್ರೋಲ್‌ ಮಾಡಿದರೆ, ಚಂದನ್‌ ಶೆಟ್ಟಿ ಪರವೇ ಕಮೆಂಟ್ಸ್‌ ಸುರಿಮಳೆಯಾಗುತ್ತಿದೆ. 

ಈ ಹಿಂದೆ ಡಿವೋರ್ಸ್ ಕುರಿತು ಚಂದನ್ ಶೆಟ್ಟಿ ಮಾತನಾಡಿದ್ದರು.  ಪ್ರತಿಯೊಬ್ಬರ ಜೀವನದಲ್ಲಿಯೂ ಡಿವೋರ್ಸ್​ಗೆ, ಪತಿ-ಪತ್ನಿ ನಡುವೆ ಬಿರುಕು ಮೂಡಲು ಮೂರನೆಯ ವ್ಯಕ್ತಿಯೇ ಕಾರಣ. ಇದು 100 ಪರ್ಸೆಂಟ್​ ನಿಜ. ಆದರೆ ಆ ಮೂರನೆಯ ವ್ಯಕ್ತಿ ಯಾರು ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಆ ವ್ಯಕ್ತಿ ನಮ್ಮೊಳಗೇ ಇರಬಹುದು, ಅದು ನಮ್ಮ ಮನಸ್ಸೇ ಆಗಿರಬಹುದು.  ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಲ್ಲ ಎನ್ನುವ ಮೂಲಕ ತಮ್ಮ ಜೀವನದಲ್ಲಿ ಎಂಟ್ರಿ ಕೊಟ್ಟಿರೋ ಆ ಮೂರನೆಯ ವ್ಯಕ್ತಿ ಯಾರು ಎಂದು ಈ ಮೂಲಕ ಹೇಳಿದ್ದರು. ಇದಕ್ಕೆ ಇನ್ನಷ್ಟು ಎಕ್ಸ್​ಪ್ಲನೇಷನ್​ ಕೊಟ್ಟಿರೋ ಚಂದನ್​ ಅವರು, ನೋಡಿ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಎರಡೆರಡು ಶೇಡ್​ಗಳು ಇರುತ್ತವೆ. ಒಳಗೆ ಒಂದು, ಹೊರಗೆ ಒಂದು ಇರಬಹುದು ಅಥವಾ ಮನೆಯಲ್ಲಿ ಒಂದು, ಹೊರಗಡೆ ಒಂದು ಇರಬಹುದು. ಆ ಶೇಡ್​ನಲ್ಲಿ ಒಂದು ಮೂರನೆಯ ವ್ಯಕ್ತಿ ಆಗಿರಬಹುದು. ಪ್ರತಿಯೊಂದು ವಿಚ್ಛೇದನದ ಹಿಂದೆಯೂ ಇದೇ ಮೂರನೆಯ ವ್ಯಕ್ತಿ ಎಂಟ್ರಿಕೊಟ್ಟಾಗಲೇ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ ಎಂದಿದ್ದರು.

ನಿನ್ನ ಸೌಂದರ್ಯ ಭಲೆ ಭಲೆ ಎಂದು ಚಂದನ್‌ ಶೆಟ್ಟಿ ರೀಲ್ಸ್‌: ಗುಡ್‌ ನ್ಯೂಸಾ ಕೇಳ್ತಿದ್ದಾರೆ ಫ್ಯಾನ್ಸ್‌!

click me!